RCB ನೂತನ ಕ್ಯಾಪ್ಟನ್ ಆಗಿ ರಜತ್ ಪಾಟಿದಾರ್ ಆಯ್ಕೆ ಆಗಿದ್ದು, ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಿದ್ದಂತೆ ಮೊದಲ ಬಾರಿ ಮಾತನಾಡಿದ ರಜತ್, ಈ ವೇಳೆ ರಜತ್ ಪಾಟೀದಾರ್ ತಮ್ಮ ಮನದಾಳವನ್ನು ಹಂಚಿಕೊಂಡರು. ಅದೇ ವಿಡಿಯೋ ತುಣಕನ್ನು ಆರ್ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ತಮಗೆ ಕ್ಯಾಪ್ಟನ್ಸಿ ಸಿಕ್ಕ ಖುಷಿ ಹಂಚಿಕೊಂಡಿರುವ ಪಾಟೀದಾರ್, ‘‘ಹಾಯ್, ನಾನು ನಿಮ್ಮ ಕ್ಯಾಪ್ಟನ್ ರಜತ್ ಪಾಟಿದಾರ್. ಅನೇಕ ದಂತಕತೆಗಳು ಆರ್ಸಿಬಿ ತಂಡವನ್ನು ಮುನ್ನಡೆಸಿದ್ದಾರೆ. ಈಗ, ನಾನು ಕ್ಯಾಪ್ಟನ್ ಆಗಿರೋದಕ್ಕೆ ತುಂಬಾ ಹೆಮ್ಮೆ ಆಗುತ್ತಿದೆ. ನನ್ನ ನಾಯಕತ್ವ ವಿಧಾನವು ವಿಭಿನ್ನವಾಗಿದೆ. ನಾನು ತುಂಬಾ ಶಾಂತ ಸ್ವಭಾವದ ವ್ಯಕ್ತಿ. ಆದರೆ ಪರಿಸ್ಥಿತಿಗೆ ತಕ್ಕಂತೆ ಏನು ಬೇಕು? ಏನು ಬೇಡ ಅನ್ನೋದನ್ನು ಅರ್ಥ ಮಾಡಿಕೊಳ್ಳಬಲ್ಲೇ. ಭಾವನೆಗಳನ್ನು ಹೆಚ್ಚಾಗಿ ವ್ಯಕ್ತಪಡಿಸುವುದಿಲ್ಲ, ಹಾಗಂತ ಒತ್ತಡದ ಸಂದರ್ಭಗಳಲ್ಲಿ ಭಯಪಡಲ್ಲ. ಇದೇ ನನ್ನ ಶಕ್ತಿ!
ದೇಶ ಮತ್ತು ವಿದೇಶದ ಆಟಗಾರರು ನನ್ನ ತಂಡದಲ್ಲಿ ಇದ್ದಾರೆ. ಅವರಲ್ಲಿರುವ ಸಾಕಷ್ಟು ಮಂದಿ ನಾಯಕರಾಗಿದ್ದಾರೆ. ಅವರ ಅನುಭವಗಳು ನನ್ನ ನಾಯಕತ್ವಕ್ಕೆ ಸಹಾಯ ಮಾಡಲಿದೆ ಅಂತಾ ನಂಬಿದ್ದೇನೆ. ಕಳೆದ 3-4 ವರ್ಷಗಳಿಂದ ಆರ್ಸಿಬಿ ಅಭಿಮಾನಿಗಳು ಸಾಕಷ್ಟು ಪ್ರೀತಿ, ಬೆಂಬಲ ನೀಡಿದ್ದಾರೆ. ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಆರ್ಸಿಬಿ ಪರ ಆಡಲು ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ.
ನನ್ನ ಈ ಪ್ರಯಾಣ ಅದ್ಭುತವಾಗಿದೆ! ಕ್ರಿಕೆಟ್ ಬದುಕಲ್ಲಿ ಬಹಳಷ್ಟು ಏರಿಳಿತಗಳನ್ನ ಕಂಡಿದ್ದೇನೆ. 2021ರಲ್ಲಿ ಆರ್ಸಿಬಿಯನ್ನು ಸೇರಿಕೊಂಡೆ. ಅದು ನನ್ನ ಮೊದಲ ಐಪಿಎಲ್. ಆಡುವ ಅವಕಾಶ ಕೂಡ ಸಿಕ್ಕಿತ್ತು. ನಂತರ ನಡೆದ ಹರಾಜಿನಲ್ಲಿ ಯಾವ ತಂಡಕ್ಕೂ ಆಯ್ಕೆ ಆಗಲಿಲ್ಲ. ಇದರಿಂದ ಐಪಿಎಲ್ನಲ್ಲಿ ಎರಡನೇ ಅವಕಾಶ ಸಿಗುತ್ತದೆಯೋ? ಇಲ್ಲವೋ ಅಂತಾ ಬೇಸರಗೊಂಡಿದ್ದೆ. ಬೇಜಾರಿನಲ್ಲಿದ್ದ ನನಗೆ ಆರ್ಸಿಬಿ ಮತ್ತೆ ಬದಲಿ ಆಟಗಾರನಾಗಿ ಕರೆಯಿತು. ಅಂದೇ ನಾನು ನಿರ್ಧರಿಸಿದೆ. ಇಷ್ಟೆಲ್ಲ ನಡೆದ ಮೇಲೆ ಭವಿಷ್ಯದಲ್ಲಿ ಒಳ್ಳೆಯದು ಆಗಲಿದೆ ಅಂತಾ. ಆರ್ಸಿಬಿ ಸೇರಿದ ಮೇಲೆ ನನಗೆ ಒಳ್ಳಯದಾಗಿದೆ.
ಆರ್ಸಿಬಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.