ಬೆಂಗಳೂರು: ಮುಖ್ಯಮಂತ್ರಿಗಳು ದೀರ್ಘಾವಧಿಯ ಸಿಎಂ ಆಗಲೆಂದು ನಾನು ಹಾರೈಸ್ತೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ದೀರ್ಘಾವಧಿಯ ಸಿಎಂ ಎಂಬ ದಾಖಲೆ ಮಾಡುವ ಸಿದ್ದರಾಮಯ್ಯ ಅವರ ಇಚ್ಛೆ ವಿಚಾರವಾಗಿ ಪ್ರತಿಕ್ರಿಯೇ ನೀಡಿದ ಅವರು, ಮುಖ್ಯಮಂತ್ರಿಗಳು ದೀರ್ಘಾವಧಿಯ ಸಿಎಂ ಆಗಲೆಂದು ನಾನು ಹಾರೈಸ್ತೇನೆ.
ಸಿದ್ದರಾಮಯ್ಯ ದಾಖಲೆ ಮಾಡಲಿ ಅಂತ ನಾನೂ ಹಾರೈಸ್ತೇನೆ. ಅವರು ಈ ಐದು ವರ್ಷ ಆಡಳಿತ ಪೂರ್ಣಗೊಳಿಸಿದರೆ ಸಹಜವಾಗಿ ಅದು ದಾಖಲೆ ಆಗಲಿದೆ. ಶಾಸಕರು ಸಿಎಲ್ಪಿ ನಾಯಕರಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದ್ರು. ಆ ಸಂದರ್ಭದಲ್ಲಿ ನಮಗೆ ಹೈಕಮಾಂಡ್ನವ್ರು ಎರಡೂವರೆ ವರ್ಷ ಅಧಿಕಾರ ಅಂತೇನೂ ಹೇಳಿರಲಿಲ್ಲ. ಹಾಗಾಗಿ ನಾವೆಲ್ಲ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರ್ತಾರೆ ಅಂತಾನೇ ಭಾವಿಸಿದ್ದೇವೆ ಎಂದರು.
ಉದಯಗಿರಿ ಗಲಭೆ ಪ್ರಕರಣವಾಗಿ ಮಾತನಾಡಿ, ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ ಹತ್ತು ಆರೋಪಿಗಳ ಬಂಧನ ಆಗಿದೆ. ಸಿಸಿಟಿವಿಯಲ್ಲಿ ಪರಿಶೀಲಿಸಿ ಕಲ್ಲು ಹೊಡೆದವರು ಯಾರು ಅಂತ ಪತ್ತೆ ಹಚ್ಚಿ ಬಂಧಿಸ್ತಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.