ಗದಗ : ಕಿರು ಮತ್ತು ಸಣ್ಣ ಸಾಲ ಬಲವಂತ ಕ್ರಮಗಳ ಪ್ರತಿಬಂಧಕ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಸಿಕ್ಕಿದ್ದು, ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಕ್ಕೆ ಕಾನೂನು ಎಚ್ ಕೆ ಪಾಟೀಲ್ ರಾಜ್ಯಪಾಲರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು, ಬಡವರ ಪರ ಜನ ಪರ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿದ್ದಾರೆ. ಇಂಥಹ ಜನ ಪರ ಕಾನೂನು ಅವಶ್ಯ ಇದೆ. ಸಾಲ ವಸೂಲಿ ಕಿರುಕುಳ, ಬಡ್ಡಿ ಶೋಷಣೆ ದಂಧೆ ನಿಲ್ಲಿಸಬೇಕೆಂಬುದು ಸರ್ಕಾರದ ಪ್ರಯತ್ನ. ಸುಗ್ರೀವಾಜ್ಞೆ ಜಾರಿಗೆ ತರಲು ಚಿಂತನ ಮಂಥನ ಮಾಡಿ ಜನ ಪರ ಕಾನೂನು ತರಲಾಗಿದೆ. ಸಿಎಂ ಮಾರ್ಗದರ್ಶನದ ಜೊತೆಗೆ ಮುಖ್ಯಕಾರ್ಯದರ್ಶಿಗಳು ಶ್ರಮ ಪಟ್ಟಿದ್ದಾರೆ ಅವರಿಗೆ ಅಭಿನಂದನೆಗಳು ಎಂದರು.
ರೈತರು, ಮಹಿಳೆಯರು, ಕೃಷಿ ಕಾರ್ಮಿಕರ, ಬೀದಿ ಬದ ವ್ಯಾಪಾರಿಗಳು ಹೀಗೆ ಸಮಾಜದ ದುರ್ಬಲ ವರ್ಗಕ್ಕೆ ಸಹಾಯವಾಗಲು ಸುಗ್ರೀವಾಜ್ಞೆಹೊರಡಿಸಲಾಗಿದೆ. ಅಡ ಇಟ್ಟುಕೊಳ್ಳುವುದು, ವ್ಯಕ್ತಿಗಳ ಕೂಡಿಹಾಕುವುದನ್ನ ಉಲ್ಲೇಖಿಸಿಲಾಗುದೆ. ನೂತನ ಕಾನೂನು ಜನರಿಗೆ ಕಿರುಕುಳ ಕೊಡುವವರಿಗೆ ಬಗ್ಗು ಬಡಿಯಲು ಸಹಕಾರಿಯಾಗಿದೆ. ಬಡ್ಡಿ, ಚಕ್ರಬಡ್ಡಿ ಹಾಕುವುದು, ಅವಮಾನ ಮಾಡುವುದು ಹೊಡೆಯುವು ನಡೆದಿತ್ತು. ಈ ಹಿಂದಿನ ಕಾನೂನುನಲ್ಲಿ ಬಲ ಇಲ್ಲ ಎನ್ನುವ ಕಾರಣಕ್ಕೆ ಘಟನೆಗಳು ನಡೆದಿದ್ದವು. ಮಾನಸಿಕ ಆಘಾತ, ಆತ್ಮಹತ್ಯೆ ಪ್ರಕರಣಗಳನ್ನ ಗಮನಿಸಿ ಕಾನೂನು ತರಲಾಗಿದೆ ಎಂದರು.