ಬೆಳಗಾವಿ : ನಡು ರಸ್ತೆಯಲ್ಲೇ ಇಬ್ಬರು ಮಹಿಳೆಯರು ಹೊಡೆದಾಡಿಕೊಂಡ ಘಟನೆ ಬೆಳಗಾವಿಯ ಕೊಲ್ಲಾಪುರ ಸರ್ಕಲ್ ನಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿ ಸದಸ್ಯೆ ವಾಣಿಶ್ರೀಯ ಪತಿ ಬಸವರಾಜ ಸೀತಮನಿ ಎಂಬಾತ ಕೆಲ ದಿನಗಳ ಹಿಂದೆ ಪರಸ್ತ್ರೀ ಜೊತೆಗೆ ಓಡಿ ಹೋಗಿದ್ದ.
ಮಾರಿಹಾಳ ಗ್ರಾಮದ ಮಾಸಾಬಿ ಸೈಯದ್ ಎಂಬಾಕೆ ಬಸವರಾಜ ಸೀತಮನಿ ಜೊತೆಗೆ ಓಡಿ ಹೋಗಿದ್ದು, ಈ ಬಗ್ಗೆ ವಾಣಿಶ್ರೀ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದರು. ಎರಡು ಮಕ್ಕಳನ್ನ ಬಿಟ್ಟು ಓಡಿ ಹೋಗಿದ್ದ ಈ ಜೋಡಿ,ಮತ್ತೆ ಎರಡು ತಿಂಗಳ ಬಳಿಕ ಬೆಳಗಾವಿಗೆ ವಾಪಸ್ ಆಗಿದ್ದು, ಕಳೆದ ಬುಧವಾರ ರಾತ್ರಿ ವಾಣಿಶ್ರೀ ಕೈಯಲ್ಲಿ ತಗಲಾಕಿಕೊಂಡಿದ್ದಾರೆ. ಈ ವೇಳೆಮಾಸಾಬಿಯನ್ನ ಪ್ರಶ್ನೆ ಮಾಡಿದ್ದಕ್ಕೆ ವಾಣಿಶ್ರೀ ಮೇಲೆ ಪತಿ ಬಸವರಾಜ್ ಹಲ್ಲೆ ಮಾಡಿದ್ದಾನೆ. ಇದರಿಂದ ವಾಣಿಶ್ರೀ ಕೋಪಗೊಂಡು, ಮಾಸಾಬಿ ಜುಟ್ಟು ಹಿಡಿದುಕೊಂಡು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ನಡು ರಸ್ತೆಯಲ್ಲಿ ಹೊಡೆದಾಡಿಕೊಳ್ಳುತ್ತಿದ್ದ ಇಬ್ಬರನ್ನು ಸ್ಥಳೀಯರು ಸಮಾಧಾನಪಡಿಸಿದ್ದಾರೆ.