ವಿಜಯಪುರ : ಸತೀಶ್ ರಾಠೋಡ್ ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಆರೋಪಿ ಸುರೇಶ್ ರಾಠೋಡ್ ಮೇಲೆ ಫೈರಿಂಗ್ ನಡೆಸಲಾಗಿದ್ದು, ಆತನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಳೆದ ಜ.28 ರಂದು ತಿಕೋಟಾ ತಾಲೂಕಿನ ಅರಕೇರಿಯ ಮಾನವರದೊಡ್ಡಿ ಬಳಿ ಕೊಲೆ ನಡೆದಿತ್ತು. ಸತೀಶ್ ರಾಥೋಡ್ ಮೇಲೆ ರಮೇಶ್ ಚೌವ್ಹಾಣ ಹಾಗೂ ಇತರರು ಸೇರಿದಂತೆ ಗುಂಡು ಹಾರಿಸಿ, ಬಳಿಕ ಚಾಕೂನಿಂದ ಇರಿದು ಕೊಲೆ ಮಾಡಿದ್ದರು. ಘಟನೆಯಲ್ಲಿ ರಮೇಶ ಚವ್ಹಾಣ ಸೇರಿದಂತೆ ಈಗಾಗಲೇ ಐವರ ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ಸತೀಶ್ ಕೊಲೆಗೆ ಸುರೇಶ್ ರಾಥೋಡ್ ಕಂಟ್ರೀ ಪಿಸ್ತೂಲ್ ಪೂರೈಕೆ ಮಾಡಿದ್ದರು. ಮಧ್ಯಪ್ರದೇಶದಿಂದ ಕಂಟ್ರೀ ಪಿಸ್ತೂಲ್ ತಂದು ಕೊಟ್ಟಿದ್ದ ಎನ್ನಲಾಗಿದೆ. ಘಟನೆ ಬಳಿಕ ಪರಾರಿಯಾಗಿದ್ದ ಸುರೇಶ್ ನಗರದ ಹೊರ ಭಾಗದಲ್ಲಿ ಅಥಣಿ ರಸ್ತೆಯ ಬಳಿ ಅಡಗಿ ಕುಳಿತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿಜಯಪುರ ಗ್ರಾಮೀಣ ಪೊಲೀಸರು ಆತನ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಸುರೇಶ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಸುರೇಶ್ ಚಾಕುವಿನಿಂದ ಇರಿದ ಪರಿಣಾಮ ಪಿಎಸೈ ವಿನೋದ ದೊಡಮನಿ ಹಾಗೂ ಪೊಲೀಸ್ ಕಾನ್ಸಟೇಬಲ್ಗೆ ಗಾಯಗಳಾಗಿದ್ದು , ಅವರನ್ನು ಸಹ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಆಸ್ಪತ್ರೆಗೆ ಎಸ್ ಪಿ ಲಕ್ಷ್ಮಣ್ ನಿಂಬರಗಿ ಹಾಗೂ ಎ ಎಸ್ ಪಿ ರಾಮನಗೌಡ ಹಟ್ಟಿ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿದ್ದಾರೆ.