ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಮದುವೆ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ. ಈಗಾಗಲೇ ಎರಡು ಮದುವೆಯಾಗಿ ಡಿವೋರ್ಸ್ ಪಡೆದುಕೊಂಡಿರುವ ರಾಖಿ ಇದೀಗ ಮೂರನೇ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ರಾಖಿ ಸಾವಂತ್ ತಮ್ಮ ಮೂರನೇ ಮದುವೆಯ ಬಗ್ಗೆ ಸುದ್ದಿಯಲ್ಲಿದ್ದಾರೆ. ಪಾಕಿಸ್ತಾನಿ ವ್ಯಕ್ತಿಯನ್ನು ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ರಾಖಿ ಸಂದರ್ಶನವೊಂದರಲ್ಲಿ ತಾನು ಮದುವೆಗೆ ಸಿದ್ಧ ಎಂದು ಹೇಳಿದ್ದರು.
ರಾಖಿಗೆ ಪಾಕಿಸ್ತಾನದಿಂದ ಮದುವೆ ಪ್ರಸ್ತಾಪಗಳು ಬರುತ್ತಿವೆ. ದೋಡಿ ಖಾನ್ ಮೊದಲು ಅವಳನ್ನು ಮದುವೆಯಾಗುವಂತೆ ಕೇಳಿದನು. ಆದರೆ ಆ ಬಳಿಕ ನಿರಾಕರಿಸಿದ್ದನು. ಇದೀಗ ರಾಖಿ ಸಾವಂತ್ ಗೆ ಪಾಕಿಸ್ತಾನಿ ಧರ್ಮಗುರು ಅಬ್ದುಲ್ ಕ್ವಾವಿ ಪ್ರಪೋಸ್ ಮಾಡಿದ್ದಾರಂತೆ. ಆದರೆ ಅಬ್ಲುಲ್ ಕ್ವಾವಿ ಅವರನ್ನು ಮದುವೆಯಾಗಲು ರಾಖಿ ಸಾವಂತ್ ಕೆಲವು ಷರತ್ತುಗಳನ್ನು ಹಾಕಿದ್ದಾರಂತೆ.
ನಾನು 7-8 ಕೋಟಿ ಸಾಲ ಮಾಡಿದ್ದೇನೆ.. ಯಾವುದೇ ಷರತ್ತುಗಳಿಲ್ಲದೆ ಈ ಸಾಲವನ್ನು ತೀರಿಸಿದರೆ ಮದುವೆಗೆ ಸಿದ್ಧ ಅಂತ ರಾಖಿ ಒಪ್ಪಿಕೊಂಡಿದ್ದಾಳೆ.. ಮುಫ್ತಿ ಅಬ್ದುಲ್ ಅವರಿಗೆ 58 ವರ್ಷ ವಯಸ್ಸು. ಅವರು ವಿವಾಹಿತರು ಮತ್ತು ಅಜ್ಜ ಕೂಡ. “ಮನುಷ್ಯ ಮತ್ತು ಕುದುರೆ ಎಂದಿಗೂ ವಯಸ್ಸಾಗುವುದಿಲ್ಲ” ಎಂದು ರಾಖಿ ಹೇಳಿದ್ದಾಳೆ.