ಅವರಿಬ್ಬರೂ ಪ್ರೀತಿ ಮಾಡ್ತಿದ್ರು ಹುಡುಗಿಯ ಪ್ರೀತಿ ವಿಚಾರ ಮನೆಯವರಿಗೆ ಗೊತ್ತಾಗಿತ್ತು, ಹಾಗಾಗಿ ಹುಡುಗನ ಕುಟುಂಬವನ್ನು ಕರೆದು ರಾಜಿ ಪಂಚಾಯಿತಿ ಮಾಡಿದ್ರು ,ರಾಜಿ ಪಂಚಾಯಿತಿಯಲ್ಲಿ ಅದೇ ಹುಡುಗನನ್ನ ಮದುವೆ ಅಗುವುದಾಗಿ ಹಠ ಹಿಡಿದಿದ್ಲು,ರಾಜಿ ಪಂಚಾಯಿತಿ ಮುಗಿಸಿ ಮಗಳನ್ನ ಬೈಕ್ ನಲ್ಲಿ ಮನಗೆ ಕರೆದುಕೊಂಡು ಹೋಗುವಾಗ ಕೆರೆಯಲ್ಲಿ ಬಿದ್ದಿದ್ದಾರೆ .ಅದರೆ ಮಗಳನ್ನು ರಕ್ಷಣೆ ಮಾಡಬೇಕಾದ ತಂದೆ ನೇರವಾಗಿ ಪೊಲೀಸ್ ಠಾಣೆಗೆ ಹೋಗಿದ್ದಾರೆ ಆದ್ರೆ ಮಗಳು ಸಾವಿನ ಮನೆಗೆ ಸೇರಿದ್ದಾಳೆ, ಹೀಗಾಗಿ ಸಾವಿನ ಸುತ್ತಾ ಅನುಮಾನದ ಹುತ್ತ ಶುರುವಾಗಿದೆ ,ಅಷ್ಟಕ್ಕೂ ಏನು ಈಸ್ಟೋರಿ ಅಂತೀರಾ ನೀವೇ ನೋಡಿ..
ಹೀಗೆ ಫೋಟೋದಲ್ಲಿ ಕಾಣ್ತಿದ್ದಾಳಲ್ಲ ಈಕೆಯ ಹೆಸರು ಸಹನ ಅಂತ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹುಸ್ಕೂರು ಗ್ರಾಮದ ಹಾರೋಹಳ್ಳಿ ನಿವಾಸಿ.. ರಾಮಮೂರ್ತಿ ಮತ್ತು ಕಲ್ಪನಾ ದಂಪತಿಗಳ ಪುತ್ರಿ. ಇನ್ನು ಮೃತ ಸಹನ ಮಹೇಂದ್ರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ತಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ತಾಯಿ ಮನೇಲಿದ್ದರೂ ಇತ್ತೀಚೆಗೆ ಒಂದು ವರ್ಷದ ಹಿಂದೆ ಸ್ನೇಹಿತರ ಪರಿಚಯದ ಮೂಲಕ ನಿತಿನ್ ಎಂಬಾತ ನನ್ನ ಒಂದು ವರ್ಷದಿಂದ ಪ್ರೀತಿ ಮಾಡುತ್ತಿದ್ದರು.
10th, PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ..! ಇಂದೇ ಅಪ್ಲೈ ಮಾಡಿ
ಇದೇ ವಿಚಾರ ಕಳೆದ ಎರಡು ದಿನಗಳಿಂದ ಮನೆಗೆ ಪ್ರೀತಿ ವಿಚಾರ ಗೊತ್ತಾಗಿತ್ತು ಹಾಗಾಗಿ ಹುಸ್ಕೂರ್ ಪಾಪಣ್ಣ ಮನೆಯಲ್ಲಿ ರಾಜಿ ಪಂಚಾಯಿತಿ ಮಾಡಲಾಗಿತ್ತು, ರಾಜಿ ಪಂಚಾಯತಿಯಲ್ಲಿ ಸಹನ ಅದೇ ಹುಡುಗನನ್ನ ಮದುವೆಯಾಗುವುದಾಗಿ ಹಠ ಹಿಡಿದಿದ್ಲು ಬುದ್ಧಿ ಮಾತು ಹೇಳಿ ಕಳಿಸಿದ್ರು ಇನ್ನು ತಂದೆ ಕೂಡ ರಾಜಿ ಪಂಚಾಯಿತಿಯಲ್ಲಿ ಎರಡು ದಿನಗಳ ಕಾಲ ಟೈಮ್ ಬೇಕು ಅಂತ ಅಲ್ಲಿಂದ ಎದ್ದು ಬಂದಿದ್ದರು , ಅಲ್ಲಿಂದ ಹುಸ್ಕೂರ್ನಿಂದ ಹಾರೋಹಳ್ಳಿ ಕಡೆಗೆ ಕೆರೆಯ ಮೇಲೆ ಬರುವಾಗ ತಂದೆ ಮಗಳು ಕೆರೆಯಲ್ಲಿ ಬಿದ್ದಿದ್ದಾರೆ ಕೆರೆಯಲ್ಲಿ ಬಿದ್ದು ತಂದೆ ಬದುಕಿ ಮಗಳು ಸಾವನ್ನಪ್ಪಿದ್ದಾಳೆ.
ಇನ್ನು ಮಗಳ ಪ್ರೀತಿ ವಿಚಾರ ಮನೆಯಲ್ಲಿ ಗೊತ್ತಾಗಿದ್ದು ಇದೇ ವಿಚಾರಕ್ಕೆ ಮನೆಯಲ್ಲಿ ಗಲಾಟೆ ನಡೆದಿದೆ ಮಗಳನ್ನು ಅಕ್ಕನ ಮಗನಿಗೆ ಕೊಡಲು ತಂದೆ ರಾಮಮೂರ್ತಿ ಮುಂದಾಗಿದ್ದ ಈ ವಿಚಾರಕ್ಕೆ ಮಗಳು ಮತ್ತು ತಂದೆಗೆ ಜಗಳ ನಡೆದಿತ್ತು. ಅದಲ್ಲದೆ ತಾನು ಪ್ರೀತಿ ಮಾಡುತ್ತಿದ್ದ ಹುಡುಗ ನಿತಿನ್ಗು ತಿಳಿಸಿದ್ಲು ಹಾಗಾಗಿ ರಾಜಿ ಪಂಚಾಯಿತಿ ಮಾಡಲು ಹುಸ್ಕೂರು ಪಾಪಣ್ಣ ಮನೆಗೆ ಬಂದಿದ್ದರು. ರಾಜಿ ಪಂಚಾಯಿತಿ ಮುಗಿಸಿ ಮಗಳನ್ನ ಬೈಕ್ ನಲ್ಲಿ ಕರೆದಕೊಂಡು ಹೋಗುವಾಗ ತಂದೆ ಬೈಕ್ ಸಮೇತ ಕೆರೆಗೆ ಬಿದ್ದು ಮಗಳು ಅನುಮಾನದ ರೀತಿಯಲ್ಲಿ ಸಾವಪ್ಪಿದ್ದಾಳೆ. ಇದರಿಂದ ಪೊಲೀಸ್ರಿಗೆ ಅನುಮಾನ ವ್ಯಕ್ತಿಯಾಗಿದೆ.
ಇನ್ನೂ ಉನ್ನತ ಮೂಲಗಳಿಂದ ತಂದೆಯೇ ದಡದಲ್ಲಿದ ಮಗಳನ್ನು ಕತ್ತಿನ ಮೇಲೆ ತುಳಿದು ಸಾಯಿಸಿದ್ದಾನೆ ಕೆರೆಯಲ್ಲಿ ಬಿದ್ದು ಸತ್ತಿದಾಳೆ ಅಂತ ನಾಟಕ ಮಾಡಿದ್ದಾನೆ.. ಕೆರೆಯಲ್ಲಿ ಬಿದ್ದಾಗ ರಕ್ಷಣೆ ಮಾಡುವ ಬದಲು ನೇರವಾಗೇ ಠಾಣೆಗೆ ಹೋಗಿದ್ದಾನೆ ಅಲ್ಲದೆ ನನಗೆ ಸುಸ್ತಾಗಿ ಕೆರೆಗೆ ಬಿಟ್ಟಿದ್ದೆ ಈಜು ಹೊಡೆದು ಬಂದು ಬದುಕಿದ್ದೇನೆ ಅಂತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಇದರಿಂದ ಪೊಲೀಸರಿಗೆ ಸಾಕಷ್ಟು ಸಂಶಯ ವ್ಯಕ್ತವಾಗಿದೆ ಇನ್ನೂ ರಾಮಮೂರ್ತಿ ವಶಕ್ಕೆ ಪಡೆದು ಎಲ್ಲಾ ಯಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಸದ್ಯ ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.. ಇನ್ನು ಬದುಕಿ ಬಳಬೇಕಾದ ಮಗಳು ಸಾವನ್ನಪ್ಪಿರೋದು ಮಾತ್ರ ವಿಪರ್ಯಾಸವೇ ಸರಿ..