ಹಣೆಗೆ ವಿಭೂತಿ ಅಥವಾ ಭಸ್ಮವನ್ನು ಹಚ್ಚಿಕೊಳ್ಳುವುದು ಸಾಮಾನ್ಯ. ದೇವಾಲಯದಲ್ಲಿ ಪೂಜಾರಿಗಳೂ ಹಣೆಯ ಮೇಲೆ ಮೂರು ಸಾಲಿನ ಭಸ್ಮವನ್ನು ಹಚ್ಚಿಕೊಂಡಿರುತ್ತಾರೆ.ಮಾತ್ರವಲ್ಲದೇ ಶಿವಶರಣರು, ಸ್ಮಾರ್ತ ಬ್ರಾಹ್ಮಣರು ಹಾಗೂ ಲಿಂಗಾಯಿತರೂ ಹಣೆಗೆ ವಿಭೂತಿಯನ್ನು ಹಚ್ಚುತ್ತಾರೆ. ಭಸ್ಮದ ರೂಪದಲ್ಲಿರುವ ವಿಭೂತಿಯನ್ನು ಹಣೆಯ ಮೇಲೆ ತೋರು ಬೆರಳು, ಮಧ್ಯ ಹಾಗೂ ಉಂಗುರ ಬೆರಳುಗಳ ಸಹಾಯದಿಂದ ಅನ್ವಯಿಸಲಾಗುತ್ತದೆ.
ಸಾಂಸ್ಕೃತಿಕ ನಗರಿಯಲ್ಲಿ ಗಲಭೆ ಕೇಸ್: ಎಫ್ಐಆರ್ನಲ್ಲಿ ಸ್ಫೋಟಕ ಅಂಶ ಉಲ್ಲೇಖ!
ನಮ್ಮ ಪುರಾಣ ಹಾಗೂ ಶಾಸ್ತ್ರಗಳಲ್ಲಿ ನಾವು ಹಣೆಗೆ ಹಚ್ಚುವ ವಿಭೂತಿಗೆ ವಿಶೇಷವಾದ ಸ್ಥಾನಮಾನವಿದೆ. ಬಹಳಷ್ಟು ಪವಿತ್ರ ಎಂದು ಇದನ್ನು ಭಾವಿಸಲಾಗುತ್ತದೆ ಹಾಗೂ ಪೂಜೆಯ ಸಂದರ್ಭಗಳಲ್ಲಿ ದೇವರಿಗೂ ಹಚ್ಚಿ ಜನರು ತಾವು ಕೂಡ ಹಚ್ಚಿಕೊಳ್ಳುತ್ತಾರೆ. ವಿಭೂತಿಯನ್ನು ಒಂದು ವಿಶೇಷವಾದ ಮರ ಅಥವಾ ಕಟ್ಟಿಗೆ ಉಪಯೋಗಿಸಿ ತಯಾರು ಮಾಡುತ್ತಾರೆ.
ಇದರ ಜೊತೆಗೆ ಅಪ್ಪಟ ಹಸುವಿನ ತುಪ್ಪ, ಕೆಲವು ಗಿಡಮೂಲಿಕೆಗಳು, ಕೆಲವು ಕಾಳುಗಳು ಮತ್ತು ಇನ್ನಿತರ ಶುದ್ಧವಾದ ಪದಾರ್ಥಗಳಿಂದ ತಯಾರು ಮಾಡುತ್ತಾರೆ. ಹಣೆಯ ಮೇಲೆ ವಿಭೂತಿ ಧರಿಸುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯ ಮತ್ತು ನಮ್ಮ ಭಾರತದಲ್ಲಿ ಎಲ್ಲಾ ಕಡೆ ಇದು ಸಾಮಾನ್ಯ.
ವಿಭೂತಿಯನ್ನು ಧರಿಸುವುದರಿಂದ ಕೆಟ್ಟ ಶಕ್ತಿಗಳಿಂದ ರಕ್ಷಣೆ ಸಿಗುತ್ತದೆ ಎಂಬ ಮಾತಿದೆ. ಹಣೆಯ ಮೇಲೆ ಶ್ರೀಗಂಧದ ಬೊಟ್ಟು ಇಟ್ಟುಕೊಳ್ಳುವುದು ಕೂಡ ವಿಭೂತಿ ಹಚ್ಚುವುದಕ್ಕೆ ಸಮ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
ಮುಖದಲ್ಲಿ ಇರುವಂತಹ ಕಣ್ಣು ಹುಬ್ಬುಗಳ ನಡುವಿನ ಜಾಗ ನರಮಂಡಲಗಳು ಕೂಡಿಕೊಂಡಿರುವ ಜಾಗವಾಗಿದೆ. ಹಾಗಾಗಿ ಈ ಭಾಗದಲ್ಲಿ ಸ್ವಲ್ಪ ಒತ್ತಿ ಮಸಾಜ್ ಮಾಡುವುದರಿಂದ, ತಲೆನೋವು ಸಂಪೂರ್ಣವಾಗಿ ಮಾಯವಾಗುತ್ತದೆ.
ಹಣೆಯ ಮೇಲ್ಭಾಗದಲ್ಲಿ ವಿಭೂತಿ ಅಥವಾ ಭಸ್ಮ ಹಚ್ಚುವುದರಿಂದ ಸಾಮಾನ್ಯವಾಗಿ ತಲೆ ನೋವಿನ ಸಮಸ್ಯೆಯಿಂದ ದೂರವುಳಿಯಬಹುದು ಎಂಬ ಮಾತಿದೆ. ವಿಪರೀತ ಬಿಸಿಲಿಗೆ ತಲೆನೋವು ಕಂಡುಬರುವ ಸಮಸ್ಯೆ ಇರುವುದಿಲ್ಲ. ಇದರ ಜೊತೆಗೆ ಇನ್ನೂ ಕೆಲವು ಆರೋಗ್ಯ ಪ್ರಯೋಜನಗಳು ವಿಭೂತಿ ಹಚ್ಚುವುದರಿಂದ ಸಿಗುತ್ತವೆ ಎಂದು ಹೇಳಬಹುದು.
ಹಣೆಯ ಮಧ್ಯಭಾಗದಲ್ಲಿ ಶಿವನಿಗೆ ಮೂರನೇ ಕಣ್ಣು ಇರುವುದು ನಮಗೆಲ್ಲ ಗೊತ್ತೇ ಇದೆ. ಪುರಾಣಗಳಲ್ಲಿ ಹಾಗೂ ವೈಜ್ಞಾನಿಕವಾಗಿ ಈ ಮೂರನೇ ಕಣ್ಣನ್ನು ಸಬ್ ಕಾನ್ಶಿಯಸ್ ಮೈಂಡ್ ಎಂದು ಕರೆಯುತ್ತಾರೆ.
ಹಲವು ಆಲೋಚನೆಗಳು ಬರಲು ಮತ್ತು ನಮ್ಮಿಂದ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿಕೊಳ್ಳಲು ಇದು ಸಹಾಯವಾಗುತ್ತದೆ.
ಪವಿತ್ರವಾದ ವಿಭೂತಿಯನ್ನು ಈ ಭಾಗದಲ್ಲಿ ಹಚ್ಚುವುದರಿಂದ ನಮ್ಮ ದೇಹಕ್ಕೆ ನಕಾರಾತ್ಮಕ ಶಕ್ತಿ ಬರುವ ಸಾಧ್ಯತೆ ತಪ್ಪುತ್ತದೆ. ಇದರಿಂದ ಯಾವಾಗಲೂ ನಮ್ಮ ಆಲೋಚನೆಗಳು ಸಕಾರಾತ್ಮಕವಾಗಿ ಕೂಡಿರುತ್ತವೆ ಮತ್ತು ಜೀವನದಲ್ಲಿ ಒಳ್ಳೆಯದೇ ಆಗುತ್ತದೆ.
ವಿಭೂತಿಗೆ ಆಯುರ್ವೇದದ ಔಷಧಿ ಎಂಬ ಬಿರುದು ಇರುವುದರಿಂದ ಮತ್ತು ಅದು ಅಷ್ಟೆ ಶಕ್ತಿಶಾಲಿ ಕೂಡ ಆಗಿರುವುದರಿಂದ ನಮ್ಮ ದೇಹದಲ್ಲಿ ಕಂಡುಬರುವ ಅತಿಯಾದ ತೇವಾಂಶವನ್ನು ಹಚ್ಚಿದ ನಂತರದಲ್ಲಿ ಹೀರಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಶೀತ ಹಾಗೂ ಕೆಮ್ಮಿನ ಸಮಸ್ಯೆಯನ್ನು ದೂರಮಾಡುತ್ತದೆ
ವಿಭೂತಿ ಧರಿಸುವುದರಿಂದ ದೇಹದ ಜಡತ್ವ ದೂರವಾಗುತ್ತದೆ ಎಂದು ಹೇಳಬಹುದು. ಏಕೆಂದರೆ ಇದು ನೈಸರ್ಗಿಕವಾಗಿ ನಮ್ಮ ದೇಹದಲ್ಲಿ ನರಮಂಡಲಗಳನ್ನು ಉತ್ತೇಜಿಸಿ ಮತ್ತೆ ಎಲ್ಲಾ ಶಕ್ತಿ ಚಕ್ರಗಳನ್ನು ಸಕಾರಾತ್ಮಕವಾಗಿ ಕೆಲಸ ಮಾಡುವಂತೆ ಮಾಡಿ ಆರೋಗ್ಯಕರವಾದ ಜೀವನ ನಮಗೆ ಸಿಗುವಂತೆ ಮಾಡುತ್ತದೆ.
ನಮ್ಮ ಹಣೆಯ ಮೇಲ್ಭಾಗದಲ್ಲಿ ತೋಳು ಹಾಗೂ ಎದೆಯ ಭಾಗದಲ್ಲಿ ಹಚ್ಚಿಕೊಳ್ಳುವುದರಿಂದ, ಶೀತದ ಸಮಸ್ಯೆಯಿಂದ ಪಾರಾಗಬಹುದು. ಜ್ವರ ಬಂದಂತಹ ಸಂದರ್ಭದಲ್ಲಿ ಇಡೀ ದೇಹಕ್ಕೆ ವಿಭೂತಿಯಿಂದ ಉಜ್ಜುವುದರಿಂದ ಅತ್ಯುತ್ತಮ ಪರಿಹಾರ ಸಿಗುತ್ತದೆ