ಮೈಸೂರು:- ಸಾಂಸ್ಕೃತಿಕ ನಗರಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಗಲಭೆ ಕೇಸ್ ಗೆ ಸಂಬಂಧಿಸಿದಂತೆ ಎಫ್ಐಆರ್ನಲ್ಲಿ ಸ್ಫೋಟಕ ಅಂಶ ಉಲ್ಲೇಖ ಮಾಡಲಾಗಿದೆ.
ಗಲಭೆಯಲ್ಲಿ 1 ಸಾವಿರಕ್ಕೂ ಹೆಚ್ಚು ಜನ ಇದ್ದರು ಎಂದು ಪೊಲೀಸರು ತಿಳಿಸಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಈಗಾಗಲೇ ಬಂಧಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಇನ್ನು ಸ್ವಲ್ಪ ಯಾಮಾರಿದ್ದರೂ ಪೊಲೀಸರ ಹೆಣಗಳು ಬೀಳುತ್ತಿದ್ದವು ಎಂದು ಎಫ್ಐಆರ್ನಲ್ಲಿ ಉಲ್ಲೆಖವಾಗಿದೆ.
ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ಗರ್ಭಪಾತದ ಹಕ್ಕಿದೆ: ಹೈಕೋರ್ಟ್ ತೀರ್ಪು!
ಅಕ್ರಮವಾಗಿ ಗುಂಪು ಕಟ್ಟಿಕೊಂಡು ಸರ್ಕಾರದ ಆಸ್ತಿ ಪಾಸ್ತಿಗೆ ಹಾನಿ, ಪೊಲೀಸ್ ಇಲಾಖೆಗೆ ಸಂಬಂದಿಸಿದ ವಾಹನಗಳಿಗೆ ಹಾನಿ, ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿದ್ದಾರೆ. ಇದರಿಂದ ಪೊಲೀಸರ ಸಾವು ಸಂಭವಿಸಬಹುದು ಎಂದು ತಿಳಿದು ಕಲ್ಲು ತೂರಾಟ ಮಾಡಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಮುಸ್ಲಿಂ ಯುವಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಉದಯಗಿರಿ ಪೊಲೀಸ್ ಠಾಣಾ ಪಿಎಸ್ಐ ಸುನೀಲ್ ಸಿ.ಎನ್ ಅವರು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿಗಳ ಬೇಟೆಯಾಡಲು ಸಿಸಿಬಿ ಪೊಲೀಸರು ಫೀಲ್ಡ್ಗಿಳಿದಿದ್ದು. ಕಲ್ಲು ತೂರಿದ್ದ 60ಕ್ಕೂ ಹೆಚ್ಚು ಜನರ ಗುರುತು ಪತ್ತೆ ಹಚ್ಚಿದ್ದಾರೆ. ಲಿಸ್ಟ್ ರೆಡಿ ಮಾಡಿಕೊಂಡು ಮೊಬೈಲ್ ಟವರ್ ಆಧಾರದ ಮೇಲೆ ಮೊನ್ನೆ ರಾತ್ರಿ ಮನೆಗಳ ಮೇಲೆ ದಾಳಿ ನಡೆಸಿದ್ರು. ಆದ್ರೆ, ಮೊಬೈಲ್ ಬಿಟ್ಟು ಪರಾರಿಯಾಗಿದ್ದ ಆರೋಪಿಗಳು, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದರು. ಆದರೂ. ಸಿಸಿಕ್ಯಾಮರಾ, ಡಿವಿಎರ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ಪೊಲೀಸರು, ಆರೋಪಿಗಳನ್ನ ಬಂಧಿಸಿದ್ದಾರೆ.
ಇನ್ನು, ಗಲಾಟೆಗೆ ಮುಫ್ತಿ ಮುಷ್ತಾಕ್ ಮಕ್ಬೋಲಿಯ ಭಾಷಣವೇ ಕಾರಣವಾಯ್ತಾ ಎಂಬ ಶಂಕೆ ವ್ಯಕ್ತವಾಗಿದ್ದು, ಇದೀಗ ಪರಾರಿಯಾಗಿರುವ ಮುಸ್ತಾಕ್ ಪತ್ತೆಗೆ ಸಿಸಿಬಿ ಪೊಲೀಸrಉ ಹುಡುಕಾಟ ನಡೆಸಿದ್ದಾರೆ.