ಕೇರಳ: ಪ್ರಥಮ ವರ್ಷದ ಕಿರಿಯ ವಿದ್ಯಾರ್ಥಿಗಳ ಜೊತೆ ಹಿರಿಯ ವಿದ್ಯಾರ್ಥಿಗಳು ಅಮಾನುಷವಾಗಿ ನಡೆದುಕೊಂಡ ಘಟನೆ ಇಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜೊಂದರಲ್ಲಿ ಜರುಗಿದೆ.
ಮಧುಮೇಹಿಗಳ ಗಮನಕ್ಕೆ: ಸಕ್ಕರೆ ಮಾತ್ರವಲ್ಲ, ನಿಮಗೆ ಈ ಆಹಾರಗಳೂ ವಿಷಕ್ಕೆ ಸಮಾನ..!
ಈ ಬಗ್ಗೆ ದೂರು ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ. ತಮ್ಮನ್ನು ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ದೈಹಿಕ ಕಸರತ್ತಿಗೆ ಬಳಸುವ ಡಂಬಲ್ಸ್ಅನ್ನು ಕಟ್ಟಿ ನೇತು ಹಾಕುತ್ತಿದ್ದರು. ಚೂಪಾದ ವಸ್ತುಗಳನ್ನು ಬಳಸಿ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಮೂವರು ಕಿರಿಯ ವಿದ್ಯಾರ್ಥಿಗಳು ದೂರು ನೀಡಿದ್ದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಕಳೆದ ನವೆಂಬರ್ನಿಂದ ನಮ್ಮ ಮೇಲೆ ನಿರಂತರವಾಗಿ ರ್ಯಾಗಿಂಗ್ ಮಾಡಲಾಗುತ್ತಿದೆ. ಖಾಸಗಿ ಅಂಗಗಳಿಗೆ ಡಂಬಲ್ಸ್, ದಿಕ್ಸೂಚಿ ಮತ್ತಿತರ ವಸ್ತುಗಳನ್ನು ಕಟ್ಟಲಾಗುತ್ತಿತ್ತು. ದೇಹವನ್ನು ಗಾಯಗೊಳಿಸಿ, ನಂತರ ಅದರ ಮೇಲೆ ಲೋಷನ್ ಹಚ್ಚುತ್ತಿದ್ದರು. ಇದಲ್ಲದೆ, ಮುಖ, ತಲೆ ಮತ್ತು ಬಾಯಿಗೆ ಕ್ರೀಮ್ ಹಚ್ಚುತ್ತಿದ್ದರು ಎಂದು ವಿದ್ಯಾರ್ಥಿಗಳು ದೂರಿನಲ್ಲಿ ಆರೋಪಿಸಿದ್ದಾರೆ.
ಡಿಸೆಂಬರ್ 13 ರಂದು, ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬನಿಗೆ ತೀವ್ರ ದೈಹಿಕ ಹಿಂಸೆ ನೀಡಲಾಗಿದೆ. ಬಳಿಕ ಅದೇ ದಿನ ರಾತ್ರಿ, ಆರೋಪಿಯೊಬ್ಬ ಆತನ ಕೋಣೆಗೆ ಆಗಮಿಸಿ ಕೈಕಾಲುಗಳನ್ನು ಕಟ್ಟಿ ಮತ್ತೆ ಹಿಂಸಿಸಿದ್ದಾನೆ. ನಂತರ ದೇಹದ ಮೇಲೆ ಲೋಷನ್ ಸುರಿದು, ಚೂಪಾದ ವಸ್ತುವಿನಿಂದ ಗಾಯಗೊಳಿಸಿದ್ದಾನೆ. ಅದೇ ಕೋಣೆಯಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿಯಿಂದ ಈ ಕೃತ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದ ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಹಿರಿಯ ವಿದ್ಯಾರ್ಥಿಗಳ ಕಿರುಕುಳವನ್ನು ಸಹಿಸಲಾಗದೆ, ಮೂವರು ಕಿರಿಯ ವಿದ್ಯಾರ್ಥಿಗಳು ಕೊಟ್ಟಾಯಂನ ಗಾಂಧಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಆರೋಪಿತ ಐವರು ಹಿರಿಯ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿಯೂ ಅವರನ್ನು ಅಮಾನತು ಮಾಡಿ ಆದೇಶಿಸಿದೆ.