ಗದಗ:- ಗದಗ ನಗರದ ಬೆಟಗೇರಿಯ ಬಡ್ಡಿ ಬಕಾಸುರ ಯಲ್ಲಪ್ಪ ಮಿಸ್ಕಿನ್ ಮನೆ ಮೇಲೆ ಪೊಲೀಸರ ದಾಳಿ ನಡೆಸಿದ್ದಾರೆ. ಈ ವೇಳೆ ಕೋಟಿ ಕೋಟಿ ಹಣದ ಕಂತೆ ಪತ್ತೆಯಾಗಿದೆ. ಅಪಾರ ಹಣ ನೋಡಿ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದಾರೆ. ಅಲ್ಲದೇ ಕಂತೆ ಕಂತೆ ಹಣ ಎಣಿಸಲು ಪೊಲೀಸರು ಸುಸ್ತಾಗಿ ಹೋಗಿದ್ದಾರೆ.
ಕಿಂಗ್ ಕೊಹ್ಲಿ ಅಮೋಘ ಬ್ಯಾಟಿಂಗ್: ಭಾರತಕ್ಕೆ ಸಿಕ್ತು ಭರ್ಜರಿ ಗುಡ್ನ್ಯೂಸ್!
ಬೆಟಗೇರಿ ಸಿಪಿಐ ಧೀರಜ್ ಶಿಂಧೆ, ಪಿಎಸ್ಐ ಆರಿ, ಎಸ್ಪಿ ಬಿ ಎಸ್ ನೇಮಗೌಡ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಮೊನ್ನೆ ಬಡ್ಡಿ ಬಕಾಸುರ ಯಲ್ಲಪ್ಪ ಮಿಸ್ಕಿನ್ ಮನೆಯಲ್ಲಿ ಸುಮಾರು 1 ಕೋಟಿ 50 ಲಕ್ಷ ಹಣ ಪತ್ತೆಯಾಗಿತ್ತು. ನಿನ್ನೆಯೂ ಕೂಡ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಹೀಗಾಗಿ ಇಂಚಿಂಚು ಜಾಗವನ್ನೂ ಬಿಡದೇ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮೊನ್ನೆ ಪೊಲೀಸರು ದೂರೊಂದರ ಆಧಾರದ ಮೇಲೆ ಅವನ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಕೋಟಿಗಟ್ಟಲೆ ಹಣ ಪತ್ತೆಯಾಗಿದೆ. ನಿನ್ನೆ ಅವನಿಗೆ ಸೇರಿದ ಕೇಸರ್ ಫೈನಾನ್ಸ್ ಬಳಿಯಿರುವ ಮನೆಯ ಮೇಲೆ ದಾಳಿ ನಡೆಸಿದಾಗಲೂ ಕಂತೆ ಕಂತೆ ನೋಟುಗಳು ಮತ್ತು ಕಿಲೋಗಟ್ಟಲೆ ಚಿನ್ನಾಭರಣ ಪತ್ತೆಯಾಗಿವೆ. ಅಶೋಕ ಗಣಾಚಾರಿ ಎನ್ನುವವರು ಯಲ್ಲಪ್ಪನಿಂದ ಸಾಲ ಪಡೆದು ಅವನು ನೀಡುತ್ತಿದ್ದ ಕಿರುಕುಳ ತಾಳಲಾಗದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ದಾಳಿನಡೆಸಿ ಶೋಧ ನಡೆಸಿದಾಗ ಕೋಟಿ ಕೋಟಿ ಹಣ ಮತ್ತು ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ.
ಹೌದು, ಈತ ಬಡ್ಡಿ ಬಕಾಸುರ, ಅಕ್ರಮವಾಗಿ ಬಡ್ಡಿ ದಂದೆ ಮಾಡ್ತಾಯಿದ್ದ. ಕೋಟಿ, ಕೋಟಿ ಲೆಕ್ಕದಲ್ಲಿ ಬಡ್ಡಿದಂದೆ ಮಾಡ್ತಾಯಿದ್ದ. ಬಡ ಜನ್ರ, ರಕ್ತ ಹೀರಿ ಹೀರಿ ಕುಬೇರನಾಗಿದ್ದ. ಆದ್ರೆ ಬಡ್ಡಿ ಬಕಾಸುರನ ಖಜಾನೆ ಪೊಲೀಸ್ರು ಜಾಲಾಡಿದ್ದಾರೆ. ಪದ್ಮನಾಭನ ಖಜಾನೆಯಂತೆ ಹತ್ತಾರು ಲಾಕರ್ ಗಳಲ್ಲಿ ಕೋಟಿ ಕೋಟಿ ಮೊತ್ತದ ಹಣದ ಕಂತೆಗಳು ನೋಡಿ ಪೊಲೀಸ್ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಯಾರಿಗೂ ಅನುಮಾನ ಬರದಂತೆ ಹಳೆಯ ಕಟ್ಟಡದಲ್ಲಿ ಕೋಟಿ ಕೋಟಿ ಹಣ ಇಟ್ಟಿದ್ದ. ಆದ್ರೆ, ಖಾಕಿ ಪಡೆಯ ಇಂಚಿಂಚು ಶೋಧಕ್ಕೆ ಬಡ್ಡಿ ಬಕಾಸುರ ನೀರು ನೀರು ಅಂತಿದ್ದಾನೆ. ಪೊಲೀಸರ ಕಾರ್ಯಾಚರಣೆ ಇಡೀ ಗದಗ ಜಿಲ್ಲೆಯ ಜನ್ರು ಭೇಷ ಅಂತಿದ್ದಾರೆ.
ಎಸ್.. ಮನೆಯಲ್ಲಿ ಕಂತೆ ಕಂತೆ ಹಣ.. ಎಲ್ಲೆಂದರಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಅಪಾರ ಪ್ರಮಾಣದ ಚಿನ್ನ.. ಖಾಲಿ ಬಾಂಡ್, ಖಾಲಿ ಚೆಕ್ ಪತ್ತೆಯಾಗಿವೆ.. ಟ್ರಂಕ್ ನಲ್ಲಿ ಹಣ ತೆಗೆದುಕೊಂಡು ಪೊಲೀಸ್ರು ಠಾಣೆಗೆ ಎಂಟ್ರಿಯಾಗಿದ್ದಾರೆ. ಕೋಟ್ಯಾಂತರ ರೂಪಾಯಿ ನೋಡಿ ಒಂದು ಕ್ಷಣ ಪೊಲೀಸರೇ ಬೆಚ್ಚಿ ಹೋಗಿದ್ರು.. ಈ ಎಲ್ಲಾ ದೃಶ್ಯಗಳು ಕಾಣಸಿಗೋದು ಬೆಟಗೇರಿಯ ಬಡ್ಡಿ ಬಕಾಸುರ ಮನೆಯಲ್ಲಿ.. ಅಂದಹಾಗೇ ನಿನ್ನೆಯಿಂದ ಪೋಲೀಸರು ದಾಳಿ ಮಾಡಿ ಕಾರ್ಯಾಚರಣೆ ನಡೆಸಿದ್ದಾರೆ.. ಅಂದಹಾಗೇ ಹೊರಗೆ ನೋಡೋಕೆ ಕಲ್ಲಿನ ಹಳೆಯದಾದ ಮನೆ. ಇಂಥ ಮನೆಯಲ್ಲಿ ಯಾರೂ ಇರ್ತಾರೆ ಅಂತ ಅತ್ತ ಯಾರೂ ತಿರುಗಿ ಕೂಡ ನೋಡಲ್ಲ. ಆದ್ರೆ, ಇವತ್ತು ಪೊಲೀಸ್ರು ಆ ಮನೆಗೆ ಬಾಗಿಲು ತೆಗೆದು ಒಳಗೆ ಹೋಗಿ ಫುಲ್ ದಂಗಾಗಿ ಹೋಗಿದ್ರು. ಹಳೆಯ ಕಟ್ಟಡದಲ್ಲಿ ಅನಂತಪದ್ಮನಾಭನ ಖಜಾನೆಯೇ ಪತ್ತೆಯಾಗಿದೆ. ಒಂದೊಂದು ಲಾಕರ್ ಗಳು ಓಪನ್ ಮಾಡಿದ್ರೆ 500ಮುಖಬೆಲೆಯ ಕೋಟಿ ಕೋಟಿ ಹಣದ ಕಂತೆಗಳು ಪತ್ತೆಯಾಗಿವೆ. ಇಷ್ಟೊಂದು ಹಣ ಪಾಳು ಮನೆಯಲ್ಲಿ ಇರೋದು ನೋಡಿ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ರು. ಹೌದು ಈತನೇ ಆ ಬಡ್ಡಿ ಬಕಾಸುರ ಇಲ್ನೊಡಿ ಹೀಗೆ ಕೈಗೆ, ಕೊರಳಿಗೆ ಚಿನ್ನವನ್ನು ಹಾಕಿಕೊಂಡಿರುವ ಫೋಸ್ ನೀಡಿದ್ದ ಈತನ ಹೆಸರು ಯಲ್ಲಪ್ಪ ಮಿಸ್ಕಿನ್ ಅಂತಾ.. ಗದಗ ಬೆಟಗೇರಿ ಅವಳಿ ನಗರದಲ್ಲಿ ಅಕ್ರಮ ಬಡ್ಡಿ ದಂಧೆಯ ದೊಡ್ಡ ಕುಳ.. ಯಾವುದೇ ಲೈಸೆನ್ಸ್ ಇಲ್ಲದೆ ಕೋಟಿ ಕೋಟಿ ಹಣ ಸಾಲವನ್ನಾಗಿ ನೀಡ್ತಾಯಿದ್ದ. ಸಾಲವನ್ನು ಮರಳಿ ನೀಡದಿದ್ರೆ, ಅವರ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಂಡು ಕಿರುಕುಳ ನೀಡ್ತಾಯಿದ್ದನಂತೆ. ರೌಡಿಗಳನ್ನು ಬಿಟ್ಟು ಧಮ್ಕಿ, ಬೆದರಿಕೆ ಹಾಕ್ತಾಯಿದ್ದ. ಹೀಗಾಗಿ ಈತನಿಂದ ಕಿರುಕುಳಕ್ಕೆ ಒಳಗಾದ ಬೆಟಗೇರಿಯ ನಿವಾಸಿಯಾದ ಅಶೋಕ ಗಣಾಚಾರಿ ದೂರು ನೀಡಿದ್ರು.
ತಕ್ಷಣ ಅಲರ್ಟ್ ಆದ ಗದಗ ಎಸ್ಪಿ ಬಿ ಎಸ್ ನೇಮಗೌಡ ಯಲ್ಲಪ್ಪ ಮಿಸ್ಕಿನ್ ಮಿಸಕದಂತೆ ಪಕ್ಕಾ ಪ್ಲಾನ್ ಮಾಡಿ ಬಡ್ಡಿ ಬಕಾಸುರನಿಗೆ ಬಲೆ ಹಾಕಿದ್ದಾರೆ. ಪೊಲೀಸ್ರ ಬಲೆಗೆ ಬಿದ್ದ ಯಲ್ಲಪ್ಪ ಮಿಸ್ಕಿನ್ ವಿಲವಿಲ ಅಂತ ಒದ್ದಾಡುತ್ತಿದ್ದಾನೆ. ಪಕ್ಕಾ ಪ್ಲಾನ್ ಮಾಡಿ ದಾಳಿಗೆ ಇಳಿದ ಗದಗ ಎಸ್ಪಿ ಬಿ ಎಸ್ ನೇಮಗೌಡ, ಯಲ್ಲಪ್ಪ ಮಿಸ್ಕಿನ್ ಸೇರಿದ 13 ಕಡೆ, ಏಕಕಾಲದಲ್ಲಿ ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿದ್ದಾರೆ.. ದಾಳಿ ವೇಳೆಯಲ್ಲಿ ಕೋಟ್ಯಾಂತ ಹಣ ಪತ್ತೆಯಾಗಿತ್ತು. ಅಪಾರ ಪ್ರಮಾಣದ ಚಿನ್ನ, ಹಾಗೂ ಖಾಲಿ ಬಾಂಡ್, ಖಾಲಿ ಚೆಕ್ ಹಾಗೂ ಅಕ್ರಮವಾಗಿ ಬಡ್ಡಿದಂದೆಗೆ ಸೇರಿದಂತೆ ಪುಸ್ತಕ ಸಿಕ್ಕಿದ್ದು, ಎರಡು ದಿನಗಳ ದಾಳಿಯಲ್ಲಿ ಬರೊಬ್ಬರಿ 4 ಕೋಟಿ 90ಲಕ್ಷ 98 ಸಾವಿರ ಹಣ ಪತ್ತೆಯಾಗಿದೆ.
ಇನ್ನೂ ಹೊಸ ಖಜಾನೆ ಓಪನ್ ಮಾಡಲು ಬಡ್ಡಿ ಬಕಾಸುರ ಯಲ್ಲಪ್ಪ ಮಿಸ್ಕಿನ್ ಪೊಲೀಸ್ ಅಧಿಕಾರಿಗಳನ್ನು ಸಾಕಷ್ಟು ಸತಾಯಿಸಿದ್ದಾನೆ. ನನಗೆ ಬಿಪಿ ಲೋ ಆಗ್ತಾಯಿದೆ. ಅರೋಗ್ಯ ಸರಿಯಿಲ್ಲ ಬೆದರಿಸಿದ್ದಾನೆ. ಆ ಜಾಣ ಉಪಯೋಗಿಸಿದ ಪೊಲೀಸ್ರು ತಕ್ಷಣ ಆಸ್ಪತ್ರೆಗೆ ಕರೆದ್ಯೊಯ್ದು ಆರೋಗ್ಯ ತಪಾಸಣೆ ಮಾಡಿದ್ದಾರೆ. ವೈದ್ಯರು ಯಾವುದೇ ಸಮಸ್ಯೆ ಇಲ್ಲ ಎಂದಿದ್ದೇ ತಡ. ತಕ್ಷಣ ಅಲರ್ಟ್ ಆಗಿ ಯಲ್ಲಪ್ಪ ಕಚೇರಿ ಪಕ್ಕದ ಹಳೆಕಲ್ಲಿನ ಮನೆಯ ಬಾಗಿಲು ಓಪನ ಮಾಡಿ ಎಂಟ್ರಿಯಾಗಿದ್ದಾರೆ. ಲಾಕರ್ ಓಪನ್ ಮಾಡದಿದ್ರೆ ಒಡೆದು ತೆಗೆಯುವುದಾಗಿ ತಾಕೀತ್ತು ಮಾಡಿದ್ದಾರೆ. ಆಗ ಬೆಂಡಾದ ಯಲ್ಲಪ್ಪ ತಕ್ಷಣ ಲಾಕರ್ ಓಪನ್ ಮಾಡಿದ್ದಾರೆ. ಒಳಗೆ ಹೋಗಿ ಲಾಕರ್ ಗಳು ಓಪನೆ ಮಾಡಿದ ಪೊಲೀಸ್ ಅಧಿಕಾರಿಗಲು ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. 500 ಮುಖಬೆಲೆಯ ಕಂತೆ ಕಂತೆ ಕೋಟ್ಯಾಂತ ಹಣ ಇಂದೂ ಪತ್ತೆಯಾಗಿದೆ. ಹಣ ಎಣಿಸಲು ಪೊಲೀಸ್ರು ಸುಸ್ತಾಗಿ ಹೋಗಿದ್ದಾರೆ. ಯಲ್ಲಪ್ಪ ಮಿಸ್ಕಿನ್ ದಾಳಿ ಮುನ್ಸೂಚನೆ ಅರಿತು ಹಣ, ದಾಖಲೆಗಳು ಬೇರೆ ಬೇರಿ ಮನೆಗಳಲ್ಲಿ ಇಟ್ಟಿದ್ದ. ಆದ್ರೆ, ಎಸ್ಪಿ ಬಿ ಎಸ್ ನೇಮಗೌಡ ಮಿಸ್ಕಿನ್ ವ್ಯವಹಾರ ಪ್ರತಿಯೊಂದು ಎಳೆಯನ್ನು ಸ್ಟಡಿ ಮಾಡಿ ಹೆಡೆಮುರಿ ಕಟ್ಟಿದ್ದಾರೆ. ಪೊಲೀಸರ ಇಂಚಿಂಚು ಶೋಧಕ್ಕೆ ಯಲ್ಲಪ್ಪ ಮಿಸ್ಕಿನ್ ನೀರು ನೀರು ಎನ್ನುತ್ತಿದ್ದ. ನೀರಿನ ಬಾಟಲ್ ಕೈಗೆ ಕೊಟ್ಟಿದ್ದೇ ತಡ ಕುಡಿದಿದ್ದೇ ಕುಡಿದಿದ್ದು. ಆತನ ಬಳಿ ಅಂದಾರು 5 ಕೋಟಿ ನಗದು, ಬಾಂಡ್ 650, ಬ್ಯಾಂಕ್ ಎಟಿಎಂ 4, ಬ್ಯಾಂಕ್ ಪಾಸ್ ಬುಕ್ 9, ಎಲ್ಐಸಿ ಬಾಂಡ್ 2 ಹಾಗೂ ಅಕ್ರಮವಾಗಿ ಸಂಗ್ರಹ ಮಾಡಿದ 62ಲೀಟರ್ ಮಧ್ಯ ಜಪ್ತಿ ಮಾಡಿದ್ದಾರೆ. ಯಲ್ಲಪ್ಪ ಮಿಸ್ಕಿನ್ ಸೇರಿ 5 ಜನ್ರನ್ನು ಬಂಧಿಸಲಾಗಿದೆ. ಗದಗ ಜಿಲ್ಲೆಯಲ್ಲೇ ಈ ದಾಳಿ ಇತಿಹಾಸ ನಿರ್ಮಿಸಿದೆ. ಗದಗ ಬೆಟಗೇರಿ ಅವಳಿ ನಗರದ ಬಡ್ಡಿ ದಂಧೆಕೋರರು ಬೆಚ್ಚಿಬಿದ್ದಿದ್ದಾರೆ.
ಮೊನ್ನೆ ಯಲ್ಲಪ್ಪ ಮಿಸ್ಕಿನ್ ಗೆ ಸೇರಿದ ಸುಮಾರು 12 ಕಡೆ ದಾಳಿ ಮಾಡಿ ಕೊಟಿ ಕೋಟಿ ಹಣ ಸೀಜ್ ಮಾಡಲಾಗಿತ್ತು. ನಿನ್ನೆ ಮತ್ತೊಂದು ಮನೆ ಮೇಲೆ ದಾಳಿ ಮಾಡಿ ಭರ್ಜರಿ ಬೇಟೆಯಾಡಿದ್ದಾರೆ.