ಕೋಲಾರ – ಕನ್ನಡವನ್ನು ಕನ್ನಡಿಗರಾಗಿ ನಾವು ಉಳಿಸದಿದ್ದರೆ, ಜಗತ್ತಿನ ಯಾವುದೇ ಶಕ್ತಿ ಉಳಿಸಲಾರದು. ಎಲ್ಲಾ ಕನ್ನಡಿಗರು ಕನ್ನಡ ವಿಷಯದಲ್ಲಿ ಆತ್ಮವಂಚನೆ ಇಲ್ಲದೆ, ಪರಿಚಾರಿಕೆ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರು ತಿಳಿಸಿದರು.
ಮೇಡಂ ದರ್ಶನ್ ಬಗ್ಗೆ ಏನ್ ಹೇಳ್ತಿರಾ!? ನಟನ ಬಗ್ಗೆ ಕೇಳುತ್ತಿದ್ದಂತೆ ರಮ್ಯಾ ಗರಂ, ನೋ ಕಾಮೆಂಟ್ ಎಂದ ನಟಿ!
ಇಂದು ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಪ್ರಾಧಿಕಾರದ ಮುಖ್ಯ ಕೆಲಸ ಸರ್ಕಾರ ಕನ್ನಡಪರ ತೀರ್ಮಾನಗಳನ್ನು ತೆಗೆದುಕೊಂಡರೆ, ಅಂತಹ ತೀರ್ಮಾನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು. ಈ ನಿಟ್ಟಿನಲ್ಲಿ ಸರ್ಕಾರವು 3000 ಕ್ಕೂ ಹೆಚ್ಚಿನ ಆದೇಶಗಳನ್ನು ಹೊರಡಿಸಲಾಗಿದೆ,
ಗಡಿ ಪ್ರದೇಶದ ಶಾಲೆಗಳು ಹೆಚ್ಚಾಗಿ ಕನ್ನಡೀಕರಣ ಗೊಳಿಸಬೇಕು ಮತ್ತು ಹೊರಗಿನಿಂದ ಬರುವವರನ್ನು ಕನ್ನಡಿಗರೊಂದಿಗೆ ವ್ಯವಹಾರ ಮಾಡುವಾಗ ಅವರನ್ನು ಕನ್ನಡದಲ್ಲಿಯೇ ಮಾತನಾಡಿ ಅವರಿಗೆ ಕನ್ನಡ ಭಾಷೆಯನ್ನು ಕಲಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದರು.