ಮಾರುಕಟ್ಟೆಯಲ್ಲಿ ಖರೀದಿಸುವ ತುಪ್ಪಕ್ಕೂ, ಮನೆಯಲ್ಲಿ ತಯಾರಿಸಿದ ತುಪ್ಪಕ್ಕೂ ಭಿನ್ನತೆ ಇದೆಯೇ, ಮಾರುಕಟ್ಟೆಯಲ್ಲಿ ಪ್ಯಾಕೆಟ್ಗಳಲ್ಲಿ ಸಿಗುವ ಎಲ್ಲಾ ತುಪ್ಪ ಅಸಲಿಯೇ? ಇಂತಹ ಹಲವು ಪ್ರಶ್ನೆಗಳು ಸಾಮಾನ್ಯವಾಗಿ ಅನೇಕರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಆದರೆ ಚಿಂತೆ ಬೇಡ. ಮಾರುಕಟ್ಟೆಯಲ್ಲಿ ಖರೀದಿಸಿದ ತುಪ್ಪ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಪರಿಶೀಲಿಸಲು ಹಲವು ಸರಳ ಮಾರ್ಗಗಳಿವೆ. ಅದನ್ನು ನೀವು ಮನೆಯಲ್ಲಿಯೇ ಕಂಡು ಹಿಡಿಯಬಹುದಾಗಿದೆ.
ಮಹಿಳೆಯರ ಗಮನಕ್ಕೆ: 3 ತಿಂಗಳಿಂದ ಗೃಹಲಕ್ಷ್ಮಿ ಹಣ ಬಂದಿಲ್ವಾ!? ಹಾಗಿದ್ರೆ ಇಲ್ಲಿ ಕೇಳಿ!
ಮಾರುಕಟ್ಟೆಯಲ್ಲಿ ವಿವಿಧ ರಾಸಾಯನಿಕಗಳನ್ನು ಮಿಶ್ರಣ ಮಾಡಿದ ತುಪ್ಪ ಹೇರಳವಾಗಿ ಕಂಡು ಬರುತ್ತಿದೆ ಮತ್ತು ಇದೊಂದು ವ್ಯವಹಾರದ ರೂಪದಲ್ಲಿ ವ್ಯಾಪಕವಾಗಿ ಹರಡಿದೆ. ನಿಮ್ಮನ್ನು ನೀವು ಇಂತಹ ಕಲಬೆರಕೆ ತುಪ್ಪದಿಂದ ರಕ್ಷಿಸಿಕೊಳ್ಳಲು FSSAI ನ ವಿಧಾನಗಳನ್ನು ಅನುಸರಿಸಿ.
ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಿ ತುಪ್ಪಕ್ಕೆ ಒಳ್ಳೆಯ ಪ್ರಾಧಾನ್ಯತೆ ಇದೆ. ತರಕಾರಿಗಳನ್ನು ಬಳಸಿ ತಯಾರು ಮಾಡುವ ಆಹಾರ ಪದಾರ್ಥಗಳಿಂದ ಹಿಡಿದು ಹಲ್ವಾ ಅಥವಾ ಇನ್ನಿತರ ಸಿಹಿ ಖಾದ್ಯಗಳನ್ನು ತಯಾರಿಸುವವರೆಗೂ ತುಪ್ಪವನ್ನು ಬಳಸಲಾಗುತ್ತದೆ. ನಾವು ಸೇವಿಸುವ ಹಸುವಿನ ತುಪ್ಪದಲ್ಲಿ ವಿಟಮಿನ್ ಅಂಶಗಳು, ಖನಿಜಾಂಶಗಳು ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್ ಅಂಶಗಳ ಪ್ರಮಾಣ ಅಪಾರವಾಗಿ ಕಂಡುಬರುತ್ತದೆ. ಹಲವು ಜನರಿಗೆ ಈ ಪೌಷ್ಟಿಕಾಂಶಗಳ ಬಗ್ಗೆ ಗೊತ್ತೇ ಇಲ್ಲ. ತುಪ್ಪವನ್ನು ತಿಂದರೆ ಶಕ್ತಿ ಬರುತ್ತದೆ ಎಂದಷ್ಟೇ ಗೊತ್ತು.
ತುಪ್ಪದಿಂದ ಸಿಗುವ ಪ್ರಯೋಜನಗಳಿಗಾಗಿ ಮತ್ತು ಅದರ ಬಳಕೆ ಯಿಂದಾಗಿ ಇಂದು ತುಪ್ಪದ ಬೆಲೆ ಗಗನಕ್ಕೇರಿದೆ ಮತ್ತು ತುಪ್ಪ ಕೂಡ ಕಲಬೆರಕೆ ಆಗುತ್ತಿದೆ. ಮಧ್ಯವರ್ತಿಗಳು ಮತ್ತು ಮಾರಾಟ ಗಾರರು ತುಪ್ಪಕ್ಕೆ ರಾಸಾಯನಿಕ ಅಂಶಗಳನ್ನು ಮಿಶ್ರಣ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಸಿಗುವ ಇಂತಹ ತುಪ್ಪದಲ್ಲಿ ಯಾವುದೇ ಪೌಷ್ಟಿಕಾಂಶಗಳು ಇರುವುದಿಲ್ಲ ಮತ್ತು ಇದು ಕ್ಯಾನ್ಸರ್ ತೊಂದ ರೆಯನ್ನು ಹೆಚ್ಚು ಮಾಡುವ ಸಾಧ್ಯತೆ ಇರುತ್ತದೆ. ಕೆಲವು ದಿನಗಳ ಹಿಂದೆ ರಾಜಸ್ಥಾನದ ಸಂಚೂರ್ನಲ್ಲಿ ಬರೋಬ್ಬರಿ 1000 ಲೀಟರ್ ಕಲಬೆರಕೆ ತುಪ್ಪವನ್ನು ಸೀಸ್ ಮಾಡಲಾಗಿದೆ. ಪ್ರಸಿದ್ಧ ಕಂಪನಿಗಳ ಖಾಲಿ ಕ್ಯಾನ್ ಗಳ ಜೊತೆಗೆ ಕಚ್ಚಾ ವಸ್ತುಗಳು, ರಾಸಾಯನಿಕಗಳು ಕಂಡುಬಂದಿದ್ದವು.
ಈ ರೀತಿ ಕಲಬೆರಕೆ ತುಪ್ಪವನ್ನು ಸೇವನೆ ಮಾಡುವುದು ಕ್ಯಾನ್ಸರ್ ಸಮಸ್ಯೆಯನ್ನು 10 ಬಾರಿ ಹೆಚ್ಚು ಮಾಡಿದಂತೆ ಎಂದು ಹೇಳಲಾಗುತ್ತದೆ. ಕಡಿಮೆ ದೈಹಿಕ ಚಟುವಟಿಕೆ, ಬೊಜ್ಜು, ಉಪಕರಣದಿಂದ ಕಂಡುಬರುವ ಸಮಸ್ಯೆಗಳು ಇತ್ಯಾದಿಗಳಿಂದ ಕಾಯಿಲೆ ಹೆಚ್ಚಾಗಿ ಕಾಣಿಸುತ್ತಿದೆ. ಇದರ ಜೊತೆಗೆ ರಾಸಾಯನಿಕ ಮತ್ತು ಅನಾರೋಗ್ಯಕರ ವಸ್ತುಗಳು ಕಂಡು ಬರುವುದು ಕೂಡ ಕಾಯಿಲೆಯನ್ನು ಹೆಚ್ಚು ಮಾಡುತ್ತದೆ. ಕಲಬೆರಕೆ ತುಪ್ಪವನ್ನು ಮನೆಯಲ್ಲಿ ಸುಲಭವಾಗಿ ಕಂಡು ಹಿಡಿಯುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಇದಕ್ಕಾಗಿ ಟೆಸ್ಟ್ ಟ್ಯೂಬ್ ನಲ್ಲಿ 1 ಎಂಎಲ್ ಕರಗಿದ ತುಪ್ಪವನ್ನು ತೆಗೆದುಕೊಳ್ಳಿ.
ಇದಕ್ಕೆ ಒಂದು ಎಂಎಲ್ ಕಾನ್ಸನ್ಟ್ರೇಟ್ ಮಾಡಿದ ಹೈಡ್ರೋ ಕ್ಲೋರಿಕ್ ಆಸಿಡ್ ದ್ರಾವಣವನ್ನು ಸೇರಿಸಿ.
ಈಗ ಇದಕ್ಕೆ ಅರ್ಧ ಟೀ ಚಮಚ ಸಕ್ಕರೆ ಹಾಕಿ ಎರಡು ನಿಮಿಷಗಳ ಕಾಲ ಚೆನ್ನಾಗಿ ತಿರುಗಿಸಿ.
ಆನಂತರ ಇದನ್ನು ಸ್ವಲ್ಪ ಹೊತ್ತು ಹಾಗೆ ಬಿಡಿ.
ತುಪ್ಪ ಒಂದು ವೇಳೆ ಕಲಬೆರಕೆ ಆಗಿದ್ದರೆ, ಕೆಂಪು ಅಥವಾ ಗುಲಾಬಿ ಬಣ್ಣದ ಆಮ್ಲದ ಪದರ ಕಂಡು ಬರುತ್ತದೆ
ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ ಹೇಳುವ ಪ್ರಕಾರ ಹೈಡ್ರೋಕ್ಲೋರಿಕ್ ಆಸಿಡ್ ಸಕ್ಕರೆ ಅಂಶವನ್ನು ಗ್ಲುಕೋಸ್ ಮತ್ತು ಫ್ರಕ್ಟೋಸ್ ಆಗಿ ಬದಲಿಸುತ್ತದೆ. ನಿರ್ಜಲೀಕರಣ ಸಂದರ್ಭದಲ್ಲಿ ಫಿನಾಲ್ ಜೊತೆ ರಿಯಾಕ್ಟ್ ಆಗಿ ವೆಜಿಟೇಬಲ್ ಆಯಿಲ್ ಅಥವಾ ಎಳ್ಳೆಣ್ಣೆ ಜೊತೆಗೆ ಬಣ್ಣ ಬದಲಿಸುತ್ತದೆ. ವನಸ್ಪತಿ ಮತ್ತು ಹೈಡ್ರೋಜನೇಷನ್ ಆದಂತಹ ವೆಜಿಟೇಬಲ್ ಆಯಿಲ್ ಗಳಲ್ಲಿ ಟ್ರಾನ್ಸ್ ಕೊಬ್ಬಿನ ಅಂಶಗಳ ಪ್ರಮಾಣ ಹೇರಳವಾಗಿ ಕಂಡುಬರುತ್ತದೆ. ಇದು ಕ್ಯಾನ್ಸರ್ ಮತ್ತು ಹೃದಯ ರಕ್ತನಾಳದ ಕಾಯಿಲೆಗಳನ್ನು ಹೆಚ್ಚು ಮಾಡುವ ಸಾಧ್ಯತೆ ಇರುತ್ತದೆ.
ಮೊದಲಿಗೆ 2 ಎಂಎಲ್ ಕರಗಿದ ತುಪ್ಪವನ್ನು ತೆಗೆದುಕೊಳ್ಳಿ.
ಇದಕ್ಕೆ 5 ಎಂಎಲ್ ಕಾನ್ಸನ್ಟ್ರೇಟ್ ಮಾಡಿದ ಹೈಡ್ರೋಕ್ಲೋರಿಕ್ ಆಸಿಡ್ ಸೇರಿಸಿ.
ಇದನ್ನು ಚೆನ್ನಾಗಿ ತಿರುವಿ ಕೆಲವು ಸೆಕೆಂಡುಗಳ ಕಾಲ ಹಾಗೆ ಬಿಡಿ.
ಒಂದು ವೇಳೆ ಕಲಬೆರಕೆ ತುಪ್ಪ ಆಗಿದ್ದರೆ, ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ.
ಒಂದು ಗಾಜಿನ ಲೋಟದಲ್ಲಿ ಅರ್ಧ ಟೀ ಚಮಚ ತುಪ್ಪವನ್ನು ತೆಗೆದುಕೊಳ್ಳಿ.
ಇದಕ್ಕೆ ಎರಡರಿಂದ ಮೂರು ಹನಿಗಳು ಅಯೋಡಿನ್ ಟಿಂಕ್ಚರ್ ಹಾಕಿ.
ಒಂದು ವೇಳೆ ಇದರಲ್ಲಿ ಯಾವುದೇ ತರಹದ ಸ್ಟಾರ್ಚ್ ಕಂಡು ಬಂದರೆ, ಅದು ನೀಲಿ ಬಣ್ಣಕ್ಕೆ ತಿರುಗುತ್ತದೆ.
ನಿಮಗೆ ಗೊತ್ತಿರುವ ಅಂಗಡಿಯಿಂದ ಮಾತ್ರ ತುಪ್ಪ ಖರೀದಿ ಮಾಡಿ.
ಬ್ರಾಂಡ್ ಲೋಗೋ ಮತ್ತು ಪ್ಯಾಕ್ ಮೇಲೆ ಹೆಚ್ಚು ಗಮನ ನೀಡಿ.
ತಿನ್ನುವ ಮುಂಚೆ ಶುದ್ಧತೆಗೆ ಆದ್ಯತೆ ಕೊಡಿ. ಹಸು ಮತ್ತು ಎಮ್ಮೆಯ ತುಪ್ಪ ಮಾತ್ರ ತಿನ್ನಿ.
ಗೊತ್ತಿಲ್ಲದ ಅಥವಾ ದಾರಿಹೋಕರಿಂದ ತುಪ್ಪ ಖರೀದಿಸಬೇಡಿ.