ಮೈಸೂರು: ಮೈಸೂರಿನ ಉದಯಗಿರಿಯಲ್ಲಿ ಕ್ಷುಲಕ ಕಾರಣಕ್ಕೆ ಗಲಭೆ ನಡೆದಿದೆ. ದೆಹಲಿಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಯುವಕ ಪೋಸ್ಟ್ ಮಾಡಿದ್ದ. ಪೋಸ್ಟ್ ವಿರುದ್ಧ ಸಹಸ್ರಾರು ಜನ ರೊಚ್ಚಿಗೆದ್ದು ಗಲಾಟೆ ಮಾಡಿದ್ದಾರೆ. ಉದಯ ಗಿರಿಯ ಮುಖ್ಯ ರಸ್ತೆಯ ಯುವಕ ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಕೇಜ್ರಿವಾಲ್ ಭಾವಚಿತ್ರ ಹಾಕಿ ಅದರ ಮೇಲೆ ಮುಸ್ಲಿಂ ಧರ್ಮಗುರುಗಳ ಸಾಲುಗಳನ್ನ ಉಲ್ಲೇಖಿಸಿದ್ದ. ಇದ್ರಿಂದ ಗಲಾಟೆ ನಡೆದಿದ್ದು, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.
ಇನ್ನೂ ಉದಯಗಿರಿಯಲ್ಲಿ ಪುಂಡಾಟ ಮಾಡಿದ್ದವರಿಗೆ ಬಲೆ ಬೀಸಿದ್ದ ಸಿಸಿಬಿ ಪೊಲೀಸರು ಸದ್ಯ ಪ್ರಕರಣ ಸಂಬಂಧ 8 ಮಂದಿ ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಮೈಸೂರಿನ ಶಾಂತಿನಗರದ ಸುಹೇಲ್@ಸೈಯದ್ ಸುಹೇಲ್, ರಹೀಲ್ ಪಾಷಾ, ಅಯಾನ್, ಸತ್ಯನಗರದ ನಿವಾಸಿ ಏಜಾಜ್, ಮೈಸೂರಿನ ಗೌಸಿಯಾನಗರದ ನಿವಾಸಿ ಸೈಯದ್ ಸಾದಿಕ್, ರಾಜೀವ್ ನಗರದ ಸಾದಿಕ್ ಪಾಷಾ ಅಲಿಯಾಸ್ ಸಾದಿಕ್, ಅರ್ಬಾಜ್ ಷರೀಫ್, ಶೋಹೆಬ್ ಪಾಷಾ ಬಂಧಿತ ಆರೋಪಿಗಳು. ಮತ್ತಷ್ಟು ಆರೋಪಿಗಳ ಸೆರೆಗೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.
10th, PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ..! ಇಂದೇ ಅಪ್ಲೈ ಮಾಡಿ
ನಿನ್ನೆ ರಾತ್ರಿ ಪೊಲೀಸರು ಆರೋಪಿಗಳ ಸೆರೆಗೆ ಹೋಗಿದ್ದರು. ಟವರ್ ಲೊಕೇಶನ್ ಆಧಾರದಲ್ಲಿ ಮನೆ ಮನೆ ತೆರಳಿದ್ದರು. ಆದರೆ ಪೊಲೀಸರು ಅರೆಸ್ಟ್ ಮಾಡುತ್ತಾರೆಂಬ ಭೀತಿಯಲ್ಲೇ ಆರೋಪಿಗಳು ಮನೆ ಬಿಟ್ಟು ಓಡಿಹೋಗಿದ್ದಾರೆ. ಮೊಬೈಲ್ ಮನೆಯಲ್ಲೇ ಇಟ್ಟು ಊರು ಬಿಟ್ಟಿದ್ದಾರೆ. ಸದ್ಯ ಮೈಸೂರಿನ ಸಿಸಿಬಿ ಪೊಲೀಸರು ಪ್ರಕರಣ ಕೈಗೆತ್ತಿಕೊಂಡಿದ್ದಾರೆ. ಉದಯಗಿರಿ ಠಾಣೆ ರಸ್ತೆಯಲ್ಲಿನ 10ಕ್ಕೂ ಹೆಚ್ಚು ಸಿಸಿಕ್ಯಾಮರಾ ಡಿವಿಆರ್ ವಶಕ್ಕೆ ಪಡೆದು ಪರಿಶೀಲನೆ ಮಾಡಿದ್ದಾರೆ.