ಮಂಗಳೂರು: ಮದಗಜರಾಜ ಚಿತ್ರದ ಬಿಡುಗಡೆ ಸಮಾರಂಭದ ವೇಳೆ ವೇದಿಕೆ ಮೇಲೆ ತಮಿಳಿನ ಖ್ಯಾತ ನಟ ವಿಶಾಲ್ ತೊದಲುತ್ತ ಮಾಡನಾಡಿದ್ದು ಕೈಗಳು ನಡುಗುತ್ತಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ ನಟನ ಆರೋಗ್ಯದ ಕುರಿತಂತೆ ತೀವ್ರ ಕಳವಳ ವ್ಯಕ್ತವಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಇದೀಗ ನಟ ವಿಶಾಲ್ ತುಳುನಾಡಿನ ದೈವದ ಮೊರೆ ಹೋಗಿದ್ದಾರೆ.
ಮಂಗಳೂರಿನ ಮುಲ್ಕಿ ತಾಲೂಕಿನ ಹರಿಪಾದದಲ್ಲಿನ ಜಾರಂದಾಯ ದೇವಾಲಯಕ್ಕೆ ಭೇಟಿ ನೀಡಿದ್ದ ವಿಶಾಲ್ ಆರೋಗ್ಯ ಸಮಸ್ಯೆಯನ್ನು ನಿವಾರಿಸುವಂತೆ ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ ಬೇಡಿಕೊಂಡರು. ಈ ವೇಳೆ ತುಳುನಾಡಿನ ದೈವ ಅಭಯ ನೀಡಿದ್ದು ಕಣ್ಣೀರು ಹಾಕಬೇಡ, ನಾನಿದ್ದೇನೆ. ನಿನ್ನ ಆರೋಗ್ಯ ಸರಿಯಾಗಲಿದೆ. ಗುಣಮುಖನಾಗಿ ಬಂದು ತುಲಾಭಾರ ಸೇವೆ ಅರ್ಪಿಸು ಎಂದು ದೈವ ಅಭಯ ನೀಡಿದೆ.
2012ರಲ್ಲಿ ನಿರ್ಮಾಣವಾಗಿದ್ದ ಮದಗಜರಾಜ ಚಿತ್ರ ಸುದೀರ್ಘ ವರ್ಷಗಳ ಬಳಿಕ ಇದೇ ವರ್ಷ ಬಿಡುಗಡೆಯಾಗಿದ್ದು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದೆ. 15 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾಗಿದ್ದ ಚಿತ್ರ ಬರೋಬ್ಬರಿ 56 ಕೋಟಿ ಕಲೆಕ್ಷನ್ ಮಾಡಿದೆ.