ಶಿವಮೊಗ್ಗ : ಸಮಾಜ ತಲೆತಗ್ಗಿಸುವ ಘಟನೆ ಭದ್ರಾವತಿಯಲ್ಲಿ ನಡೆದಿದ್ದು ಎಂಎಲ್ಎ ಮಕ್ಕಳು ಮಹಿಳಾ ಅಧಿಕಾರಿ ಮೇಲೆ ದರ್ಪ ಮೆರೆದಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಆರ್. ಪ್ರಸನ್ನ ಕುಮಾರ್ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು ರಿಪಬ್ಲಿಕ್ ಭದ್ರಾವತಿ ಆಗಲು ಬಿಡಲ್ಲ ಎಂದು ಜಿಲ್ಲಾ ಮಂತ್ರಿ ಹೇಳಿದ್ದರು, ಮಾಧ್ಯಮದಲ್ಲಿ ಒತ್ತಡ ಬಂದ ಮೇಲೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಯಾರನ್ನ ಬಂಧಿಸಬೇಕೋ ಅವರನ್ನು ಬಂಧಿಸಿಲ್ಲ ಅವರ ವಿರುದ್ದ ಪ್ರಕರಣ ದಾಖಲು ಮಾಡಿಲ್ಲ, ಯಾರೋ ಟೈಪ್ ಮಾಡಿ ತಂದ ಲೇಟರ್ ಅನ್ನ ಮಹಿಳಾ ಅಧಿಕಾರಿ ಪೊಲೀಸರಿಗೆ ಕೊಟ್ಟಿದ್ದಾರೆ, ಭದ್ರಾವತಿಯ ಘಟನೆಯಲ್ಲಿ ಜೆಡಿಎಸ್ ತೀವ್ರವಾಗಿ ಖಂಡಿಸುತ್ತದೆ ಎಂದರು. ಇನ್ನು ಭದ್ರಾವತಿಯಲ್ಲಿ ಅಧಿಕಾರಿಗಳು ಭಯದ ವಾತಾವರಣದಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಡಿಸಿ, ಎಸ್ಪಿ ಅವರು ಜಿಲ್ಲೆಯಲ್ಲಿ ಏನು ಮಾಡುತ್ತಿದ್ದಾರೆ, ಕೆಲಸ ಮಾಡುವ ಅಧಿಕಾರಿಗಳಿಗೆ ಈ ರೀತಿಯ ತೊಂದರೆ ನೀಡುತ್ತಿದ್ರು ಅಧಿಕಾರಿಗಳು ಸುಮ್ಮನಿದ್ದಾರೆ ಎಂದರು.
10th, PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ..! ಇಂದೇ ಅಪ್ಲೈ ಮಾಡಿ
ಮಹಿಳಾ ಅಧಿಕಾರಿಗೆ ನೋವಿಗೆ ಸ್ಪಂಧಿಸುವ ಕೆಲಸ ಸರ್ಕಾರದಿಂದ ಆಗಬೇಕು, ಭದ್ರಾವತಿ ಘಟನೆಯ ನೈಜ ತನಿಖೆ ನಡೆಯಬೇಕಿದೆ, ಕೂಡಲೇ ಶಾಸಕ ಸಂಗಮೇಶ್ ರಾಜೀನಾಮೆ ನೀಡಬೇಕು, ಇಡೀ ಸಮಾಜ ತಲೆ ತಗ್ಗಿಸುವ ಕೆಲಸವಾಗಿರೋದರಿಂದ ಶಾಸಕರು ರಾಜೀನಾಮೆ ನೀಡಬೇಕು, ಪೊಲೀಸ್ ಇಲಾಖೆ ಯಾರ ಒತ್ತಡಕ್ಕೆ ಮಣಿಯದೆ ಪ್ರಕರಣ ದಾಖಲಿಸಿಕೊಂಡು ಎಂಎಲ್ಎ ಮಗನ ವಿರುದ್ದ ತನಿಖೆ ನಡೆಸಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ಇನ್ನು ಘಟನೆ ಖಂಡಿಸಿ ಫೆಬ್ರವರಿ 14 ರಂದು ಭದ್ರಾವತಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ, ಪ್ರತಿಭಟನೆಯಲ್ಲಿ ನಿಖಿಲ್ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದರು.