ಹುಬ್ಬಳ್ಳಿ: ಎಸ್ ಎಂ ಎಫ್ ಜಿ ಇಂಡಿಯಾ ಕ್ರೆಡಿಟ್ ಕರ್ನಾಟಕದಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿ ಎಸ್ ಆರ್) ಯೋಜನೆಗಳ ಆಯೋಜನೆಯನ್ನು ಮುಂದುವರೆಸಿದ್ದು, ಆ ಮೂಲಕ ಕರ್ನಾಟಕದ ಸಾವಿರಾರು ಕುಟುಂಬಗಳಿಗೆ ಒಳಿತು ಮಾಡಲು ಉದ್ದೇಶಿಸಿದೆ. ಪ್ರಾಥಮಿಕ ಆರೋಗ್ಯ, ಕಣ್ಣಿನ ಆರೈಕೆ, ಕೌಶಲ್ಯ ಅಭಿವೃದ್ಧಿ, ಜಾನುವಾರು ಆರೈಕೆ ಮುಂತಾದ ಯೋಜನೆಗಳ ಮೂಲಕ ಜನ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರುವ ಕೆಲಸ ಮಾಡಲಿದೆ ಎಂದು ಎಸ್ ಎಂ ಎಫ್ ಜಿ ಇಂಡಿಯಾ ಕ್ರೆಡಿಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವಾಮಿನಾಥನ್ ಸುಬ್ರಮಣಿಯನ್ ಹೇಳಿದರು.
ಈ ಕುರಿತು ಮಾಹಿತಿ ಕೊಟ್ಟ ಅವರುಕಳೆದ ಕೆಲವು ವರ್ಷಗಳಲ್ಲಿ ಕಂಪನಿಯು ಕರ್ನಾಟಕದಲ್ಲಿ ಹಲವಾರು ಪ್ರಮುಖ ಯೋಜನೆಗಳನ್ನು ಪರಿಚಯಿಸಿದೆ. , ಪ್ರಾಥಮಿಕ ಆರೋಗ್ಯ ಸೇವಾ ಯೋಜನೆಯಾದ ನಿರ್ಮಯ ಅಡಿಯಲ್ಲಿ, ಎಸ್ ಎಂ ಎಫ್ ಜಿ ಇಂಡಿಯಾ ಕ್ರೆಡಿಟ್ ಸಂಸ್ಥೆಯು ರಾಯಚೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ 2 ಮೊಬೈಲ್ ಹೆಲ್ತ್ ವ್ಯಾನ್ಗಳನ್ನು (ಎಂ ಎಚ್ ವಿ) ಒದಗಿಸಿದ್ದು,
10th, PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ..! ಇಂದೇ ಅಪ್ಲೈ ಮಾಡಿ
ಆ ಮೂಲಕ ಅಲ್ಲಿನ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಕುಟುಂಬಗಳಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸುತ್ತದೆ. ಈ ಯೋಜನೆಯ ಮೂಲಕ, ಕಂಪನಿಯು ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿನ 1,40,000 ಕ್ಕೂ ಹೆಚ್ಚು ಜನರಿಗೆ ವೈದ್ಯಕೀಯ ನೆರವು ಒದಗಿಸಿದೆ.
ಹೆಚ್ಚುವರಿ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸಲು ಎಸ್ ಎಂ ಎಫ್ ಜಿ ಇಂಡಿಯಾ ಕ್ರೆಡಿಟ್ ಜ್ಯೋತಿ ಯೋಜನೆ ಮೂಲಕ ನೇತ್ರ ಚಿಕಿತ್ಸೆ ಸೇವೆಗಳನ್ನು ಒದಗಿಸುತ್ತಿದೆ. ಈ ಯೋಜನೆಯು ಮನೆಬಾಗಿಲಿನಲ್ಲಿ ಗುಣಮಟ್ಟದ ನೇತ್ರ ಚಿಕಿತ್ಸೆ ಒದಗಿಸುತ್ತದೆ. ಈ ಮೂಲಕ ‘ತಪ್ಪಿಸಬಹುದಾದ ಕುರುಡುತನ’ ವನ್ನು ಮತ್ತು ಇತರ ಕಣ್ಣಿನ ಕಾಯಿಲೆಗಳ ಸಮಸ್ಯೆ ಉಂಟಾಗುವುದನ್ನು ತಪ್ಪಿಸುತ್ತದೆ. ಈ ಯೋಜನೆಯು ಕಳೆದ ಮೂರು ವರ್ಷಗಳಲ್ಲಿ 43,000 ಕ್ಕೂ ಹೆಚ್ಚು ವ್ಯಕ್ತಿಗಳಿಗೆ ಪ್ರಯೋಜನವನ್ನು ನೀಡಿದೆ ಎಂದರು.