ಹುಬ್ಬಳ್ಳಿ : 2023-24 ನೇ ಸಾಲಿನ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ರೈತರ ಬೆಳೆ ವಿಮಾ ಪ್ರಸ್ತಾವನೆಗಳು ಬೆಳೆ ಸಮೀಕ್ಷೆಯಡಿ ದಾಖಲಾದ ಬೆಳೆ ಹಾಗೂ ಬೆಳೆ ವಿಮೆ ಮಾಡಿಸಿದ ಬೆಳೆಯು ಹೊಂದಾಣಿಕೆಯಾಗದೇ ವಿಮಾ ಸಂಸ್ಥೆಯವರಿಂದ ಮುಂಗಾರು-285 ಹಾಗೂ ಹಿಂಗಾರು-541 ಒಟ್ಟು 826 ಪ್ರಸ್ತಾವನೆಗಳು ತಿರಸ್ಕೃತಗೊಂಡಿರುತ್ತವೆ.
ತಿರಸ್ಕೃತಗೊಂಡಿರುವ ಬೆಳೆ ವಿಮಾ ಪ್ರಸ್ತಾವನೆಗಳ ರೈತರ ಪಟ್ಟಿಯನ್ನು ಗ್ರಾಮ ಪಂಚಾಯತಿ, ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಪ್ರದರ್ಶಿಸಲಾಗಿದೆ. ಸಂಬಂಧಪಟ್ಟ ರೈತರು ಆಕ್ಷೇಪಣೆ ಇದ್ದಲ್ಲಿ ಫೆಬ್ರವರಿ 27ರ ಒಳಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿ,
10th, PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ..! ಇಂದೇ ಅಪ್ಲೈ ಮಾಡಿ
ನವನಗರ, ಹುಬ್ಬಳ್ಳಿ ಕಚೇರಿಗೆ 2023-24 ರ ಪಹಣಿ ಪತ್ರಿಕೆಯಲ್ಲಿ (RTC) ವಿಮೆಗೆ ನೋಂದಾಯಿಸಿದ ಬೆಳೆ ನಮೂದು ಪ್ರತಿ, ವಿಮೆ ಮಾಡಿಸಿದ ಬೆಳೆಗೆ ಬೆಂಬಲ ಬೆಲೆ ಪ್ರಯೋಜನ ಪಡೆದಲ್ಲಿ ರಶೀದಿ ಹಾಗೂ ವಿಮೆಗೆ ನೋಂದಾಯಿತ ಬೆಳೆಯ ಉತ್ಪನ್ನವನ್ನು ಎಪಿಎಂಸಿ ಮಾರುಕಟ್ಟೆಗೆ ಮಾರಾಟ ಮಾಡಿದಲ್ಲಿ ದಾಖಲೆಯೊಂದಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ