‘ಇಂಡಿಯಾಸ್ ಗಾಟ್ ಲೇಟೆಂಟ್’ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಖ್ಯಾತ ಯೂಟ್ಯೂಬರ್ ಮತ್ತು ಪಾಡ್ಕ್ಯಾಸ್ಟರ್ ರಣವೀರ್ ಅಲಾಹಾಬಾದಿಯಾ ವಿರುದ್ಧ ಈಗಾಗಲೇ ದೂರು ದಾಖಲಾಗಿದೆ. ಪ್ರಕರಣದಲ್ಲಿ ಮುಂಬೈ ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದು ಕಾರ್ಯಕ್ರಮದ ನಿರೂಪಕ, ಕಾಮಿಡಿಯನ್ ಸಮಯ್ ರೈನಾ ಮತ್ತು ರಣವೀರ್ ಇಬ್ಬರನ್ನೂ ಪೊಲೀಸ್ ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿ ಮಾಡಲಾಗಿದೆ. ರಣವೀರ್ ಹೇಳಿಕೆಗೆ ವಿವಿಧ ಕಡೆಗಳಿಂದ ಆಕ್ರೋಶದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹೀಗಿರುವಾಗಲೇ ರಣವೀರ್ ಅಲಹಾಬಾದಿಯಾ ಪ್ರೀತಿ ಮುರಿದು ಬಿದ್ದಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೆಲ್ಲಾ ಸುಳ್ಳು ಎನ್ನಲಾಗುತ್ತಿದೆ.
ರಣವೀರ್ ಹಾಗೂ ನಿಕ್ಕಿ ಶರ್ಮಾ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದು ಇಬ್ಬರೂ ಶೀಘ್ರವೇ ಮದುವೆ ಆಗುವ ಆಲೋಚನೆಯಲ್ಲಿ ಇದ್ದಾರೆ. ಈಗ ರಣವೀರ್ ಹಾಗೂ ನಿಕ್ಕಿ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ಆದರೆ, ಇದು ಸುಳ್ಳು ಎಂಬುದು ತಿಳಿದು ಬಂದಿದೆ. ಇನ್ಸ್ಟಾಗ್ರಾಮ್ನಲ್ಲಿ ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಫಾಲೋ ಮಾಡಿಕೊಳ್ಳುತ್ತಾ ಇದ್ದಾರೆ.
‘ಬೀರ್ ಬೈಸೆಪ್ಸ್’ ಹೆಸರಿನ ಯೂಟ್ಯೂಬ್ ಖಾತೆ ಹೊಂದಿರುವ ರಣವೀರ್ ತಿಂಗಳಿಗೆ ಸುಮಾರು 35 ಲಕ್ಷ ರೂ.ಗಳನ್ನು ಗಳಿಸುತ್ತಾರೆ. ಇದಲ್ಲದೆ, ರಣವೀರ್ ಇತರ ವ್ಯವಹಾರಗಳನ್ನು ಸಹ ಹೊಂದಿದ್ದಾರೆ. ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ. ರಣವೀರ್ ಅವರ ಮಾಸಿಕ ಆದಾಯ 50 ಲಕ್ಷ ರೂ.ಗಳವರೆಗೆ ಇದೆ ಎನ್ನಲಾಗಿದೆ.
ರಣವೀರ್ ಮೇಲೆ ಕೇಸ್
ರಣವೀರ್ ಅಲಾಹಾಬಾದಿಯಾ ಮೇಲೆ ಸದ್ಯ ಕೇಸ್ ದಾಖಲಾಗಿದೆ. ಈ ಪ್ರಕರಣದ ಬಳಿಕ ಅವರ ಸಾಕಷ್ಟು ಕೇಸ್ಗಳು ಕೂಡ ಬಿದ್ದಿವೆ. ತಮ್ಮ ಹೇಳಿಕೆ ವಿವಾದ ಸೃಷ್ಟಿಯಾಗುತ್ತಿದ್ದಂತೆ ರಣವೀರ್ ಕ್ಷಮೆ ಕೇಳಿದ್ದಾರೆ. ‘ನಿಮ್ಮ ಜೀವನದುದ್ದಕ್ಕೂ ನಿಮ್ಮ ಹೆತ್ತವರು ಪ್ರತಿದಿನ ಲೈಂಗಿಕತೆಯನ್ನು ಹೊಂದುವುದನ್ನು ನೀವು ನೋಡುತ್ತೀರಾ ಅಥವಾ ಒಮ್ಮೆ ಅವರ ಜೊತೆ ಸೇರಿ ಅದನ್ನು ಶಾಶ್ವತವಾಗಿ ನಿಲ್ಲಿಸುತ್ತೀರಾ’ ಎಂದು ಪ್ರಶ್ನೆ ಮಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.