ದೇಹವನ್ನು ಆರೋಗ್ಯಕರವಾಗಿಡಲು ಹಸಿರು ತರಕಾರಿಗಳನ್ನು ಸೇವಿಸಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಅದರಲ್ಲಿ ಹಾಗಲಕಾಯಿಯು ಒಂದು. ಇದರಲ್ಲಿರುವ ಕಹಿ ಅಂಶದಿಂದಾಗಿ ಹೆಚ್ಚಿನವರು ಈ ತರಕಾರಿಯನ್ನು ಸೇವಿಸಲು ಇಷ್ಟಪಡುವುದಿಲ್ಲ. ಹಾಗಲಕಾಯಿ ರುಚಿಯಲ್ಲಿ ಕಹಿಯಾಗಿದ್ದರೂ ಸಹ ಅದರಲ್ಲಿ ಅನೇಕಾರು ಆರೋಗ್ಯ ಪ್ರಯೋಜನಗಳು ಅಡಗಿವೆ.
ಆದರೆ ಹಾಗಲಕಾಯಿಯನ್ನು ಸೇವಿಸಿದ ನಂತರ ನೀವು ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ಮರೆಯಬಾರದು ಎಂದು ನಿಮಗೆ ತಿಳಿದಿದೆಯೇ? ಹೀಗೆ ಮಾಡುವುದರಿಂದ ನೀವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಾಗಲಕಾಯಿಯನ್ನು ಸೇವಿಸಿದ ನಂತರ ನೀವು ಯಾವ ಯಾವ ವಸ್ತುಗಳನ್ನು ಸೇವಿಸಬಾರದು ಎಂಬುದನ್ನು ಇಲ್ಲಿ ಹೇಳುತ್ತೇವೆ.
ಹಾಗಲಕಾಯಿ ತಿಂದ ನಂತರ ಈ ಪದಾರ್ಥಗಳನ್ನು ಸೇವಿಸಬೇಡಿ ಹಾಲು ಹಾಗಲಕಾಯಿ ಸೇವಿಸಿದ ನಂತರ ಹಾಲು ಸೇವಿಸಬೇಡಿ. ಇದು ನಿಮಗೆ ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಲಕಾಯಿಯ ನಂತರ ಹಾಲು ಕುಡಿಯುವುದರಿಂದ ಮಲಬದ್ಧತೆ, ನೋವು ಮತ್ತು ಹೊಟ್ಟೆಯಲ್ಲಿ ಉರಿ ಕೂಡ ಉಂಟಾಗುತ್ತದೆ. ಮತ್ತೊಂದೆಡೆ, ನೀವು ಈಗಾಗಲೇ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನು ಹೊಂದಿದ್ದರೆ, ಆ ಸಮಸ್ಯೆ ಹೆಚ್ಚಾಗಬಹುದು.
ಮೂಲಂಗಿ ಹಾಗಲಕಾಯಿ ತಿಂದ ನಂತರ ಮೂಲಂಗಿ ಅಥವಾ ಮೂಲಂಗಿಯಿಂದ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸಬಾರದು.ಹೀಗೆ ಮಾಡುವುದರಿಂದ ದೇಹಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.ಏಕೆಂದರೆ ಮೂಲಂಗಿ ಮತ್ತು ಹಾಗಲಕಾಯಿಯ ಪರಿಣಾಮ ಬೇರೆ ಬೇರೆ. ಇದರಿಂದಾಗಿ ನೀವು ಗಂಟಲಿನಲ್ಲಿ ಆಮ್ಲೀಯತೆ ಮತ್ತು ಕಫದ ಸಮಸ್ಯೆ ಎದುರಿಸಬಹುದು. ಆದ್ದರಿಂದ, ಹಾಗಲಕಾಯಿ ನಂತರ, ಮೂಲಂಗಿಯನ್ನು ತಪ್ಪಿಸಬೇಕು.
ಮೊಸರು ಆಹಾರದೊಂದಿಗೆ ಮೊಸರು ತಿನ್ನುವ ಅಭ್ಯಾಸ ಅನೇಕರಿಗೆ ಇದೆ. ಆದರೆ ಹಾಗಲಕಾಯಿ ತರಕಾರಿಯೊಂದಿಗೆ ಮೊಸರು ಸೇವಿಸಿದರೆ, ನೀವು ಹಲವಾರು ರೋಗಗಳಿಗೆ ಬಲಿಯಾಗಬಹುದು.
ಅತ್ಯಧಿಕವಾಗಿ ಕಡೆಗಣಿಸಿದ ಆಹಾರಗಳಾಗಿರುವಂತಹ ಚಿಪ್ಸ್, ಕ್ರೇಕರ್ಸ್ ಮತ್ತು ಸಕ್ಕರೆಯುಕ್ತ ತಿಂಡಿಗಳು ಕೃತಕ ರುಚಿ ಹಾಗೂ ಸಂರಕ್ಷಕಗಳನ್ನು ಒಳಗೊಂಡಿರುವುದು. ಇದು ಹಾಗಲಕಾಯಿಯ ನೈಸರ್ಗಿಕ ಕಹಿಯ ಜತೆಗೆ ಹೋರಾಟ ಮಾಡಬಹುದು. ಇದರಿಂದಾಗಿ ಖಾದ್ಯಕ್ಕೆ ತುಂಬಾ ಕೆಟ್ಟ ರುಚಿಯು ಬರುವುದು. ಹಾಗಲಕಾಯಿಯ ಜತೆಗೆ ನೈಸರ್ಗಿಕ ಆಹಾರಗಳನ್ನು ಬಳಕೆ ಮಾಡಿಕೊಂಡರೆ ತುಂಬಾ ಒಳ್ಳೆಯದು.