ನವದೆಹಲಿ: ಪ್ರಧಾನಮಂತ್ರಿ ಆವಾಸ್ ಯೋಜನೆ ಬಡವರಿಗೆ ಕಡಿಮೆ ದರದಲ್ಲಿ ಮನೆ ಸಿಗುವಂತೆ ಮಾಡುವ ಕೇಂದ್ರದ ಸ್ಕೀಮ್ ಆಗಿದೆ. 2015ರಲ್ಲಿ ಆರಂಭಗೊಂಡ ಪಿಎಂ ಆವಾಸ್ ಯೋಜನೆ 2024-25ರ ಹಣಕಾಸು ವರ್ಷಕ್ಕೆ ಒಟ್ಟು 84.37 ಲಕ್ಷ ಮನೆಗಳಿಗೆ ಗುರಿ ಇಡಲಾಗಿತ್ತು. ಈ ಪೈಕಿ ಈವರೆಗೆ 39.82 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ.
2024-25ರ ಆರ್ಥಿಕ ವರ್ಷಕ್ಕೆ ಕರ್ನಾಟಕ ಸೇರಿದಂತೆ 18 ರಾಜ್ಯಗಳಲ್ಲಿ ಗ್ರಾಮೀಣ ಆವಾಸ್ ಯೋಜನೆ ಅಡಿ 84,37,139 ಮನೆಗಳನ್ನು ನಿರ್ಮಿಸಲು ಗುರಿ ನಿಗದಿ ಮಾಡಲಾಗಿತ್ತು. ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಪಂಜಾಬ್, ರಾಜಸ್ಥಾನ, ಒಡಿಶಾ, ಮಣಿಪುರ, ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ, ಜಾರ್ಖಂಡ್, ಹಿಮಾಚಲಪ್ರದೇಶ, ಹರ್ಯಾಣ, ಗುಜರಾತ್, ಅಸ್ಸಾಂ, ಬಿಹಾರ್ ಮತ್ತು ಛತ್ತೀಸ್ಗಡ ರಾಜ್ಯಗಳ ಗ್ರಾಮೀಣ ಭಾಗಗಳಲ್ಲಿ ಈ ಯೋಜನೆಗೆ ಗುರಿ ಇಡಲಾಗಿತ್ತು.
10th, PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ..! ಇಂದೇ ಅಪ್ಲೈ ಮಾಡಿ
ಇದೇ ಡಿಸೆಂಬರ್ (2024) ಮತ್ತು ಜನವರಿ (2025) ಈ ಎರಡು ತಿಂಗಳಲ್ಲಿ ಒಂಬತ್ತು ರಾಜ್ಯಗಳಲ್ಲಿ 46,56,765 ಮನೆಗಳಿಗೆ ಗುರಿ ಮಾಡಲಾಗಿತ್ತು. ಕರ್ನಾಟಕ, ತಮಿಳುನಾಡು, ಅಸ್ಸಾಂ, ಬಿಹಾರ, ಛತ್ತೀಸ್ಗಡ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನ್ ಈ 9 ರಾಜ್ಯಗಳಲ್ಲಿ 46.57 ಲಕ್ಷ ಮನೆಗಳ ಗುರಿಗೆ ಪ್ರತಿಯಾಗಿ 39,82,764 ಮನೆಗಳಿಗೆ ಸ್ಯಾಂಕ್ಷನ್ ಆಗಿದೆ.
ಏನಿದು ಪಿಎಂ ಆವಾಸ್ ಯೋಜನೆ?
ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಬಡವರಿಗೆ ಸೂರು ಕಲ್ಪಿಸಲು ಸಹಾಯವಾಗಲು ಸರ್ಕಾರ ಕೈಗೊಂಡಿರುವ ಯೋಜನೆಯಾಗಿದೆ. 2015ರಲ್ಲಿ ಈ ಯೋಜನೆ ಮೊದಲುಗೊಳ್ಳಲಾಯಿತು. ನಗರಗಳಲ್ಲಿರುವ ಬಡವರಿಗೆ ಮನೆಗಳನ್ನು ನಿರ್ಮಿಸುವ ಯೋಜನೆ ಇದು. ಹಾಗೆಯೇ, ಗ್ರಾಮೀಣ ಭಾಗದಲ್ಲೂ ಪ್ರತ್ಯೇಕ ಪಿಎಂ ಆವಾಸ್ ಯೋಜನೆ ಇದೆ. ಇಲ್ಲೂ ಕೂಡ ಬಡವರನ್ನು ಈ ಸ್ಕೀಮ್ನಲ್ಲಿ ಗುರಿ ಮಾಡಲಾಗಿದೆ. ಸರ್ಕಾರವು ಫಲಾಭವಿಗಳಿಗೆ ಮನೆ ನಿರ್ಮಾಣದಲ್ಲಿ ಸಹಾಯಧನ ನೀಡುತ್ತದೆ.
ನಗರ ಭಾಗದಲ್ಲಿ ಈವರೆಗೆ 1.18 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ. ಈ ಪೈಕಿ 90 ಲಕ್ಷಕ್ಕೂ ಅಧಿಕ ಮನೆಗಳ ನಿರ್ಮಾಣ ಪೂರ್ಣವಾಗಿದೆ. ಕೇಂದ್ರದಿಂದ 1.67 ಲಕ್ಷ ಕೋಟಿ ರೂ ಅನುದಾನ ಈವರೆಗೆ ಸಿಕ್ಕಿದೆ. ಇನ್ನು, ಗ್ರಾಮೀಣ ಆವಾಸ್ ಯೋಜನೆ ಅಡಿ ಈವರೆಗೆ 3.37 ಕೋಟಿ ಮನೆಗಳಿಗೆ ಮಂಜೂರಾತಿ ಆಗಿದೆ. ಇದರಲ್ಲಿ 2.69 ಕೋಟಿ ಮನೆಗಳ ನಿರ್ಮಾಣ ಮುಗಿದಿದೆ. 3.49 ಲಕ್ಷ ಕೋಟಿ ಕೋಟಿ ರೂ ಸಹಾಯಧನವನ್ನು ಸರ್ಕಾರ ಬಿಡುಗಡೆ ಮಾಡಿದೆ.