‘ಪುಷ್ಪ 2′ ಸಕ್ಸಸ್ ಬಳಿಕ ರಶ್ಮಿಕಾ ಮಂದಣ್ಣ ‘ಛಾವಾ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಹಲವು ಕಡೆಗಳಿಗೆ ಭೇಟಿ ನೀಡಿ ಛಾವಾ ಸಿನಿಮಾದ ಭರ್ಜರಿ ಪ್ರಚಾರ ಮಾಡಿದ್ದಾರೆ. ಇದೀಗ ನಟ ವಿಕ್ಕಿ ಕೌಶಲ್ ಜೊತೆ ಅಮೃತಸರ ಗೋಲ್ಡನ್ ಟೆಂಪಲ್ಗೆ ನಟಿ ಭೇಟಿ ನೀಡಿದ್ದಾರೆ.
ಸದ್ಯ ರಶ್ಮಿಕಾ ಮಂದಣ್ಣ ಕಾಲು ನೋವಿನಿಂದ ಚೇತರಿಸಿಕೊಂಡಿದ್ದು ಯಾರ ಸಹಾಯವು ಇಲ್ಲದೆ ನಡೆದಾಡುತ್ತಿದ್ದಾರೆ. ಇದೀಗ ರಶ್ಮಿಕಾ ಛಾವಾ ಚಿತ್ರತಂಡದ ಜೊತೆ ಸಿನಿಮಾ ರಿಲೀಸ್ಗೂ ಮುನ್ನ ಗೋಲ್ಡನ್ ಟೆಂಪಲ್ ಭೇಟಿ ನೀಡಿದ್ದು ಕೆಲ ಕಾಲ ಸಮಯ ಕಳೆದಿದ್ದಾರೆ.
ರಶ್ಮಿಕಾ ಬಣ್ಣದ ಬದುಕಿನಲ್ಲಿ ಮೊದಲ ಬಾರಿಗೆ ಐತಿಹಾಸಿಕ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಭಾರಿಗೆ ರಶ್ಮಿಕಾ ರಾಣಿ ಪಾತ್ರದಲ್ಲಿ ಮಿಂಚಿದ್ದು ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
‘ಛಾವಾ’ ಸಿನಿಮಾದಲ್ಲಿ ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜನ ಪಾತ್ರವನ್ನು ವಿಕ್ಕಿ ಕೌಶಲ್ ನಿಭಾಯಿಸಿದ್ದಾರೆ. ಸಂಭಾಜಿ ಮಹಾರಾಜರ ಶೌರ್ಯ ಅವರ ತ್ಯಾಗ ಮತ್ತು ಯುದ್ಧಗಳನ್ನು ಗೆಲ್ಲುವ ತಂತ್ರಗಳ ಬಗ್ಗೆ ಇದೆ. ಗಂಡ ಮತ್ತು ಹೆಂಡತಿಯ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ಸಹ ಒಳಗೊಂಡಿದೆ. ಮರಾಠ ಸಾಮ್ರಾಜ್ಯದಿಂದ ಸಂಭಾಜಿ ದೂರ ಇದ್ದಾಗ ಅವರ ಹೆಂಡತಿ ಎಲ್ಲವನ್ನೂ ಯಾವ ರೀತಿ ನಿರ್ವಹಿಸುತ್ತಿದ್ದರು ಎಂಬುದು ಕಥೆಯ ಹೈಲೈಟ್ ಆಗಿದೆ. ಇಲ್ಲಿ ವಿಕ್ಕಿ ಕೌಶಲ್ ರಶ್ಮಿಕಾ ನಾಯಕಿಯಾಗಿದ್ದಾರೆ. ಇದೇ ಫೆ.14ರಂದು ಸಿನಿಮಾ ರಿಲೀಸ್ ಆಗಲಿದೆ.