ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ 1 ಆರೋಪಿಯಾಗಿದ್ದ ಪವಿತ್ರಾ ಗೌಡಗೆ ಹೈಕೋರ್ಟ್ನಿಂದ ಜಾಮೀನು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸುಮಾರು ಆರು ತಿಂಗಳು ಇದ್ದ ಪವಿತ್ರಾ ಗೌಡ ಹೊರ ಬಂದಿದ್ದಾರೆ. ನಗು ಮುಖದಲ್ಲೇ ಹೊರ ಬಂದು ಪವಿತ್ರಾ ಗೌಡ ಸೀದಾ ದೇವಸ್ಥಾನಕ್ಕೆ ತೆರಳಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬರುತ್ತಿದ್ದಂತೆ ಪವಿತ್ರಗೌಡ ನೇರವಾಗಿ ರಾಜರಾಜೇಶ್ವರಿ ನಗರದಲ್ಲಿರುವ ಅವರ ನಿವಾಸಕ್ಕೆ ಹೋಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಜೈಲಿನಿಂದ ಸೀದಾ ತಲಘಟ್ಟಪುರ ಸಮೀಪವಿರುವ ಐತಿಹಾಸಿ ವಜ್ರಮುನೇಶ್ವರ ದೇಗುಲಕ್ಕೆ ತೆರಳಿ ಪುಣ್ಯಸ್ನಾನವನ್ನು ಮಾಡಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ಕಳೆದ ವರ್ಷದ ಕಹಿ ನೆನಪುಗಳಲ್ಲಿ ಅಳಿಸಿ ಹೊಸ ಬದುಕು ಕಟ್ಟಿಕೊಳ್ಳುವ ಭರದಲ್ಲಿದ್ದಾರೆ ಪವಿತ್ರಾ ಗೌಡ, ಇದಕ್ಕೆ ಪವಿತ್ರಾ ಭರ್ಜರಿ ತಯಾರಿ ಕೂಡ ನಡೆಸಿದ್ದಾರೆ. ಜೈಲಿಂದ ಹೊರಗೆ ಬಂದ ಬಳಿಕ ಅಮ್ಮನ ಮನೆ ಸೇರಿದ್ರು. ಹೊಸ ವರ್ಷದಂದು ಆರ್ ಆರ್ ನಗರ ಮನೆಯಲ್ಲಿ ಪೂಜೆ ಮಾಡಿಸಿ ಶಿಫ್ಟ್ ಆಗಿದ್ದಾರೆ ಎನ್ನಲಾಗ್ತಿದೆ.
ಜೊತೆಗೆ ತನ್ನ ರೆಡ್ ಕಾರ್ಪೆಟ್ ಸ್ಟುಡಿಯೋ ಶಾಪ್ ಅನ್ನು ಪವಿತ್ರಾ ಗೌಡ ರೀ ಓಪನ್ ಮಾಡಲು ಭರ್ಜರಿ ತಯಾರಿ ಕೂಡ ನಡೆಸಿಕೊಂಡಿದ್ದಾರೆ. ಪವಿತ್ರಾ ಗೌಡ ಜೈಲು ಸೇರಿದ ಬಳಿಕ ನಟಿಯ ಆರ್ ಆರ್ ನಗರದ ಶಾಪ್ ಅನ್ನು ಕ್ಲೋಸ್ ಮಾಡಲಾಗಿತ್ತು.
ಇದೀಗ ಪವಿತ್ರಾ ಗೌಡ ರೆಡ್ ಕಾರ್ಪೆಟ್ ಸ್ಟುಡಿಯೋ ಓಪನ್ ಮಾಡಲು ಭರ್ಜರಿ ತಯಾರಿ ನಡೆಸಿದ್ದಾರೆ. ಬಟ್ಟೆಗಳ ಖರೀದಿ ಮಾಡ್ತಿರುವ ಪವಿತ್ರಾ ಗೌಡ ಇದೀಗ ಇನ್ಸ್ಟಾ ಸ್ಟೋರಿಯಲ್ಲಿ ಗುಡ್ ನ್ಯೂಸ್ ಶೇರ್ ಮಾಡಿದ್ದಾರೆ.
ಫೆಬ್ರವರಿ 14 ರಂದು ರೆಡ್ ಕಾರ್ಪೆಟ್ ಸ್ಟುಡಿಯೋ ರೀ ಓಪನ್ ಮಾಡುವುದಾಗಿ ತಿಳಿಸಿದ್ದಾರೆ. ಇನ್ನು 3 ದಿನ ಬಾಕಿ ಇದೆ ಎಂದು ಪವಿತ್ರಾ ಗೌಡ ಬರೆದಿದ್ದಾರೆ. ಎಂಬ್ರೈಡಿಂಗ್ ವಿಡಿಯೋವನ್ನು ಕೂಡ ಶೇರ್ ಮಾಡಿದ್ದಾರೆ. ಫೆಬ್ರವರಿ 14ರಂದು ಪವಿತ್ರಾ ಗೌಡ ರೆಡ್ ಕಾರ್ಪೆಟ್ ಸ್ಟುಡಿಯೋದಲ್ಲಿ ಸಿಗಲಿದ್ದಾರೆ.
ನಟಿ ಪವಿತ್ರಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಫೋಟೋ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಮಹಾಕುಂಭಮೇಳಕ್ಕೆ ತೆರಳಿದ್ದ ವಿಡಿಯೋವನ್ನು ಕೂಡ ಪವಿತ್ರಾ ಶೇರ್ ಮಾಡಿದ್ರು. ಪುಣ್ಯಸ್ನಾನ ಮಾಡೋ ಭಾಗ್ಯ ಸಿಕ್ಕಿದ್ದೆ ದೊಡ್ಡ ಪುಣ್ಯ ಎಂದು ಬರೆದಿದ್ರು
ಇದೀಗ ಪವಿತ್ರಾ ಗೌಡ ಸ್ನೇಹ-ಸ್ನೇಹಿತರರ ಕುರಿತ ವಿಡಿಯೋವನ್ನು ಕೂಡ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ರು. ಒಳ್ಳೆ ಸ್ನೇಹಿತರ ಸರ್ಕಲ್ ಎಷ್ಟು ಮುಖ್ಯ ಅನ್ನೋದನ್ನು ನಾಬು ಈಗ ಅರಿತೆ ಎಂದಿದ್ದಾರೆ.
ಸ್ನೇಹತರ ಗುಂಪು ನೀವು ಯಾರು ಎನ್ನುವುದನ್ನು ನಿರ್ಧರಿಸುತ್ತದೆ. ನನಗೆ ಒಂದಷ್ಟು ಅದ್ಭುತ ಸ್ನೇಹಿತರಿದ್ದಾರೆ. ಒಳ್ಳೆ ಕೆಲಸಗಳನ್ನು ಮಾಡಲು ಪ್ರೋತ್ಸಾಹ ನೀಡುತ್ತಾರೆ. ನಿಮ್ಮನ್ನು ಹಿಂದಕ್ಕೆ ತಳ್ಳುವವರು ಸ್ನೇಹಿತರಲ್ಲ ಎಂದು ನಟಿ ರಾಶಿ ಖನ್ನಾ ಮಾತಾಡಿರುವ ವಿಡಿಯೋವನ್ನು ಪವಿತ್ರಾ ಗೌಡ ಶೇರ್ ಮಾಡಿದ್ರು.