ಹಾವೇರಿ:- ಅಲ್ಲಿ ಒಂದು ಸಾವಾಗಿತ್ತು.. ಆಸ್ಪತ್ರೆ ಅವರು ಕೂಡ ಆತ ಸಾವನ್ನಪ್ಪಿದ್ದಾನೆ ಅಂಥ ಹೇಳಿ ದೇಹನಾ ಕಳಿಸಿದರು. ಎಲ್ಲರೂ ಸಹ ಅತ್ಕೊಂಡು ಗೋಳಾಡ್ಕೊಂಡು ಊರಿಗೆ ಶವ ತಗೊಂಡೋಗ್ತಾ ಇದ್ರು.. ಆದರೆ ಮಾರ್ಗಮಧ್ಯೇನೇ ಒಂದು ಇಂಟ್ರೆಸ್ಟಿಂಗ್ ಘಟನೆ ನಡೀತು..
ನಿಧಿ ಆಸೆಗಾಗಿ ವ್ಯಕ್ತಿ ಬಲಿ ಕೊಟ್ಟ ಖದೀಮರು: ಜ್ಯೋತಿಷಿ ನಂಬಿದವರು ಜೈಲು ಪಾಲಾದರು!
ರೀ ಡಾಬಾ ಬಂತು ಊಟಾ ಮಾಡ ಏಳ್ರಿ ಎಂದಿದ್ದೇ ತಡಾ,, ಸತ್ತ ಮನುಷ್ಯ ಉಸಿರಾಡಿದ್ದಾನೆ.. ಎಸ್.. ಹಾವೇರಿ ಜಿಲ್ಲೆಯ ಬಂಕಾಪುರದ 45 ವರ್ಷದ ಮಂಜುನಾಥ ಗುಡಿಮನಿ ಉರ್ಫ ಮಾಸ್ತರ್ ಅನ್ನೋರು ಮೂರು ನಾಲ್ಕು ದಿನದಿಂದ ಅನಾರೋಗ್ಯದಿಂದಾಗಿ ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ರು. ಆದರೆ ಭಾನುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ 3-4 ಗಂಟೆ ಉಸಿರು ಇಲ್ಲದಿದ್ದಾಗ ವೈದ್ಯರು ಮೃತಪಟ್ಟಿದ್ದಾರೆ ಅಂತಾ ಡಿಕ್ಲೇರ್ ಮಾಡಿದ್ದಾರೆ. ಆನಂತರ, ಅವರ ಪತ್ನಿ ಶೀಲಾ, ಸಂಬಂಧಿಕರ ಜೊತೆಗೆ ಆಂಬ್ಯುಲೆನ್ಸ್ನಲ್ಲಿ ಅವರನ್ನು ಬಂಕಾಪುರಕ್ಕೆ ಕರೆದುಕೊಂಡು ಹೋಗ್ತಿದ್ರು..
ಇನ್ನೇನು ಊರು ಹತ್ತಿರ ಬರುತ್ತಿದ್ದಂತೆ ಒಂದು ಡಾಬಾ ಬಂದಾಗ ಪತ್ನಿ ಅಳುತ್ತಾ ‘ಡಾಬಾ ಬಂತು ನೋಡ್ರೀ.. ಬರ್ರೀ ಹೋಗೋಣು ಊಟ ಮಾಡೋಕೆ ಅಂತಾ ಗೋಳಾಡಿ ಕಣ್ಣೀರಿಟ್ಟಾಗ ಮೃತವ್ಯಕ್ತಿ ಉಸಿರು ಬಿಟ್ಟಿದ್ದಾನೆ. ಮಂಜುನಾಥ್ಗೆ ಆ ಡಾಬಾ ತುಂಬಾ ಪೇವ್ರೇಟ್ ಅಂತಾ.. ್ನ್ನ ಫ್ಯಾಮಿಲಿ ಮತ್ತೆ ಫ್ರೆಂಡ್ಸ್ ಜೊತೆಗೆ ಪದೇ ಪದೇ ಆ ಡಾಬಾಕ್ಕೆ ಹೋಗಿ ಊಟ ಮಾಡ್ತಿದ್ರಂತೆ.. ಅದೇ ನೆನಪಲ್ಲಿ ಅವ್ರ ಪತ್ನಿ ಡಾಬಾ ಹತ್ರ ಬಂದಾಗ, ಅದನ್ನು ನೆನೆಸಿಕೊಂಡು ಗೋಳಾಡಿದ್ರು. ಅಚ್ಚರಿ ಅನ್ನೋ ತರ ಆ ಡಾಬಾ ಹೆಸರು ಕೇಳ್ತಿದಂಗೆ ಮಂಜುನಾಥ್ ಉಸಿರಾಡಿದ್ದಾರೆ. ಆದರೆ ಅಲ್ಲಿದ್ದವರೆಲ್ಲಾ ಗಾಬರೀಯಾಗಿ ಕೂಡಲೇ ಅವರನ್ನು ಶಿಗ್ಗಾಂವಿ ಆಸ್ಪತ್ರೆಗೆ ಕರ್ಕೊಂಡು ಹೋಗಿದ್ದಾರೆ. ಅಲ್ಲಿ ತಪಾಸಣೆ ಮಾಡಿದ ವೈದ್ಯರು ಬದುಕಿರುವುದನ್ನು ದೃಢಪಡಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅದೇ ವಾಹನದಲ್ಲಿ ಬಂದು ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಷ್ಟೇ ಅಲ್ದೆ ಅವರ ಊರಲ್ಲಿ ಮಂಜುನಾಥ ತೀರಿ ಹೋಗಿದ್ದಾನೆ ಅಂತಾ ಬ್ಯಾನರ್, ಶ್ರದ್ಧಾಂಜಲಿ ಕೋರಿ ವಾಟ್ಸ್ ಆ್ಯಪ್ದಲ್ಲಿ ಮೇಸೆಜ್ಗಳು ಓಡಾಡುತ್ತಿವೆ. ಈಗ ಜೀವ ಉಳಿದ ಸುದ್ದಿ ಕೇಳಿ ‘ಆಯುಷ್ಯ ಕೊಟ್ಟು ದೇವರು ಕಾಪಾಡಲಿ’ ಎಂಬ ಹಾರೈಕೆಗಳನ್ನು ಹರಿಬಿಡುತ್ತಿದ್ದಾರೆ. ಈ ವಿಸ್ಮಯ ನಡೆದಿದ್ದು ವೈದ್ಯರು ಇದೊಂದು ಮಿರ್ಯಾಕಲ್ ಅಂತಿದ್ದಾರೆ.