ಬೆಂಗಳೂರು:- ಏರೋ ಇಂಡಿಯಾ -2025 ವೈಮಾನಿಕ ಪ್ರದರ್ಶನಕ್ಕ ಈಗಾಗಲೇ ಅದ್ಧೂರಿ ಚಾಲನೆ ಸಿಕ್ಕಿದೆ. ಏರ್ ಶೋ ಆರಂಭವಾಗಿದ್ದು, ಬೆಂಗಳೂರು ಏರ್ ಶೋ ಏಷ್ಯಾದಲ್ಲೇ ಅತ್ಯಂತ ದೊಡ್ಡ ಏರ್ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
IPL2025: ವಿರಾಟ್ ಫ್ಯಾನ್ಸ್ ಗೆ ಗುಡ್ ನ್ಯೂಸ್: RCB ತಂಡಕ್ಕೆ ಕೊಹ್ಲಿಯೇ ಕ್ಯಾಪ್ಟನ್!
ಇನ್ನೂ ನೀವು ಕೂಡ ಏರೋ ಇಂಡಿಯಾ ಶೋ ಅನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದಾಗಿದೆ. ಮೊಬೈಲ್ನಲ್ಲಿಯೇ ಪಾಸ್ ಬುಕ್ ಮಾಡಿ ಖರೀದಿಸಬಹುದು. ಅದಕ್ಕಾಗಿ ನೀವು, ಮೊಬೈಲ್ನಲ್ಲಿ ಇರೋ ಇಂಡಿಯಾ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಅಥವಾ https://www.aeroindia.gov.in/ ವೆಬ್ಸೈಟ್ಗೆ ಭೇಟಿ ನೀಡಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.
ಒಂದು ಸಾವಿರ ರೂಪಾಯಿ ಪಾವತಿಸಿ ಪಾಸ್ ಖರೀದಿಸಬಹುದು. ನಾಳೆಯಿಂದ ಫೆಬ್ರವರಿ 14ರವರೆಗೆ ಏರೋ ಇಂಡಿಯಾ ಶೋ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇದೆ. ವಸ್ತು ಪ್ರದರ್ಶನ ಮತ್ತು ವೈಮಾನಿಕ ಪ್ರದರ್ಶನ ವೀಕ್ಷಣೆ ಮಾಡಲು 2500 ರೂಪಾಯಿ ಹಾಗೂ ಬಿಸಿನೆಸ್ ಪಾಸ್ ದರ 5000 ರೂಪಾಯಿ ನಿಗಧಿ ಮಾಡಲಾಗಿದೆ.
ಏರ್ ಶೋಗಾಗಿ ಬಿಎಂಟಿಸಿ ಸ್ಪೇಷಲ್ ಸರ್ವಿಸ್ ನೀಡುತ್ತಿದೆ. ನಗರದ ಪ್ರಮುಖ ಬಸ್ಸ್ಟ್ಯಾಂಡ್ಗಳಿಂದ ಏರ್ಶೋಗೆ ಡೈರೆಕ್ಟ್ ಬಸ್ ಸೇವೆ ನೀಡಲಾಗುತ್ತಿದೆ. ಏರ್ಶೋ ಪಾಸ್ ಇದ್ದವರಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತಿದೆ. ಐದು ದಿನಗಳ ಕಾಲ ಈ ಸೌಲಭ್ಯವಿದ್ದು. ಏರ್ ಶೋ ಟಿಕೆಟ್ ತೋರಿಸಿ ಫ್ರೀಯಾಗಿ ಪ್ರಯಾಣ ಮಾಡಬಹುದು