ಚಿತ್ರದುರ್ಗ: ನಿಧಿ ಆಸೆಗಾಗಿ ವ್ಯಕ್ತಿಯ ಹತೈಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಪರಶುರಾಂಪುರದಲಿನಡೆದಿದೆ. ಪ್ರಭಾಕರ್ (52) ಕೊಲೆಯಾದ ವ್ಯಕ್ತಿ. ಆನಂದ ರೆಡ್ಡಿ (52) ಕೊಲೆಗೈದ ಆರೋಪಿಯಾಗಿದ್ದಾನೆ. ಆತ ಕುಂದುರ್ಪಿಯಲ್ಲಿ ಬಾರ್ ಸಪ್ಲೆಯರ್ ಆಗಿ ಕೆಲಸ ಮಾಡುತ್ತಿದ್ದ. ಆನಂದ ರೆಡ್ಡಿಗೆ ಪಾವಗಡದ ಜ್ಯೋತಿಷಿ ರಾಮಕೃಷ್ಣ, ಪಶ್ಚಿಮ ದಿಕ್ಕಿನಲ್ಲಿ ನರಬಲಿ ಕೊಟ್ಟರೆ ಚಿನ್ನ ಸಿಗಲಿದೆ ಎಂದು ಹೇಳಿದ್ದನ್ನು ಕೇಳಿ, ಕೊಲೆಮಾಡುವ ಉದ್ದೇಶದಿಂದಲೇ ಆರೋಪಿ ಕರ್ನಾಟಕಕ್ಕೆ ಬಂದಿದ್ದ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
ಲಿಫ್ಟ್ ಕೊಡುವ ನೆಪದಲ್ಲಿ ಪ್ರಭಾಕರ್ನನ್ಕನು ರೆದೊಯ್ದು ಕೊಲೆ ಮಾಡಲಾಗಿದೆ. ಹತ್ಯೆಗೆ ಬಳಸಿದ್ದ ಮಚ್ಚು, ಬಟ್ಟೆಯನ್ನು ಪೊಲಿಸರು ಸೀಜ್ ಮಾಡಿದ್ದಾರೆ. ಸದ್ಯ ಹಂತಕ ಹಾಗೂ ಜ್ಯೋತಿಷಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.