‘ಕಿನ್ನರಿ’, ‘ಸೀತಾರಾಮ’ ಧಾರವಾಹಿಗಳ ಮೂಲಕ ಖ್ಯಾತಿ ಘಳಿಸಿದ ನಟಿ ಮೇಘನಾ ಶಂಕರಪ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಯಂತ್ ಎಂಬುವವರ ಜೊತೆ ನಟಿ ಹಸೆಮಣೆ ಏರಿದ್ದು ನವ ಜೋಡಿಗೆ ಹಲವರು ಶುಭ ಹಾರೈಸಿದ್ದಾರೆ.
ಬೆಂಗಳೂರಿನಲ್ಲಿ ಫೆ.9ರಂದು ಜಯಂತ್ ಹಾಗೂ ಮೇಘನಾ ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ನಟಿಯ ಮದುವೆಗೆ ಕಾವ್ಯ ಶೈವ, ‘ಸೀತಾರಾಮ’ ಸೀರಿಯಲ್ ಟೀಮ್ ಸೇರಿದಂತೆ ಅನೇಕರು ಆಗಮಿಸಿ ಶುಭ ಹಾರೈಸಿದ್ದಾರೆ.
ಇಂಜಿನಿಯರ್ ಆಗಿರುವ ಜಯಂತ್ ಅವರ ಜೊತೆ ಮೇಘನಾ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಪಕ್ಕಾ ಅರೇಂಜ್ ಮ್ಯಾರೇಜ್ ಆಗಿರುವ ಈ ಜೋಡಿ ಮದುವೆಯಲ್ಲಿ ಗೋಲ್ಡ್ ಕಲರ್ ಡ್ರೆಸ್ನಲ್ಲಿ ಮಿಂಚಿದ್ದಾರೆ. ಎರಡು ಕುಟುಂಬದ ಹಿರಿಯರ ಸಮ್ಮುಖದಲ್ಲಿ ಇಬ್ಬರು ಹಸೆಮಣೆಗೆ ಏರಿದ್ದಾರೆ. ಮದುವೆಗೆ ಸ್ನೇಹಿತರು, ಸಂಬಂಧಿಗಳು, ಕಿರುತೆರೆಯ ನಟ, ನಟಿಯರು ಆಗಮಿಸಿ ಶುಭ ಹಾರೈಸಿದ್ದಾರೆ.
ಜಯಂತ್ ಅವರು ಬೆಂಗಳೂರಿನವರೇ ಆಗಿದ್ದಾರೆ. ಮೇಘನಾ ಅವರು ಸದಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ಅರಿಶಿಣ ಶಾಸ್ತ್ರ, ಮೆಹೆಂದಿ, ಸಂಗೀತ, ಪ್ರಿ ವೆಡ್ಡಿಂಗ್ ಕಾರ್ಯಕ್ರಮದ ವಿಡಿಯೋಗಳನ್ನು ಶೇರ್ ಮಾಡಿದ್ದರು.