ಬೆಂಗಳೂರು: ಇಂಡಿಯಾ ಬುಲ್ಸ್ ಎಂಟರ್ ಪ್ರೈಸಸ್ ಹಾಗೂ ಸಮ್ಮಾನ್ ಕ್ಯಾಪಿಟಲ್ಸ್ ಕಾರ್ಪೋರೆಟ್ ಲೋನ್ಸ್ ನ್ಯಾಷನಲ್ ಹೆಡ್ ವಿಶ್ವಾಸ್ ಶೆಟ್ಟಿ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಸಾಲ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿರೋ ಆರೋಪ ಕೇಳಿ ಬಂದಿದೆ. ಪಡೆದ ಹಣ ದಾಖಲೆ ವಾಪಸ್ಸು ಕೇಳಿದ್ದಕ್ಕೆ ವಿಶ್ವಾಸ್ ಶೆಟ್ಟಿ ಜಾತಿನಿಂದನೆ ಮಾಡಿರುವುದಾಗಿ
ಜ್ಞಾನಭಾರತಿ ಪೊಲೀಸ್ ಠಾಣೆಗೆ ಶೆಟ್ಟಿ ವಿರುದ್ಧ ಮಂಜುನಾಥ್ ದೂರು ನೀಡಿದ್ರು. ದೂರಿನ ಹಿನ್ನೆಲೆ ಎಫ್ ಐಆರ್ ದಾಖಲಿಸಿ ವಿಶ್ವಾಸ್ ಶೆಟ್ಟಿಯನ್ನ ಜ್ಞಾನಭಾರತಿ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ. ಮನೆ ಕಟ್ಟಲು ಸಾಲ ಕೊಡಿಸುವುದಾಗಿ ವಿಶ್ವಾಸ್ ಮಂಜುನಾಥ್ ರಿಂದ 5 ಲಕ್ಷ ಕಮಿಷನ್ ಪಡೆದಿದ್ರಂತೆ. ಆದ್ರೆ ಲೋನ್ ಕೊಡಿಸಿದ ವಿಶ್ವಾಸ್ ಕಳ್ಳಾಟ ಆಡಿದ್ದಾರೆ. ಹಣ ಕೇಳಲು ಹೋದಾಗ ನಾಗರಬಾವಿಯ ನಮ್ಮೂರ ತಿಂಡಿ ಬಳಿ ಶೆಟ್ಟಿ ಮಂಜುನಾಥ್ ಗೆ ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿರೋದಾಗಿ ಮಂಜುನಾಥ್ ಆರೋಪಿಸಿದ್ದಾರೆ.
ಹಾರ್ಟ್ ಅಟ್ಯಾಕ್ ತಡೆಯಲು ಈ ಬೀಜವೇ ಮದ್ದು: ನೀರಲ್ಲಿ ನೆನಸಿಟ್ಟು ತಿಂದ್ರೆ ಶುಗರ್-ಬಿಪಿ ಸಹ ಇರತ್ತೆ ಕಂಟ್ರೋಲ್!
ವಿಶ್ವಾಸ್ ಶೆಟ್ಟಿ ಅನೇಕ ಮಂದಿಗೆ ವಂಚಿಸಿರುವ ಆರೋಪ ಕೇಳಿ ಬಂದಿದ್ದು, ಈ ಹಿಂದೆ ಇಂಡಿಯಾ ಬುಲ್ಸ್ ನಲ್ಲಿ ಕಾರ್ಪೊರೆಟ್ ಲೋನ್ ನೋಡಿಕೊಳ್ತಿದ್ದ ವಿಶ್ವಾಸ್ ಮಾಲ್ ಗಳು, ಬಿಲ್ಡಿಂಗ್ಸ್, ಹೋಂ ಲೋನ್, ಕೊಡಿಸಿದ್ರಂತೆ. ವಂಚನೆ ಆರೋಪದಲ್ಲಿ ಕ್ಲೋಸ್ ಆಗಿದ್ದ ಇಂಡಿಯಾ ಬುಲ್ಸ್ ಮೇಲೆ ಜನ್ರ ಒತ್ತಡ ಹೆಚ್ಚಾದ ಹಿನ್ನಲೆ ಸಮ್ಮಾನ್ ಕ್ಯಾಪಿಟಲ್ಸ್ ಅಂತ ಹೆಸರು ಬದಲು ಮಾಡಿ ಕಂಪನಿ ನಡೆಸಿದ್ನಂತೆ ವಿಶ್ವಾಸ್.