ತುಮಕೂರು:- ಕಿಡಿಗೇಡಿಗಳ ಕೃತ್ಯದಿಂದ ಫಸಲಿಗೆ ಬಂದಿದ್ದ 500 ಅಡಿಕೆ ಗಿಡಗಳು ನಾಶವಾಗಿರುವ ಘಟನೆ ತಾಲೂಕಿನ ಬರಗೂರಿನಲ್ಲಿ ಜರುಗಿದೆ.
ಗಣೇಶ್ ಎಂಬ ರೈತರಿಗೆ ಸೇರಿದ ಅಡಿಕೆ ಗಿಡಗಳನ್ನು ರಾತ್ರಿ ವೇಳೆ ಕಿಡಿಗೇಡಿಗಳು ಕಡಿದು ಹಾಕಿದ್ದಾರೆ. ಗಣೇಶ್ ತೋಟಕ್ಕೆ ಬಂದು ನೋಡಿದಾಗ ಗಿಡ ಕಡಿದಿರುವುದು ಬೆಳಕಿಗೆ ಬಂದಿದೆ.
ಹಳೇ ದ್ವೇಷದ ಹಿನ್ನೆಲೆ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಕಿಡಿಗೇಡಿಗಳ ವಿರುದ್ಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.