ಮಂಡ್ಯ:- ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಪತಿಗೆ ಅನೈತಿಕ ಸಂಬಂಧವಿರುವುದಾಗಿ ಶಂಕಿಸಿ, ಪತಿಯ ಜಿಮ್ನಲ್ಲೇ ಪತ್ನಿ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ಇತಿಹಾಸದಲ್ಲೇ ಇದೇ ಮೊದಲು: ರಾಷ್ಟ್ರಪತಿ ಭವನದಲ್ಲಿ ಮದುವೆ.. ಯಾರೀ ಅದೃಷ್ಟ ಜೋಡಿ..?
27 ವರ್ಷದ ದಿವ್ಯ ಮೃತ ದುರ್ದೈವಿ. ದಿವ್ಯ ಹಾಗೂ ಗಿರೀಶ್ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ಎರಡು ಮಕ್ಕಳಿದ್ದವು. ಗಿರೀಶ್ ಕೆಸ್ತೂರು ಗ್ರಾಮದಲ್ಲಿ ವೈಭವ್ ಎಂಬ ಜಿಮ್ ಆರಂಭಿಸುವಾಗ ದಿವ್ಯ ಮನೆಯವರು 10 ಲಕ್ಷ ರೂ.ಯನ್ನು ನೀಡಿದ್ದರು. ಆದರೆ ಇತ್ತೀಚಿಗೆ ಗಿರೀಶ್ ಬೇರೊಬ್ಬರ ಜೊತೆ ಅನೈತಿಕ ಸಂಬಂಧವಿರುವುದಾಗಿ ದಿವ್ಯ ಶಂಕಿಸಿದ್ದರು. ಈ ವಿಚಾರವನ್ನ ಕುಟುಂಬಸ್ಥರ ಬಳಿ ದಿವ್ಯ ಹೇಳಿಕೊಂಡಿದ್ದರು.
ರಾಜಿಯಾಗಿದ್ದರೂ ಗಿರೀಶ್ ಕಳೆದ ಮೂರು ತಿಂಗಳಿಂದ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ಪತಿ ನಡೆಸುತ್ತಿದ್ದ ಜಿಮ್ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಳಿಕ ಪತಿ ಗಿರೀಶ್ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕೆಸ್ತೂರು ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.