ಬೆಂಗಳೂರು:- ಇಂದು ಮತ್ತು ನಾಳೆ ನಗರದ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಕೆಪಿಟಿಸಿಎಲ್ 66/11 kV ಸೋಲದೇವನಹಳ್ಳಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆ ಜಾಲಹಳ್ಳಿ ವಿಭಾಗದ ಎನ್-9 ಉಪ ವಿಭಾಗದ ಕೆಲವು ಭಾಗಗಳಲ್ಲಿ ಫೆಬ್ರವರಿ 11 ಮತ್ತು 12ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಅದರಂತೆ ನಗರದ ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಟಿಬಿ ಕ್ರಾಸ್, ಹೆಸರಘಟ್ಟ, ಬಿಳಿಜಾಜಿ, ದ್ವಾರಕಾನಗರ, ಚಿಕ್ಕಬಾಣಾವರ, ಮಾರುತಿ ನಗರ, ಗಣಪತಿ ನಗರ, ಶಾಂತಿನಗರ, ಬ್ರದರ್ಸ್ ಕಾಲೋನಿ, ಕೃಷ್ಣಾ ಕಾಲೇಜು ರಸ್ತೆ, ರಾಘವೇಂದ್ರ ಲೇಔಟ್ ಸಾಸುವೆಘಟ್ಟ, ಬಜ್ಜಪ್ಪ ಲೇಔಟ್, ಶಿವಕುಮಾರಸ್ವಾಮೀಜಿ ಲೇಔಟ್, ಗುಡ್ಡದಹಳ್ಳಿ, ದಾಸೇನಹಳ್ಳಿ, ತೋಟಗೆರೆ ಬಸವಣ್ಣ ದೇವಸ್ಥಾನ, ಹೊಸಹಳ್ಳಿ ಪಾಳ್ಯ, ಸಿಡಿಪಿಒ, ಡ್ಯಾನಿಶ್ ಫಾರ್ಮ್, ಕೆಎಂಎಫ್, ಸೋಮಶೀತಿಹಳ್ಳಿ, ಗಾಣಿಗರಹಳ್ಳಿ, ಹುರುಳಿಚಿಕ್ಕನಹಳ್ಳಿ, ಕೆ.ಟಿ.ಪುರ, ಐಐಎಚ್ಆರ್,
ಮಠಕೂರ್, ಐವರಕೊಂಡಪುರ, ಸೀತಕೆಂಪನಹಳ್ಳಿ, ಲಿಂಗನಹಳ್ಳಿ, ಮಾದಪ್ಪನಹಳ್ಳಿ, ಕಾಳೇನಹಳ್ಳಿ ಶಿವಕೋಟೆ ಗ್ರಾಮ, ಮಾವಳ್ಳಿಪುರ, ಕೊಂಡಶೆಟ್ಟಿಹಳ್ಳಿ, ಮಧುಗಿರಿವೇಹಳ್ಳಿ, ಹುರುಳಿಚಿಕ್ಕನಹಳ್ಳಿ, ಕುರುಬರಹಳ್ಳಿ, ಸೆಲ್ವೇಪುರ, ಪಾಕೇಗೌಡನಪಾಳ್ಯ, ರಾಘವೇಂದ್ರ ಧಾಮ, ಆಚಾರ್ಯ ಕಾಲೇಜು ಮುಖ್ಯ ರಸ್ತೆ, ಅಚ್ಯುತ್ ನಗರ, ಸೋಲದೇವನಹಳ್ಳಿ, ಸಾಸುವೆಘಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.