ಮಂಡ್ಯ : ಮಂಡ್ಯದ ಶ್ರೀರಂಗಪಟ್ಟಣದಲ್ಲಿರುವ ಕರಿಘಟ್ಟ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಿಡಿಗೇಡಿಗಳಿಂದ ಅರಣ್ಯಕ್ಕೆ ಬೆಂಕಿ ಇಟ್ಟ ಶಂಕೆ ವ್ಯಕ್ತವಾಗಿದ್ದು, ಇಡೀ ಕರಿಘಟ್ಟ ಅರಣ್ಯ ಪ್ರದೇಶವೇ ಹೊತ್ತಿ ಉರಿದಿದೆ.
ಸೋಮವಾರ ಮಧ್ಯಾಹ್ನದಿಂದಲೂ ಸಹ ಸತತವಾಗಿ ಬೆಂಕಿ ಉರಿಯುತ್ತಿದ್ದು, 300 ಎಕರೆ ಪ್ರದೇಶದಲ್ಲಿ ಶೇಕಡಾ 90 ರಷ್ಟು ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಅರಣ್ಯದಲ್ಲಿದ ಪ್ರಾಣಿ, ಪಕ್ಷಿ ಹಾಗೂ ಬೆಲೆ ಬಾಳುವ ಮರಗಳೂ ಬೆಂಕಿಗಾಹುತಿಯಾಗಿದ್ದು, ಸ್ಥಳಕ್ಕೆ ಬಾರದ ಅರಣ್ಯ ಅಧಿಕಾರಿಗಳ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.