ಸಾಕಷ್ಟು ತಿಂಗಳಿನಿಂದ ಕಳಪೆ ಬ್ಯಾಟಿಂಗ್ ಮಾಡುತ್ತಿದ್ದ ರೋಹಿತ್ ಶರ್ಮಾ ಅವರು ಇದೀಗ ಫಾರ್ಮ್ ಗೆ ಮರಳಿದ್ದು, ಶತಕ ಸಿಡಿಸಿ ಕಣ್ಣೀರಿ ಹಾಕಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ರೋಹಿತ್ ಶರ್ಮಾ, ಕೊನೆಗೂ ತಮ್ಮ ರನ್ ಬರವನ್ನು ನೀಗಿಸಿಕೊಂಡಿದ್ದಾರೆ.
ಬೀದರ್ ನಲ್ಲಿ ವಚನ ವಿಜಯೋತ್ಸವ ಉದ್ಘಾಟಿಸಿದ ವಿಧಾನಸಭಾಧ್ಯಕ್ಷ ಯುಟಿ ಖಾದರ್
ಏಕದಿನ ಕ್ರಿಕೆಟ್ನಲ್ಲಿ 32ನೇ ಶತಕ ಪೂರೈಸಿದ ಬಳಿಕ ಮಾತನಾಡಿರುವ ರೋಹಿತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಟಕ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ 90 ಎಸೆತಗಳಲ್ಲಿ 12 ಬೌಂಡರಿ ಮತ್ತು ಏಳು ಸಿಕ್ಸರ್ಗಳ ಸಹಾಯದಿಂದ 119 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದಲ್ಲದೆ, ಏಕದಿನ ಸರಣಿಯನ್ನು ತಂಡದ ಖಾತೆಗೆ ಹಾಕಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ರೋಹಿತ್, ಟೀಕಾಕಾರರಿಗೆ ಮಾರ್ಮಿಕವಾಗಿಯೇ ಉತ್ತರಿಸಿದ್ದಾರೆ.
ಇಷ್ಟು ದಿನ ನಾನು ಇದರ ಬಗ್ಗೆಯೇ ಮಾತನಾಡುತ್ತಿದ್ದದ್ದು, ನಾನು ಹೇಳುತ್ತಿರುವುದೇನೆಂದರೆ, ನೋಡಿ, ಒಬ್ಬ ಕ್ರಿಕೆಟಿಗ ಹಲವು ವರ್ಷಗಳ ಕಾಲ ಕ್ರಿಕೆಟ್ ಆಡಿದ್ದಾನೆ ಮತ್ತು ವರ್ಷಗಳಲ್ಲಿ ಹಲವಾರು ರನ್ ಗಳಿಸಿದ್ದಾನೆ ಎಂದರೆ ಅವನಲ್ಲಿ ಏನೋ ಇದೆ ಎಂದರ್ಥ. ನಾನು ಈ ಆಟವನ್ನು ಬಹಳ ಸಮಯದಿಂದ ಆಡುತ್ತಿದ್ದೇನೆ ಮತ್ತು ನನ್ನಿಂದ ಏನು ಬೇಕು ಎಂದು ನನಗೆ ಅರ್ಥವಾಗಿದೆ. ಹಾಗಾಗಿ ನನ್ನ ಕೆಲಸವೆಂದರೆ ಮೈದಾನಕ್ಕೆ ಹೋಗಿ ನನ್ನ ಪಾತ್ರವನ್ನು ನಿರ್ವಹಿಸುವುದು.
ಪಂದ್ಯದಲ್ಲಿ ನಾನು ಮಾಡಿದ್ದು ಅಂತಹ ಕೆಲಸಗಳಲ್ಲಿ ಒಂದಾಗಿದೆ. ನಾನು ಮಾಡುತ್ತಿದ್ದ ಕೆಲಸವನ್ನು ನಾನು ಮಾಡಬೇಕು ಎಂಬುದಷ್ಟೇ ನನ್ನ ಮನಸ್ಸಿನಲ್ಲಿತ್ತು. ನಾನು ಈಗ ಮಾಡುತ್ತಿರುವಂತೆಯೇ ಬ್ಯಾಟಿಂಗ್ ಮಾಡಲು ಈ ಹಿಂದೆಯೂ ಪ್ರಯತ್ನಿಸುತ್ತಿದ್ದೆ. ನಾನು ಈ ಆಟದಲ್ಲಿ ಬಹಳ ಸಮಯದಿಂದ ಇದ್ದೇನೆ. ಒಂದು ಅಥವಾ ಎರಡು ಇನ್ನಿಂಗ್ಸ್ಗಳು ನನ್ನ ಮನಸ್ಸನ್ನು ಬದಲಾಯಿಸುವುದಿಲ್ಲ ಅಥವಾ ನನಗೆ ತೃಪ್ತಿಯನ್ನು ತರುವುದಿಲ್ಲ ಎಂದರು.