ಬೀದರ್ : ನಗರದ ಬಸವಗೀರಿಯಲ್ಲಿ ಮೂರು ದಿನಗಳ ಕಾಲ ನಡಯಲಿರುವ ವಚನ ವಿಜಯೋತ್ಸವಕ್ಕೆ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಉದ್ಘಾಟನೆ ಮಾಡಿದರು. ಕರ್ನಾಟಕ ದ ಹೆಮ್ಮೆಯ ವಚನ ವಿಜಯೋತ್ಸವಕ್ಕೆ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ ಯುವ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿಗೆ ಭವ್ಯ ಸ್ವಾಗತ
ನಗರದ ಬಸವಗೀರಿ ಯಲ್ಲಿ ಬಸವ ಸೇವಾ ಪ್ರತಿಷ್ಠಾನ ಅಧ್ಯಕ್ಷ ಡಾ.ಗಂಗಾಂಬಿಕಾ ಅಕ್ಕಾ ಅವರ ನೇತೃತ್ವದಲ್ಲಿ ವಚನ ವಿಜಯೋತ್ಸವ ಕಾರ್ಯಕ್ರಮ ನಡೆಯಲಿವೆ. ಬೀದರ ಜಿಲ್ಲಾ ಉಸ್ತುವಾರಿ ಸಚಿವ ಅರಣ್ಯ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಮತ್ತು ಹಜ್ ಸಚಿವ ರಹೀಂಖಾನ್ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಸಾಥ ನೀಡಿದ್ದರು. ಕರ್ನಾಟಕ ವಿವಿಧ ಜಿಲ್ಲೆಯ ಸಹಸ್ರಾರು ಬಸವ ಭಕ್ತರು ಭಾಗಿಯಾಗಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯುಟಿ ಖಾದರ್, ರಾಜಕೀಯ ಬಿಟ್ಟು ನಾವು ಇಲ್ಲಿಗೆ ಎಲ್ಲರೂ ಬಂದಿದ್ದೇವೆ. ಭಾರತ ದೇಶ ಅತ್ಯುತ್ತಮವಾಗಿ ಮುಂದೆ ಹೋಗಬೇಕಾದರೆ 50% ರಷ್ಟು ಮಹಿಳೆಯರಿಗೆ ಸ್ಥಾನ ನೀಡಬೇಕು. ಸಾಮಾಜಿಕ ಪೀಡುಗೆಗೆ ದಟ್ಟ ಔಷಧವೇ ಬಸವ ತತ್ವ. ಇದನ್ನು ಒಂಬತ್ತು ನೂರು ವರ್ಷ ದ ಹಿಂದೆ ಬಸವಣ್ಣ ಹೇಳಿದ್ದಾರೆ. ವಚನ ಜನಜಾಗೃತಿ ಮಾಡುವುದು ನಮ್ಮ ಕರ್ತವ್ಯ ವಾಗಿದೆ ಎಂದರು.