ಬೆಂಗಳೂರು:- ಏಷ್ಯಾದ ಅತಿದೊಡ್ಡ ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನ ಏರೋ ಇಂಡಿಯಾ ಶೋ ಆರಂಭಗೊಂಡಿದೆ. ಉತ್ತರದಲ್ಲಿ ಮಹಾಕುಂಭ.. ದಕ್ಷಿಣದಲ್ಲಿ ತಂತ್ರಜ್ಞಾನ ಕುಂಭ ಅಂತಾ ಗೃಹಸಚಿವ ರಾಜನಾಥ್ ಸಿಂಗ್ ಏರ್ ಶೋವನ್ನು ಬಣ್ಣಿಸಿದ್ದಾರೆ. ಐದು ದಿನಗಳ ಕಾಲ ನಡೆಯಲಿರುವ ಏರ್ ಶೋ ದೇ ರನ್ ವೇ ಟು ಎ ಬಿಲಿಯನ್ ಆಪರ್ಚುನಿಟೀಸ್ ಎಂಬ ಧ್ಯೇಯದೊಂದಿಗೆ ಅದ್ದೂರಿ ಚಾಲನೆ ಪಡೆದಿದೆ.
ಪ್ರತಿಬಾರಿಯಂತೆ ಹೈಟೆಕ್ ಸಿಟಿ, ಐಟಿಬಿಟಿ ಸಿಟಿ ಅಂತಾನೇ ಕರೆಸಿಕೊಳ್ಳೋ ಬೆಂಗಳೂರು ಸಾಕ್ಷಿಯಾಗುತ್ತಿದೆ. ಈವರೆಗೂ ನಡೆದ ಏರ್ ಶೋಗಳಲ್ಲಿ ಇದೇ ಅತಿದೊಡ್ಡ ಏರೋ ಇಂಡಿಯಾ ಪ್ರದರ್ಶನವಾಗಲಿದೆ. 90 ಕ್ಕೂ ಅಧಿಕ ದೇಶಗಳ ಪಾಲ್ಗೊಳ್ಳುವಿಕೆಯು ಭಾರತದ ವೈಮಾನಿಕ ಮತ್ತು ರಕ್ಷಣಾ ಸಾಮರ್ಥ್ಯಗಳಲ್ಲಿ ಬೆಳೆಯುತ್ತಿರುವ ಜಾಗತಿಕ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಅಂಲೂ ಗೃಹ ಸಚಿವರು ಬಣ್ಣಿಸಿದ್ದಾರೆ.
15ನೇ ಏರೋ ಇಂಡಿಯಾ 2025 ರ ಫೆ.10 – 14 ರವರೆಗೆ ನಡೆಯಲಿದೆ. ಈ ಬಾರಿಯ ಏರೋ ಇಂಡಿಯಾ ಹೊಸ ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ರಕ್ಷಣಾ ಸಚಿವರ ಸಮಾವೇಶ, ಸಿಇಓಗಳ ದುಂಡುಮೇಜಿನ ಸಭೆ, ಭಾರತ ಮತ್ತು ಐಡಿಇಎಕ್ಸ್ ಮಳಿಗೆಗಳ ಉದ್ಘಾಟನೆ; ಮಂಥನ ಐಡಿಇಎಕ್ಸ್ ಕಾರ್ಯಕ್ರಮ; ಸಮರ್ಥ್ಯ ದೇಶೀಕರಣ ಕಾರ್ಯಕ್ರಮ; ಸಮಾರೋಪ ಸಮಾರಂಭ; ವಿಚಾರ ಸಂಕಿರಣಗಳು; ಉಸಿರುಬಿಗಿ ಹಿಡಿದು ನೋಡುವಂತಹ ರೋಮಾಂಚಕ ವೈಮಾನಿಕ ಪ್ರದರ್ಶನಗಳು ಮತ್ತು ಏರೋಸ್ಪೇಸ್ ಕಂಪನಿಗಳ ಪ್ರದರ್ಶನ ಸೇರಿವೆ.
ರಕ್ಷಣಾ ವಲಯದಲ್ಲಿ ದೇಶೀಕರಣ ಮತ್ತು ನಾವೀನ್ಯತೆಯ ಯಶೋಗಾಥೆಯ ಕುರಿತು ಫೆಬ್ರವರಿ 12 ರಂದು ರಕ್ಷಣಾ ಸಚಿವರು ಅಧ್ಯಕ್ಷತೆ ವಹಿಸಲಿರುವ ಸಮಾರೋಪ ಸಮಾರಂಭದ ಜೊತೆಗೆ ‘ಸಮರ್ಥ್ಯ’ ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದೆ. ಏರೋ ಇಂಡಿಯಾದ ವೇಳೆ ಈ ಕಾರ್ಯಕ್ರಮವು ಇದೇ ಪ್ರಥಮವಾಗಿದೆ. ಇನ್ನೂ ಇದು ಡಿಪಿಎಸ್ಯುಗಳು, ಡಿಆರ್ಡಿಒ ಮತ್ತು ಸೇವೆಗಳಿಂದ ಖಾಸಗಿ ವಲಯದ ಒಳಗೊಳ್ಳುವಿಕೆಯೊಂದಿಗೆ ಸ್ಥಳೀಯವಾಗಿ ಉತ್ಪಾದಿಸಲಾದ ಕೆಲವು ಪ್ರಮುಖ ವಸ್ತುಗಳನ್ನು ಪ್ರದರ್ಶಿಸುವ ಮೂಲಕ ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಸ್ಥಳೀಯ ಜಾಣ್ಮೆಯನ್ನು ಪ್ರದರ್ಶಿಸುತ್ತದೆ.
ಇನ್ನೂ ಐತಿಹಾಸಿಕವಾಗಿ ಇದೇ ಮೊದಲ ಬಾರಿಗೆ -ಎಸ್ ಯು-57 ಮತ್ತು ಎಫ್ -35 ಏರೋ ಇಂಡಿಯಾದಲ್ಲಿ ಪ್ರದರ್ಶನವಾಗಲಿದೆ. 2025ರ ಏರೋ ಇಂಡಿಯಾ ಶೋ ವಿಶ್ವದ ಎರಡು ಅತ್ಯಂತ ಮುಂದುವರಿದ ಐದನೇ ತಲೆಮಾರಿನ ಯುದ್ಧ ವಿಮಾನಗಳಾದ ರಷ್ಯಾದ ಸು-57 ಮತ್ತು ಅಮೇರಿಕನ್ ಎಫ್-35 ಲೈಟ್ನಿಂಗ್ II ಪಾಲ್ಗೊಳ್ಲುವಿಕೆಗೆ ಸಾಕ್ಷಿಯಾಗಲಿದೆ.
ರಷ್ಯಾದ ಪ್ರಧಾನ ಸ್ಟೆಲ್ತ್ ಮಲ್ಟಿರೋಲ್ ಫೈಟರ್ ಅನ್ನು ಉನ್ನತ ವಾಯು ಶ್ರೇಷ್ಠತೆ ಮತ್ತು ದಾಳಿ ಸಾಮರ್ಥ್ಯಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಸುಧಾರಿತ ಏವಿಯಾನಿಕ್ಸ್, ಸೂಪರ್ಕ್ರೂಸ್ ಸಾಮರ್ಥ್ಯ ಮತ್ತು ಸ್ಟೆಲ್ತ್ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿರುವ ಇದು ಏರೋ ಇಂಡಿಯಾ 2025 ರಲ್ಲಿ ಚೊಚ್ಚಲ ಹಾರಾಟ ಮಾಡಲಿದೆ. ವೀಕ್ಷಕಕರು ಫೈಟರ್ನ ಚುರುಕುತನ, ಸ್ಟೆಲ್ತ್ ಮತ್ತು ಫೈರ್ಪವರ್ ಅನ್ನು ಎತ್ತಿ ತೋರಿಸುವ ಹೈ-ಸ್ಪೀಡ್ ವೈಮಾನಿಕ ಇರಲಿದೆ.
ಅತ್ಯಂತ ವ್ಯಾಪಕವಾಗಿ ನಿಯೋಜಿಸಲಾದ ಐದನೇ ತಲೆಮಾರಿನ ಫೈಟರ್ ಲಾಕ್ಹೀಡ್ ಮಾರ್ಟಿನ್ ಎಫ್-35 ಲೈಟ್ನಿಂಗ್ II, ಸುಧಾರಿತ ಸ್ಟೆಲ್ತ್ ಸಾಟಿಯಿಲ್ಲದ ಸಾಂದರ್ಭಿಕ ಅರಿವು ಮತ್ತು ನೆಟ್ವರ್ಕ್ಡ್ ಯುದ್ಧ ಸಾಮರ್ಥ್ಯಗಳನ್ನು ಸಂಯೋಜಿಸುತ್ತದೆ. ಏರೋ ಇಂಡಿಯಾ 2025 ರಲ್ಲಿ ಇದರ ಉಪಸ್ಥಿತಿಯು ವೀಕ್ಷಕಕರಿಗೆ ಅಮೆರಿಕಾದ ವಾಯುಪಡೆಯ ಪ್ರಾಮುಖ್ಯತೆಯಾಗಿದೆ.