ಬೆಂಗಳೂರು:- ರಾಜಧಾನಿ ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಜರುಗಿದ ಸೂರ್ಯ ನಮಸ್ಕಾರ ಮತ್ತು ಯೋಗ ಉತ್ಸವದಲ್ಲಿ ಪರಿಷತ್ ಶಾಸಕ ಟಿಎ ಶರವಣ ಭಾಗಿಯಾಗಿದ್ದರು.
ರಥ ಸಪ್ತಮಿ ಅಂಗವಾಗಿ ಕರ್ನಾಟಕ ಸರ್ಕಾರ, ಆಯುಷ್ ಇಲಾಖೆ ಯೋಗ ಗಂಗೋತ್ರಿ ವತಿಯಿಂದ ಆಯೋಜನೆ ಮಾಡಲಾದ ಈ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ದೊರೆಯಿತು.
ನಗರದ ವಿವಿಧೆಡೆಯಿಂದ ಚಳಿಯ ನಡುವೆಯೂ ಬಂದಿದ್ದ ನೂರಾರು ಯೋಗಪಟುಗಳು ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಪರಿಷತ್ ಶಾಸಕ ಟಿಎ ಶರವಣ ಅವರ ಜೊತೆ ಭಾಗವಹಿಸಿದ್ದರು.
ಬಳಿಕ ಟಿಎ ಶರವಣ ಮಾತನಾಡಿ, ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಯೋಗ ದೇಹಕ್ಕೆ ಮಾತ್ರವಲ್ಲ, ಒತ್ತಡಗಳನ್ನೂ ನಿಯಂತ್ರಿಸಲಿದೆ. ಹೀಗಾಗಿ ಯುವ ಸಮೂಹ ಯೋಗಕ್ಕೆ ಆದ್ಯತೆ ನೀಡಿ ಎಂದರು.
ಈ ಸಂದರ್ಭದಲ್ಲಿ ಚಿತ್ರನಟಿ ತಪಸ್ವಿನಿ ಪೂಣಚ್ಚ, ರಾಜವರ್ಧನ್ ಆರಾಧ್ಯ ಗುರೂಜಿ ಸೇರಿ ಮತ್ತಿತರರು ಪಾಲ್ಗೊಂಡಿದ್ದರು.