ದೆಹಲಿ : ಚುನಾವಣಾ ಫಲಿತಾಂಶದ ಬಳಿಕ ಸಿಎಂ ಸ್ಥಾನಕ್ಕೆ ಅತಿಶಿ ಮರ್ಲೆನಾ ರಾಜೀನಾಮೆ ಸಲ್ಲಿಸಿದ್ದಾರೆ. ಕಳೆದ ಶನಿವಾರ ದೆಹಲಿ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ 48 ಸ್ಥಾನಗಳಲ್ಲಿ, ಆಮ್ ಆದ್ಮಿ ಪಕ್ಷ 22 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಸದ್ಯ ಇನ್ನೂ ಸಹ ಬಿಜೆಪಿ ಮುಖ್ಯಮಂತ್ರಿಯ ಹೆಸರನ್ನು ಘೋಷಣೆ ಮಾಡಿಲ್ಲ. ಈ ಮಧ್ಯೆಯೇ ಅತಿಶಿ ಮರ್ಲೆನಾ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ಬಿಜೆಪಿ ಇನ್ನೂ ಸಹ ಮುಖ್ಯಮಂತ್ರಿಯಾರೆಂದು ಘೋಷಿಸಿಲ್ಲ. ಪ್ರಧಾನಿ ಮೋದಿ ವಿದೇಶ ಪ್ರವಾಸ ಮುಗಿಸಿದ ಬಳಿಕ ದೆಹಲಿಯಲ್ಲಿ ನೂತನ ಸಿಎಂ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಇಂದು ಸಂಜೆ ದೆಹಲಿಯ ಬಿಜೆಪಿ ಅಧ್ಯಕ್ಷರು ಎಲ್ಲಾ ವಿಜೇತ ಶಾಸಕರನ್ನು ಭೇಟಿ ಮಾಡಲಿದ್ದಾರೆ. ಹರಿಯಾಣ ಭವನದಲ್ಲಿ ನೈಬ್ ಸಿಂಗ್ ಸೈನಿ ಜಿಲೇಬಿ ಪಾರ್ಟಿ ಸಹ ಆಯೋಜಿಸಲಾಗಿದೆ.
ಸದ್ಯ ಚುನಾವಣಾ ಫಲಿತಾಂಶದಲ್ಲಿ ಆಮ್ ಆದ್ಮಿ ಪಕ್ಷದ ಅನೇಕ ದೊಡ್ಡ ನಾಯಕರು ಚುನಾವಣೆಯಲ್ಲಿ ಸೋತಿದ್ದರು. ಆದರೆ ಆಪ್ನ ಪ್ರಮುಖ ನಾಯಕಿ ಅತಿಶಿ ಕಲ್ಕಾಜಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅರವಿಂದ್ ಕೇಜ್ರಿವಾಲ್ , ಜಂಗ್ಪುರ ಕ್ಷೇತ್ರದಿಂದ ಮನೀಶ್ ಸಿಸೋಡಿಯಾ, ಗ್ರೇಟರ್ ಕೈಲಾಶ್ ನಿಂದ ಸ್ಪರ್ಧಿಸಿದ್ದ ಸೌರಭ್ ಭಾರದ್ವಾಜ್ ಸೋಲು ಕಂಡಿದ್ದರು.