ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇತ್ತೀಚೆಗೆ ಜಾಮೀನಿನ ಮೇಲೆ ಹೊರ ಬಂದಿರುವ ನಟ ದರ್ಶನ್ ಅವರು, ಮೊದಲ ಬಾರಿಗೆ ಅಭಿಮಾನಿಗಳ ಮುಂದೆ ಬಂದಿದ್ದಾರೆ.
ಜೈಲಿನಿಂದ ಹೊರ ಬಂದ ಬಳಿಕ ಮೊದಲ ಬಾರಿಗೆ ದರ್ಶನ್ ತನ್ನ ಸೆಲೆಬ್ರಿಟಿಗಳಿಗೆ ಸಂದೇಶ ನೀಡಿದ್ದಾರೆ. ದರ್ಶನ್ ಹೇಳಿದ ಅದೊಂದು ಮಾತಿಗೆ ಫ್ಯಾನ್ಸ್ ಕೂಡ ಭಾವುಕರಾಗಿದ್ದಾರೆ.
‘6 ನಿಮಿಷ 38 ಸೆಕೆಂಡ್ ಇರೋ ವಿಡಿಯೋವೊಂದನ್ನು ಮಾಡಿ ದರ್ಶನ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗ್ತಿದೆ. ಜೈಲಿನಿಂದ ಹೊರ ಬಂದ ಬಳಿಕ ಮೊಟ್ಟ ಮೊದಲ ವಿಡಿಯೋ ಆಗಿರುವುದರಿಂದ ಫ್ಯಾನ್ಸ್ ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಸಾಕಷ್ಟು ವಿಚಾರಗಳ ಬಗ್ಗೆ ದರ್ಶನ್ ಮಾತನಾಡಿದ್ದಾರೆ. ಈ ಬಾರಿ ಹುಟ್ಟುಹಬ್ಬಕ್ಕೆ ನಾನು ನಿಮ್ಮನ್ನು ಭೇಟಿಯಾಗೋದಿಲ್ಲ, ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ದರ್ಶನ್ ತಮ್ಮ ಸೆಲೆಬ್ರಿಟಿಗಳಿಗೆ ಕೇಳಿಕೊಂಡಿದ್ದಾರೆ. ಆದರೆ ದರ್ಶನ್ ಬಾಯಿಂದ ಅದೊಂದು ಮಾತಿಗೆ ಫ್ಯಾನ್ಸ್ ನಿಜಕ್ಕೂ ಭಾವುಕರಾಗಿದ್ದಾರೆ. ನಿಮ್ಮನ್ನು ದೂರದಿಂದ ಮಾತಾನಾಡಿಸೋದು ಇರಲಿ, ಸುಮ್ನೆ ದೂರದಿಂದ ಕೈ ಬಿಸೋಕೆ ನನಗೆ ಇಷ್ಟ ಇಲ್ಲ. ಎಲ್ಲರನ್ನು ನಾನೂ ಭೇಟಿಯಾಗ್ತೀನಿ ಅಂತ ದರ್ಶನ್ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.
ಇದನ್ನು ಕೇಳಿದ ದರ್ಶನ್ ಅಭಿಮಾನಿಗಳು ಭಾವುಕರಾಗಿದ್ದಾರೆ. ಇಷ್ಟೆಲ್ಲಾ ನೋವಿದ್ದರು ನಮ್ಮನ್ನೆಲ್ಲಾ ನೇರವಾಗಿ ಭೇಟಿಯಾಗ್ತಿನಿ ಅಂತಿದ್ದಾರೆ. ದೊಡ್ಡ ಸ್ಟಾರ್ ನಟ ಆದ್ರೂ ದೂರದಿಂದ ಕೈ ಬಿಸಿ ಕಳಿಸೋದು ಇಷ್ಟವಿಲ್ಲ ಅಂತಿದ್ದಾರೆ. ಅದಕ್ಕೆ ನಿಮ್ಮನ್ನು ಪುಣ್ಯಾತ್ಮ ಅನ್ನೋದು ಅಂತ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬರೆದುಜಕೊಳ್ಳುತ್ತಿದ್ದಾರೆ.
ನಿರ್ಮಾಪಕ ಸೂರಪ್ಪ ಬಾಬುಗೆ ಹಣ ವಾಪಸ್ ಕೊಟ್ಟ ವಿಚಾರ ಕುರಿತು ಮಾತನಾಡಿದ ದರ್ಶನ್, ನನ್ನ ಸೆಲೆಬ್ರಿಟಿಗಳು ಯಾವುದೇ ಊಹಾಪೋಹಗಳಿಗೆ ಕಿವಿಗೆ ಹಾಕೋಬೇಡಿ. ಸೂರಪ್ಪ ಬಾಬು ಅವರಿಗೆ ಹಣ ವಾಪಸ್ ಕೊಟ್ಟಿದ್ದು ಸತ್ಯ. ಅದು ಏನಕ್ಕೆ ಎಂದರೆ ಇಂಡಸ್ಟ್ರಿಯಲ್ಲಿ ನನಗೆ ತುಂಬಾ ಪರಿಚಯ ಇರೋರು ಬಂದು ಅವರಿಗೆ ಕಮಿಟ್ಮೆಂಟ್ಸ್ ಇವೆ. ಸಿನಿಮಾ ಮಾಡಿಕೊಡಬೇಕು ಎಂದಿದ್ದರು. ಅದರಂತೆ ಮಾಡಿಕೊಡಣ ಎಂದು ಹೇಳಿದ್ದೆ.
ಆದರೆ ಆ ಮೇಲೆ ಏನ್ ನಡೆದಿದೆ ಎಂದು ನಿಮಗೆಲ್ಲಾ ಗೊತ್ತು. ಟೈಮ್ ಎಲ್ಲ ವೇಸ್ಟ್ ಆಗಿದೆ. ಇಂತಹ ಸಮಯದಲ್ಲಿ ಅವರ ದುಡ್ಡನ್ನು ನಾನೇ ಇಟ್ಟುಕೊಂಡರೇ ಅವರಿಗೆ ಕಮಿಟ್ಮೆಂಟ್ಸ್ ಜಾಸ್ತಿ ಆಗುತ್ತದೆ. ಅದಕ್ಕಾಗಿಯೇ ಹಣ ವಾಪಸ್ ಮಾಡಿದೆ. ಮುಂದೆ ಒಳ್ಳೆಯ ವಿಷಯ ಸಿಕ್ಕಾಗ ಸಿನಿಮಾ ಮಾಡೋಣ ಎಂದು ಹೇಳಿ ಹಣ ಕೊಟ್ಟಿದ್ದೇನೆ ಎಂದು ದರ್ಶನ್ ಅವರು ಹೇಳಿದ್ದಾರೆ.
ನಾನು ಪ್ರೇಮ್ ಖಂಡಿತಾ ಸಿನಿಮಾ ಮಾಡೇ ಮಾಡುತ್ತೇವೆ. ಏಕೆಂದರೆ ನನ್ನ ಗುರುಗಳು, ನನ್ನ ಪ್ರೀತಿಯ ಸ್ನೇಹಿತೆ ರಕ್ಷಿತಾ ಅವರ ಆಸೆ ಆಗಿದೆ. ಸಿನಿಮಾ ಮಾಡೇ ಮಾಡೋಣ. ಆದರೆ ಈಗ ಕೆವಿಎನ್ ಪ್ರೊಡಕ್ಷನ್ ಅವರು ಈಗಾಗಲೇ ಬೇರೆ ಪ್ರೊಡಕ್ಷನ್ ಮಾಡುತ್ತಿದ್ದಾರೆ. ಮಧ್ಯೆಕ್ಕೆ ಹೋಗಲು ಆಗಲ್ಲ. ನಿರ್ಮಾಪಕರು ಎಂದರೆ ಕೇವಲ ದುಡ್ಡು ಹೊಂದಿಸುವುದು ಮಾತ್ರ ಅಲ್ಲ. ಅಡ್ವಾನ್ಸ್ ಕೊಟ್ಟು ರಿಲೀಸ್ ಆಗೋವರೆಗೆ ಅವರದೇ ಕೆಲಸ ಇರುತ್ತದೆ ಎಂದು ಹೇಳಿದ್ದಾರೆ.