ತುಮಕೂರು : ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ತುಮಕೂರುನಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಸೋಮಣ್ಣ, ನನಗೆ ನಾಗ್ಲೋಯಿ ವಿಧಾನಸಭಾ ಕ್ಷೇತ್ರದ ಉಸ್ತವಾರಿ ವಹಿಸಲಾಗಿತ್ತು, ಗೊತ್ತಿರುವಷ್ಟು ಹಿಂದಿಯಲ್ಲೇ ನೂರಿನ್ನೂರು ಜನರನ್ನು ಸೇರಿಸಿ ಸಭೆ ಮಾಡುತ್ತಾ ದಿನಕ್ಕೆ 8-10 ತಾಸು ಕೆಲಸ ಮಾಡುತ್ತಿದ್ದೆ, ಪುಣ್ಕಕ್ಕೆ ಅಲ್ಲಿ ಬಿಜೆಪಿ ಅಭ್ಯರ್ಥಿ ಮನೋಜ್ ಕುಮಾರ್ ಶೋಕೀನ್ ಗೆದ್ದಿದ್ದಾರ ಎಂದರು. ನಾಗಲೋಯಿ ಜಾಟ್ ಕ್ಷೇತ್ರದಲ್ಲಿ ಜೀವನದಲ್ಲಿ ಗೆದ್ದಿರಲಿಲ್ಲ, ಅಲ್ಲಿ ಗೆದ್ದಿದ್ದೇವೆ. ಮೂರು ವರ್ಷಗಳಲ್ಲಿ ದೆಹಲಿ ಅಭಿವೃದ್ಧಿ ಆಗಲಿದೆ. ಮೋದಿಯವರು ಅಭಿವೃದ್ಧಿ ಮಾಡಲಿದ್ದಾರೆ. ಅಣ್ಣ ಹಜಾರೆ ಹೆಸರಿನಲ್ಲಿ ಹೋದ ಕ್ರೇಜಿವಾಲ್ ಹೋದರೂ ಅವರ ಬಗ್ಗೆ ಜನರಿಗೆ ಅರ್ಥವಾಗಿದೆ. ದೇಶದ ರಾಜಧಾನಿ ಮೇಲ್ಪಂಕ್ತಿಯಲ್ಲಿ ಇರಬೇಕೆಂದು ತೋರಿಸಿದ್ದಾರೆ. ಅದಕ್ಕೆ ಧನ್ಯವಾದಗಳು ಎಂದರು.
ಎಎಪಿಯ ಆಡಳಿತ ವೈಖರಿಗೆ ಬೇಸತ್ತು ಜನ ಬಿಜೆಪಿ ಗೆಲ್ಲಿಸಿದ್ದಾರೆ: ಬೊಮ್ಮಾಯಿ!
ಇನ್ನೂ ಕುಂಭಮೇಳ ಐತಿಹಾಸಿಕವಾಗಿತ್ತು. ಒಬ್ಬನೇ ಹೋಗಿ ರೈಲಿನಲ್ಲಿ ನೋಡಿದೆ. ಯಾರಿಗೂ ಕಾಯಿಲೆ ಇಲ್ಲ ಏನಿಲ್ಲ. ಲಕ್ಷಾಂತರ ಜನರು ಔಟ್ ಪೆಷೆಂಟ್ ಬಂದರು. 450 ಜನರು ಮಾತ್ರ ದಾಖಲಾಗಿದ್ದರು. ಕಾಂಗ್ರೆಸ್ ನವರು ಕೂಡ ಹೋಗಿ ಕುಂಭಮೇಳದಲ್ಲಿ ಮಿಂದು ಬರ್ತಿದ್ದಾರೆ. ಭಗವಂತ ಮೋದಿ ಯೋಗಿಯವರ ಜೊತೆ ಇದ್ದಾರೆ ಎಂದರು.