ಮೈಸೂರು: ಪ್ರಯಾಗ್ ರಾಜ್ನ ಮಹಾಕುಂಭಮೇಳದ ಬಳಿಕ ಇದೀಗ ದಕ್ಷಿಣ ಕುಂಭಮೇಳಕ್ಕೆ ಸಜ್ಜಾಗುತ್ತಿದೆ. ಮೈಸೂರಿನ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ 13ನೇ ವರ್ಷದ ಕುಂಭಮೇಳಕ್ಕೆ ಸಕಲ ಸಿದ್ದತೆಗಳು ನಡೆಯುತ್ತಿವೆ. ಫೆಬ್ರವರಿ 10ರಿಂದ ಕುಂಭಮೇಳ ಮೂರು ದಿನಗಳ ಕಾಲ ನಡೆಯಲಿದ್ದು, ಇಂದು ತ್ರಿವೇಣಿ ಸಂಗಮಕ್ಕೆ ನಿರ್ಮಲಾನಂದನಾಥ ಶ್ರೀಗಳು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.
10 ಎಕರೆ ಜಮೀನು: ಕೃಷಿ ನಿಲ್ಲಿಸಲು ಹೊರಟಿದ್ದ ವ್ಯಕ್ತಿ ಈಗ ಮಾದರಿ ರೈತ!
ಸ್ಥಳ ಪರಿಶೀಲನೆ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಿರ್ಮಲಾನಂದನಾಥ ಶ್ರೀಗಳು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಕುಂಭಮೇಳಕ್ಕೆ ಆಗಮಿಸುತ್ತಾರೆ. ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ನೀಡಬೇಕು. ಕುಂಭಮೇಳ ಯಶಸ್ವಿಗೆ ಅಧಿಕಾರಿಗಳು, ಸಾರ್ವಜನಿಕರ ಸಹಕಾರ ಮುಖ್ಯ. ಯಾವುದೇ ಲೋಪದೋಷ ಆಗದ ರೀತಿಯಲ್ಲಿ ಕ್ರಮವಹಿಸಿ ಎಂದು ಸಲಹೆ ನೀಡಿದರು.