ಅಲಾಸ್ಕಾ: ಗುರುವಾರ ಅಲಾಸ್ಕಾದ ನೋಮ್ ಬಳಿ ನಾಪತ್ತೆಯಾಗಿದ್ದ ಪ್ರಯಾಣಿಕರ ವಿಮಾನವು ಪಶ್ಚಿಮ ಅಲಾಸ್ಕಾದಲ್ಲಿ ಪತನಗೊಂಡಿತ್ತು. ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲ 10 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 25 ವರ್ಷಗಳಲ್ಲಿ ಅಮೆರಿಕದಲ್ಲಿ ಸಂಭವಿಸಿರುವ ಅತ್ಯಂತ ಭೀಕರ ವಿಮಾನ ಅಪಘಾತ ಇದಾಗಿದೆ ಎನ್ನಲಾಗುತ್ತಿದೆ.
ರಕ್ಷಣಾ ಪಡೆಯ ಸಿಬ್ಬಂದಿಗಳು ಹೆಲಿಕಾಪ್ಟರ್ ಮೂಲಕ ಶೋಧ ಕಾರ್ಯವನ್ನು ನಡೆಸುತ್ತಿದ್ದಾಗ, ವಿಮಾನದ ಅವಶೇಷಗಳು ಕಂಡು ಬಂದವು. ತಕ್ಷಣವೇ ಇಬ್ಬರು ಈಜುಗಾರರನ್ನು ಸಮುದ್ರಕ್ಕಿಳಿಸಲಾಯಿತು. ಈ ವೇಳೆ ವಿಮಾನ ಪತನಗೊಂಡಿರುವುದು ತಿಳಿದು ಬಂದಿತ್ತು ಎಂದು ಅಮೆರಿಕ ಕರಾವಳಿ ಪಡೆಯ ವಕ್ತಾರ ಮೈಕ್ ಸಲೆರ್ನೊ ಹೇಳಿದ್ದಾರೆ.
“ಈ ನಷ್ಟವನ್ನು ಸ್ವೀಕರಿಸಲು ತುಂಬಾ ಕಷ್ಟವಾಗುತ್ತಿದೆ” ಎಂದು ಶುಕ್ರವಾರ ಸಂಜೆ ನಡೆದ ಸುದ್ದಿ ಗೋಷ್ಠಿಯಲ್ಲಿ ಅಮೆರಿಕದ ಸೆನೆಟರ್ ಲೀಸಾ ಮುರ್ಕೋವ್ ಸ್ಕಿ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ದುರಂತದ ಸುದ್ದಿಯಿಂದ ಗದ್ಗದಿತರಾಗಿದ್ದ ನೋಮ್ ಮೇಯರ್ ಜಾನ್ ಹ್ಯಾಂಡೆಲ್ಯಾಂಡ್, ಅಪಘಾತದಲ್ಲಿ ಸಂಭವಿಸಿದ ಮೃತ್ಯುಗಳು ಹಾಗೂ ರಕ್ಷಣಾ ಪ್ರಯತ್ನದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು ಎಂದು ವರದಿಯಾಗಿದೆ.