ತುಮಕೂರು: ತುಮಕೂರಿನಲ್ಲಿ ಮತ್ತೆ ಹಾಲಿ, ಮಾಜಿ ಶಾಸಕರ ವಾಕ್ಸಮರ ಮುಂದುವರೆದಿದ್ದು, ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ ಗೌಡ ವಿರುದ್ಧ ಮಾಜಿ ಶಾಸಕ ಗೌರಿಶಂಕರ್ ವಾಗ್ದಾಳಿ ನಡೆಸಿದ್ದಾರೆ. ತುಮಕೂರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಚುನಾವಣೆಗೂ ಮುನ್ನ ನೀಡಿದ ಒಂದು ಭರವಸೆ ಈಡೇರಿಸಿಲ್ಲ. ಒಂದು ಭರವಸೆ ಈಡೇರಿಸೋಕಾಗದ ಶಾಸಕ ಎಂದು ಪದ ಬಳಕೆ ಮಾಡಿದ್ದಾರೆ. ಪಾಪಗಳನ್ನೆಲ್ಲ, ಮಾಡಿರುವ ತಪ್ಪುಗಳನ್ನೆಲ್ಲ ತಿದ್ದಿಕೊಂಡು ಬರ್ತರೆ ಮನುಷ್ಯ ಅನ್ಕೊಂಡೆ. ಇನ್ನು ಮುಂದೆ ಒಳ್ಳೆಯವನಗುತ್ತಾನೆ, ಒಳ್ಳೆ ಬುದ್ದಿ ಕಲಿತಾನೆ, ಜನಗಳಿಗೆ ಗೌರವ ಕೊಡುತ್ತಾನೆ, ಒಳ್ಳೆ ಕೆಲಸ ಮಾಡುತ್ತಾನೆ ಅಂದುಕೊಂಡೆ.
ದೆಹಲಿಯಲ್ಲಿ ರೆಬೆಲ್ಸ್ ಟೀಂಗೆ ಅವಮಾನ ; ರೆಬಲ್ ನಾಯಕ ಯತ್ನಾಳ್ ಹೇಳಿದಿಷ್ಟು..?
ಎಲ್ಲ ಉಲ್ಟಾ ಆಗಿದೆ ಪ್ರಯಾಗ್ ರಾಜ್ ಹೋಗಿ ಗಂಗಾ ನದಿಯಲ್ಲಿ ಸ್ನಾನ ಮಾಡಿ, ಬಂದಮೇಲೆ ಪಾಪ ಜಾಸ್ತಿ ಮಾಡ್ತಿದಾನೆ. ಎಲ್ಲೋ ಒಂದು ಕಡೆ ಆತನಿಗೆ ಶಾಪ ವಿಮೋಚನೆ ಆಗಿಲ್ಲ, ಆ ಕುಂಭಮೇಳ ಸಕ್ಸಸ್ ಆಗಿಲ್ಲ ಅಂತ ಕಾಣ್ತದೆ ಸುರೇಶ್ ಗೌಡನಿಗೆ ಅಂತ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.