ವಿಜಯಪುರ: ನಾವು ದೆಹಲಿಯಿಂದ ವಿಜಯದ ಬಂಗಾರ ಕೈಯಲ್ಲಿ ಹಿಡಿದುಕೊಂಡು ಬಂದ್ದಿದ್ದೇವೆ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ. ದೆಹಲಿ ನಾಯಕರ ಭೇಟಿ ಬಳಿಕ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಯತ್ನಾಳ್, ದೆಹಲಿ ತಂಡದಲ್ಲಿ ರೆಬಲ್ಸ್ ಟೀಂಗೆ ತೀವ್ರ ಮುಖಭಂಗ, ಅವಮಾನ ಅಗಿದೆ ಎಂಬ ಮಾಧ್ಯಮಗಳ ವರದಿ ಬಗ್ಗೆ ಪ್ರತಿಕ್ರಿಯಿಸಿದರು. ವಿಜಯಪುರದಲ್ಲಿ ಮಾತನಾಡಿದಾ ಅವರು, ದೆಹಲಿ ಭೇಟಿ ಫಲಪ್ರದವಾಗಿದೆ, ನಮಗೆ ಅಪಮಾನ ಆಗಿಲ್ಲ ವಿಜಯದ ಬಂಗಾರ ಕೈಯ್ಯಲ್ಲಿ ಹಿಡಿದುಕೊಂಡು ಬಂದಿದ್ದೇವೆ. ವಿಜಯದ ಸಂಕೇತ ಹಿಡಿದುಕೊಂಡು ಬಂದಿದ್ದೇವೆ. ಕೇಂದ್ರ ನಾಯಕರು ನಮಗೆ ಸ್ಪಂದಿಸಿದ್ದಾರೆ. ನಮ್ಮ ಭೇಟಿ ಅಪಮಾನ ಮಾಡಿದರೆ ಖಂಡನೀಯ ಎಂದಿದ್ದಾರೆ.
ವಿಜಯೇಂದ್ರ ವಿರೋಧಿ ಬಣ ದಿನದಿಂದ ದಿನ ಹೆಚ್ಚುತ್ತಿದೆ. ವಿಜಯೆಂದ್ರ ಅನನುಭವಿ ತಂದೆ ಹೆಸರು ಹೇಳಿಕೊಂಡು ಬರುತ್ತಿದ್ದಾನೆ. ಆತನಿಗೆ ನಯ ವಿನಯ ಗೊತ್ತಿಲ್ಲ, ಪಕ್ಷ ಸಂಘಟನೆ ಬಗ್ಗೆ ಗೊತ್ತಿಲ್ಲ. ಯಡಿಯೂರಪ್ಪ ಸಿಎಂ ಇದ್ದಾಗ ವಸೂಲಿ ಮಾಡಿಕೊಂಡು ಬಂದಿದ್ದಾನೆ. ಯಡಿಯೂರಪ್ಪ ಸಿಎಂ ಇದ್ದಾರೆಂದು ಗೌರವ ಕೊಡುತ್ತಿದ್ದರು. ನಮ್ಮದು ಮೂರು ಬೇಡಿಕೆಗಳಿವೆ ಎಂದಿರುವ ಯತ್ನಾಳ್, ಬಿಜೆಪಿ ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತವಾಗಬೇಕು. ಭ್ರಷ್ಟ ಕುಟುಂಬದಿಂದ ಬಿಜೆಪಿ ಮುಕ್ತ ಹಾಗೂ ಹಿಂದುತ್ವ ಆಧಾರ ಮೇಲೆ ರಾಜ್ಯದಲ್ಲಿ ಬಿಜೆಪಿ ಬೆಳೆಯಬೇಕು. ಪ್ರಧಾನಿ ಮೋದಿ, ಉಪ್ರ ಸಿಎಂ ಯೋಗಿ ಮಾದರಿ ಅಧಿಕಾರ ನೀಡಬೇಕು ಎಂದಿದ್ದಾರೆ.
ದಿಲ್ಲಿ ಜನರ ಆರ್ಶೀವಾದ ಬಿಜೆಪಿಗೆ ಸಿಕ್ಕಿದೆ, ಕೇಜ್ರಿವಾಲ್ ಕ್ರೇಜ್ ಹೋಗಿದೆ: ಶೆಟ್ಟರ್!
ರಾಜ್ಯದ ಬೆಳವಣಿಗೆ ಕುರಿತು ಫೆಬ್ರವರಿ 10 ರಂದು ಕೇಂದ್ರನಾಯಕರು ಎಲ್ಲರನ್ನು ಕರೆಯುತ್ತಾರೆಂಬ ವಿಚಾರವಾಗಿ ಮಾತನಾಡಿ, ಅದರ ಬಗ್ಗೆ ಗೊತ್ತಿಲ್ಲ, ರಾಜ್ಯ ಸಹ ಉಸ್ತುವಾರಿ ರಾಜ್ಯಕ್ಕೆ ಬಂದಿದ್ದಾರೆ. ಆರ್ ಅಶೋಕ ಮಾಹಿತಿ ಹೇಳಿದ್ದಾರೆ. ಎಲ್ಲರ ಪ್ರೀತಿ ಗಳಿಸಿದವರಿಗೆ ಅಧಿಕಾರ ನಿಡಬೇಕೆಂದು ಹೇಳಿದ್ದಾರೆ. ಇದೇ ವಿಚಾರ ಮಾಜಿ ಸಚಿವ ನಿರಾಣಿ ಹೇಳಿದ್ದಾರೆ.ಬಿಜೆಪಿ ರಾಜ್ಯದಲ್ಲಿ ಹೊಸ ಪರ್ವ ಆರಂಭಕ್ಕೆ ಮಳೆ ಗಾಳಿ ಬೆಂಕಿ ಪ್ರವಾಹ ಬಿರುಗಾಳಿ ಬೀಸಿ ಹೊಸ ವಾತಾವರಣ ಬರುತ್ತದೆ. ಒಳ್ಳೆ ನಾಯಕ ಸಿಗುತ್ತಾನೆ ನಾವೆಲ್ಲ ಒಂದು ಇದ್ದೇವೆ. ಯಾವುದೇ ಜನಾಂಗ ಕೊಟ್ಟರೂ ಸಮಾಧಾನ ಇದ್ದೇವೆ. ಎಲ್ಲ ಸಮಾಜದ ಮುಖಂಡರೂ ಸಮರ್ಥರಿದ್ದಾರೆ ಎಂದರು.
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ವಿರೋಧ ಪಕ್ಷದ ಸ್ಥಾನಗಳು ಬದಲಾಗುತ್ತವೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸವದಿ ಅವರು ಮೊದಲು ತಮ್ಮ ಪಕ್ಷದ್ದು ನೋಡಿಕೊಳ್ಳಲಿ. ಕಾಂಗ್ರೆಸ್ ನಲ್ಲಿ ದೊಡ್ಡ ಕತ್ತೆ ಬಿದ್ದಿದೆ. ನಮ್ಮ ತಟ್ಟೆಯಲ್ಲಿನ ನೊಣ ನೋಡುತ್ತಿದ್ದಾರೆ. ರಾಹುಲ್ ಹಿಂದೆ ಸಿಎಂ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಹಿಂದೆ ಡಿಕೆ ಶಿವಕುಮಾರ ಓಡಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.