ಅಜ್ಜಂಪುರ: ಅಂತರಘಟ್ಟೆಯ ದುರ್ಗಾಂಬಾ ದೇವಿಯ ಜಾತ್ರಾ ಮಹೋತ್ಸವದಲ್ಲಿ ನಾ ಮುಂದು, ತಾ ಮುಂದು ಎಂದು ಎತ್ತಿನಗಾಡಿ ಓಡಿಸುವ ಭರದಲ್ಲಿ ಎತ್ತಿನಗಾಡಿಯಿಂದ ಬಿದ್ದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಗಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ದಿಲ್ಲಿ ಜನರ ಆರ್ಶೀವಾದ ಬಿಜೆಪಿಗೆ ಸಿಕ್ಕಿದೆ, ಕೇಜ್ರಿವಾಲ್ ಕ್ರೇಜ್ ಹೋಗಿದೆ: ಶೆಟ್ಟರ್!
ಪ್ರತಿವರ್ಷದಂತೆ ಈ ಬಾರಿಯೂ ಜಾತ್ರಾ ಮಹೋತ್ಸವದಲ್ಲಿ ಎತ್ತಿನ ಗಾಡಿ ಓಡಿಸುವಾಗ ಈ ಅವಘಡ ನಡೆದಿದೆ. ಗಡಿಹಳ್ಳಿಯಿಂದ ಅಂತರಘಟ್ಟೆಗೆ ತೆರಳುತ್ತಿದ್ದ ಎತ್ತಿನಗಾಡಿಯಿಂದ ರವಿ (40) ಎಂಬುವವರು ಆಯತಪ್ಪಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಾತ್ರೆಯ ಖುಷಿಯಲ್ಲಿದ್ದವರು ಕ್ಷಣ ಮಾತ್ರದಲ್ಲಿ ದುಃಖ ಸಾಗರದಲ್ಲಿ ಮುಳುಗುವಂತಾಯಿತು, ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.