ಬೆಂಗಳೂರು:-ಫೆರಿಫೆರಲ್ 2 ರಸ್ತೆ ನಿರ್ಮಾಣಕ್ಕೆ ಬಿಡಿಎ ನೋಟಿಸ್ ಕೊಟ್ಟ ಹಿನ್ನಲೆ 11 ಹಳ್ಳಿಯ 10ಸಾವಿರಕ್ಕೂ ಅಧಿಕ ನಿವಾಸಿಗಳು ಆತಂಕದಲ್ಲಿದ್ದಾರೆ.
ಇಂದು ಈ ಬಗ್ಗೆ ಕಾನೂನು ಹೋರಾಟದ ಕುರಿತು ನಿವಾಸಿಗಳು ಸಭೆ ನಡೆಸುತ್ತಿದ್ದಾರೆ..ಮಾದಾವರ ಬಳಿಯ ರಾಧಾಕೃಷ್ಣ ಕನ್ವೆನ್ಷನ್ ಹಾಲ್ ನಲ್ಲಿ ನಿವಾಸಿಗಳು ಸಭೆ ನಡೆಸಿದ್ದಾರೆ.
ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ. 2005-06 ರ ಪ್ರಾಥಮಿಕ ಆದೇಶದನ್ವಯ ಭೂಮಿ ವಶಪಡಿಸಿಕೊಳ್ಳಲು ಬಿಡಿಎ ನೋಟಿಸ್ ಕೊಟ್ಟಿದೆ.
ಆದ್ರೆ 20 ವರ್ಷಗಳ ಬಳಿಕ ಏಕಾಏಕಿ ನೋಟೀಸ್ ನಿಂದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ..