ತುಮಕೂರು:- ಸಾಮಾಜಿಕ ಜಾಲತಾಣದ ಮೂಲಕ ಪುರುಷರನ್ನು ಸಂಪರ್ಕಿಸಿ, ಹನಿಟ್ರ್ಯಾಪ್ ಮೂಲಕ ವಂಚಿಸುತ್ತಿದ್ದ ಮಹಿಳೆ ವಿರುದ್ಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಈಕೆ ಪ್ರೀತಿ, ಪ್ರೇಮ, ಮದುವೆ ಹೆಸರಿನಲ್ಲಿ ವಂಚಿಸುತ್ತಿದ್ದಳು. ಫಾರ್ಹಾಖಾನಂ ಸಾಮಾಜಿಕ ಜಾಲತಾಣದ ಮೂಲಕ ಪುರುಷರ ಸ್ನೇಹ ಸಂಪಾದಿಸುತ್ತಿದ್ದಳು. ಬಳಿಕ, ಅವರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿ ವಂಚಿಸುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.
Power Cut: ಬೆಂಗಳೂರಿನ ಈ ಏರಿಯಾ ಗಳಲ್ಲಿ ಫೆ. 9 ರಿಂದ 18ರವರೆಗೆ ಕರೆಂಟ್ ಕಟ್!
ಫಾರ್ಹಖಾನಂಳನ್ನು ತುಮಕೂರಿನ ಇದ್ರೀಸ್ ಎಂಬುವರು 2014ರಲ್ಲಿ ಮದುವೆಯಾಗಿದ್ದರು. ಮನೆಯವರೆಲ್ಲ ಸೇರಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿದ್ದರು. ಇದ್ರೀಸ್ಗೆ ಫಾರ್ಹಖಾನಂ ಎರಡನೇ ಪತ್ನಿಯಾಗಿದ್ದಳು. ಮೊದಲನೇ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಇದ್ರೀಸ್ ಎರಡನೇ ಮದುವೆ ಮಾಡಿಕೊಂಡಿದ್ದನು. ಮದುವೆಯಲ್ಲ ಎಲ್ಲ ಖರ್ಚನ್ನು ಇದ್ರೀಸ್ ನೋಡಿಕೊಂಡಿದ್ದನು. ಫಾರ್ಹನಾ ಖಾನಂಗೆ 1.42 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣ ನೀಡಿದ್ದರು
27 ದಿನ ಸಂಸಾರ ಮಾಡಿದ್ದ ಫಾರ್ಹಖಾನಂ ಬಳಿಕ ವರಸೆ ಬದಲಿಸಿದ್ದಾಳು. ಇದ್ರೀಸ್ಗಿಂತ ಮೊದಲು ಜಾಕೀರ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದ ಫಾರ್ಹಖಾನಂ ಮೊದಲನೇ ಪತಿ ಜೊತೆ ಕದ್ದು ಮುಚ್ಚಿ ಮಾತನಾಡುತ್ತಿದ್ದಳು.
ಈ ವಿಚಾರ ಗೊತ್ತಾಗಿ ಇದ್ರೀಸ್ ಪ್ರಶ್ನೆ ಮಾಡಿದ್ದರು. ಈ ವೇಳೆ ಗಲಾಟೆ ಸಂಭವಿಸಿತ್ತು. ಫಾರ್ಹಾನ ಖಾನಂ ಗಲಾಟೆ ಮಾಡಿ ಇದ್ರೀಸ್ನನ್ನೇ ಮನೆಯಿಂದ ಹೊರಗೆ ಓಡಿಸಿದ್ದಳು. ಫಾರ್ಹಖಾನಂ ವಿರುದ್ಧ ಇದ್ರೀಸ್ ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮದುವೆ ಹಣ ಹಾಗೂ ಚಿನ್ನಾಭರಣ ವಾಪಸ್ ಕೊಡುವಂತೆ ಇದ್ರೀಸ್ ಕೇಳಿದ್ದರು.
ಫಾರ್ಹಖಾನಂ ಗುಂಡಾಗಳನ್ನು ಕಳುಹಿಸಿ ಇದ್ರೀಸ್ ಮೇಲೆ ಹಲ್ಲೆ ಮಾಡಿಸಿದ್ದಳು. ಇನ್ನೊಂದೆಡೆ ಪೊಲೀಸರಿಂದಲ್ಲೂ ಇದ್ರೀಸ್ಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿಬಂದಿದೆ.