ಬೆಂಗಳೂರು : ಇತ್ತೀಚೆಗಷ್ಟೇ ತೆರೆ ಕಂಡ ದುಲ್ಕರ್ ಸಲ್ಮಾನ್ ಅಭಿನಯದ ಲಕ್ಕಿ ಬಾಸ್ಕರ್ ಚಿತ್ರ ಅದೆಷ್ಟು ಮಿಡಲ್ ಕ್ಲಾಸ್ ಜನರ ಆಸೆಯನ್ನು ಎತ್ತಿ ತೋರಿಸುತ್ತದೆ. ಇದೀಗ ಅದೇ ಮಾದರಿಯಲ್ಲಿ ಹಣವನ್ನು ಕಳ್ಳತನ ಮಾಡಲು ಹೋಗಿ ಐವರು ಯುವಕರು ಜೈಲುಪಾಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಲಕ್ಕಿ ಬಾಸ್ಕರ್ ಚಿತ್ರದಲ್ಲಿ ಬಾಸ್ಕರ್ ತನ್ನ ಬ್ಯಾಂಕ್ ನಲ್ಲಿ ಯಾವ ರೀತಿ ಹಣ ಕದ್ದು ಅದನ್ನು ಉಪಯೋಗಿಸಿ ವಾಪಸ್ ಹಾಗೆ ತಂದು ಇಡುತ್ತಿದ್ದನೋ ಅದೇ ರೀತಿ ಮಾಡಲು ಹೋಗಿ ಎಟಿಎಂ ನಲ್ಲಿ ಹಣ ಹಾಕೊ ಕೆಲಸ ಮಾಡ್ತಿದ್ದ ಐವರು ಆರೋಪಿಗಳನ್ನು ಸಿಲಿಕಾನ್ ಸಿಟಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶಿವು, ಸಮೀರ್, ಮನೋಹರ್, ಗಿರೀಶ್, ಜಗ್ಗೇಶ್, ಜಸ್ವಂತ್ ಎಂದು ಗುರುತಿಸಲಾಗಿದ್ದು, ಆರೋಪಿಗಳು ಸೆಕ್ಯೂರ್ ವ್ಯಾಲ್ಯೂ ಪ್ರೈವೇಟ್ ಲಿಮಿಟೆಡ್ ಏಜೆನ್ಸಿಯಲ್ಲಿ ಎಟಿಎಂ ಗಳಿಗೆ ಹಣ ತುಂಬಿಸುವ ಕೆಲಸವನ್ನು ಮಾಡಿಕೊಂಡಿದ್ದರು.
ಆರೋಪಿಗಳಲ್ಲಿ ಕೆಲವರು ಕ್ಯಾಶ್ ಆಫಿಸರ್ ಆಗಿ ಕೆಲಸ ಮಾಡುತ್ತಿದ್ದರೆ, ಕೆಲವರು ಎಟಿಎಂ ನಲ್ಲಿ ಹಣ ಹಾಕೊ ಕೆಲಸ ಮಾಡುತ್ತಿದ್ದರು, ಇನ್ನೂ ಇಬ್ಬರು ರಿಪೇರಿ ಇದ್ದರೆ ಸರಿ ಪಡಿಸೊ ಕೆಲಸ ಮಾಡುತ್ತಿದ್ದರು, ಈ ವೇಳೆ ಲಕ್ಕಿ ಬಾಸ್ಕರ್ ಚಿತ್ರದಿಂದ ಪ್ರೇರಿತರಾಗಿ ಎಟಿಎಂ ನಿಂದ ಹಣ ತೆಗೆದು ಸ್ವಂತಕ್ಕೆ ಬಳಸಿಕೊಂಡಿದ್ದಾರೆ.
ಹಣ ಡಬಲ್ ಮಾಡೊ ಪ್ಲಾನ್ ಮಾಡಿಕೊಂಡಿದ್ದ ಖದೀಮರು, ಆಡಿಟಿಂಗ್ ಮಾಡುವ ವೇಳೆ ಗೊತ್ತಾಗಬಾರದು ಎಂದು ಬೇರೆ ಎಟಿಎಂ ನಿಂದ ವಾಪಸ್ಸು ಹಣ ತಂದು ಹಾಕೊ ಪ್ಲಾನ್ ಮಾಡುತ್ತಿದ್ದರು, ಹೀಗೆ ಒಟ್ಟು ನಾಲ್ಕೈದು ಎಟಿಎಂ ನಿಂದ ಬರೋಬ್ಬರಿ 43.76 ಲಕ್ಷ ಹಣ ಎಗರಿಸಿದ್ದರು.
ಈ ವೇಳೆ ಹಣ ಹಂಚಿಕೊಳ್ಳುವ ವೇಳೆ ಆರೋಪಿಗಳ ನಡುವೆ ಗಲಾಟೆ ಆಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಬಂಧಿತರಿಂದ ಒಟ್ಟು 52 ಲಕ್ಷ ನಗದು,40 ಲಕ್ಷ ಮೌಲ್ಯದ ಮೂರು ಕಾರು ವಶಕ್ಕೆ ಪಡೆಯಲಾಗಿದೆ, ಅಷ್ಟೇ ಅಲ್ಲದೆ ಕದ್ದ ಹಣದಿಂದ ಮನೆಯವರ ಹೆಸರಿನಲ್ಲಿ ಮೂರು ಕಾರು ಖರೀದಿಸಿದ್ದರು ಎನ್ನಲಾಗಿದೆ. ಸದ್ಯ ಆರೋಪಿಗಳನ್ನು ಬಂಡಿಸಿ ವಿಚಾರಣೆ ನಡೆಸಲಾಗುತ್ತಿದೆ.