ಕಲಬುರಗಿ : ಪರಸ್ತ್ರೀ ಹಿಂದೆ ಬಿದ್ದು ಸಂಸಾರ ನಿರ್ಲಕ್ಷ್ಯ ಮಾಡಿದ ಪತಿಗೆ ಖುದ್ದು ಹೆಂಡತಿಯೇ ಸುಪಾರಿ ಕೊಟ್ಟು ಕಾಲು ಮುರಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ವೆಂಕಟೇಶ್ ಎಂಬಾತ ಎರಡು ಕಾಲು ಮುರಿತಕ್ಕೆ ಒಳಗಾದ ಪತಿ. ಗಾಜಿಪುರ ಬಡಾವಣೆ ನಿವಾಸಿ ಉಮಾದೇವಿ ಈ ಕೃತ್ಯ ಎಸಗಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಉಮಾದೇವಿ ಜೊತೆಗೆ ಕಾಲು ಮುರಿದ ಆರೀಫ್, ಮನೋಹರ್, ಸುನೀಲ್ ಎಂಬ ಮೂವರು ಆರೋಪಿಗಳನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಮುರಿದುಕೊಂಡ ಗಂಡ ಇದೀಗ ಹಾಸಿಗೆ ಹಿಡಿದಿದ್ದು ಬ್ರಹ್ಮಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಖತರನಾಕ್ ಹೆಂಡತಿ ಉಮಾದೇವಿ ಜೊತೆ ಮೂವರು ಆರೋಪಿಗಳು ಲಾಕ್ ಆಗಿದ್ದಾರೆ. ಕೆಲ ತಿಂಗಳಿನಿಂದ ವೆಂಕಟೇಶ್ ಓರ್ವ ಮಹಿಳೆಯ ಜೊತೆಗೆ ಸಲುಗೆಯಿಂದ ವರ್ತಿಸುತ್ತಿದ್ದ, ಇದೇ ವಿಚಾರಕ್ಕೆ ಪತಿಪತ್ನಿ ನಡುವೆ ಗಲಾಟೆಯಾಗಿತ್ತು. ತನ್ನ ಮಾತು ಕೇಳದೇ ಮಹಿಳೆಯ ಜೊತೆಗೆ ಸಲುಗೆಯಿಂದ ಇದ್ದದ್ದಕ್ಕೆ ಕೋಪಗೊಂಡ ಪತ್ನಿ ಉಮಾದೇವಿ ಸುಪಾರಿ ನೀಡಿ ವೆಂಕಟೇಶನ ಎರಡು ಕಾಲುಗಳನ್ನ ಮುರಿಸಿದ್ದಾಳೆ. ಸದ್ಯ ಉಮಾದೇವಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಬಂಧಿಸಿರುವ ಬ್ರಹ್ಮಪುರ ಠಾಣೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.