ಮೈಸೂರು : ಸಿಎಂ ಸಿದ್ದರಾಮಯ್ಯ ವಿರುದ್ದ ಮುಡಾ ಪ್ರಕರಣವನ್ನ ಸಿಬಿಐಗೆ ವರ್ಗಾವಣೆ ಮಾಡಬೇಕೆಂಬ ಎಂಬ ಅರ್ಜಿ ವಜಾ ಮಾಡಿರುವ ಹೈಕೋರ್ಟ್ ಪ್ರಕರಣವನ್ನು ಲೋಕಾಯುಕ್ತದಿಂದ ತನಿಖೆ ನಡೆಸುವಂತೆ ಆದೇಶ ನೀಡಿದೆ . ಇದರ ಬಗ್ಗೆ ದೂರುದಾರರ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯಿಸಿದ್ದು, ನಮ್ಮ ಹೋರಾಟಕ್ಕೆ ಹಿನ್ನೆಡೆಯಾಗಿದೆ . ಇದರಿಂದ ವಿಚಲಿತನಾಗುವ ಹಾಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮ್ಮ ಹೋರಾಟ ಮುಂದುವರೆಸುತ್ತೇವೆ. ಮುಂದಿನ ವಾರ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನೆ ಮಾಡಲಾಗುತ್ತದೆ ಹಾಗೂ ಈ ಪ್ರಕರಣವನ್ನು ಸಿಬಿಐಗೆ ಕೊಡಿಸುವ ಪ್ರಯತ್ನದ ಹೋರಾಟವನ್ನು ಮುಂದುವರೆಸಿಕೊಂಡು ಹೋಗುತ್ತೀವಿ. ಕೋರ್ಟ್ ಇಂದಿನ ತೀರ್ಪಿನಲ್ಲಿ ಯಾವ ಅಂಶಗಳನ್ನು ಪರಿಗಣಿಸಿ ನಮ್ಮ ಅರ್ಜಿ ತಿರಸ್ಕಾರ ಮಾಡಿದೆ ಹಾಗೂ ಆ ಅಂಶಗಳಿಗೆ ಯಾವ ರೀತಿ ಪೂರಕ ದಾಖಲೆಗಳನ್ನು ನೀಡಬೇಕು ಎಂದು ನಮ್ಮ ವಕೀಲರ ಜತೆ ಚರ್ಚಿಸಿ , ನಂತರ ಈ ತೀರ್ಪಿನ ವಿರುದ್ದ ಸುಪ್ರೀಂ ಅಂಗಳಕ್ಕೆ ಹೋಗುತ್ತೇವೆ ಎಂದರು .
ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ ; ಮುಡಾ ಪ್ರಕರಣ ಸಿಬಿಐಗೆ ವಹಿಸಲು ಕೋರ್ಟ್ ನಕಾರ
ನಾನು ತೀರ್ಪು ಓದಿಲ್ಲ
ಇನ್ನು ಕೋರ್ಟ್ ನೀಡಿರುವ ತೀರ್ಪುನ್ನು ಇನ್ನೂ ಓದಿಲ್ಲ . ಲೋಕಾಯುಕ್ತ ಏಕಪಕ್ಷೀಯವಾಗಿ ವರದಿ ನೀಡಿದೆ . ನಾವು ದೂರು ಕೊಡುವ ಮುನ್ನ ಸ್ವಯಂ ಪ್ರರೀತವಾಗಿ ದೂರು ದಾಖಲು ಮಾಡಿಕೊಂಡಿತು. ಆದರೆ ಆ ವಿಚಾರವನ್ನು ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ಗೆ ತಿಳಿಸಿತು. ನಂತರ ಸಚಿವರ ಬಂದು ದಾಖಲೆಗಳನ್ನು ತೆಗೆದುಕೊಂಡು ಹೋದರು . ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆ ನಡೆಸಿತು . ಲೋಕಾಯುಕ್ತ ಆರೋಪಿಗಳೊಂದಿಗೆ ಶಾಮೀಲಾಗಿದೆ ಎಂದು ತಿಳಿದು ಬಂದಿರುತ್ತದೆ . ಮುಂದಿನ ವಾರದಲ್ಲಿ ನಾವು ಸುಪ್ರೀಂಗೆ ಅರ್ಜಿ ಸಲ್ಲಿಸುತ್ತೇವೆ . ಇಲ್ಲಿ ನಾವು ಕಾಯುವ ಪ್ರಶ್ನೆಯ ಬರುವುದಿಲ್ಲ ಎಂದರು.