ಬೆಂಗಳೂರು :- ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಭಿನ್ನಮತ ಸದ್ಯಕ್ಕೆ ಶಮನ ಆಗೋ ಲಕ್ಷಣಗಳಿಲ್ಲ. ವಿಜಯೇಂದ್ರ ವಿರುದ್ಧ ಸಿಡಿದೆದ್ದು ವರಿಷ್ಠರಿಗೆ ದೂರು ನೀಡಲು ತೆರಳಿದ್ದ ಟೀಂ ಬರಿಗೈಲಿ ವಾಪಸ್ ಆಗಿದೆ..ಫೆಬ್ರವರಿ ೧೦ ರವರೆಗೆ ಕಾದು ನೋಡಿ ಸಿಹಿ ಸುದ್ದಿ ಸಿಗಲಿದೆ ಎಂದು ಮೇಸೇಜ್ ನೀಡಿದೆ. ತಮ್ಮ ವಿರುದ್ಧ ಸಿಡಿದೆದ್ದಿರುವ ಭಿನ್ನರ ಬಣಕ್ಕೆ ವಿಜಯೇಂದ್ರ ಬಣವೂ ಟಕ್ಕರ್ ಕೊಟ್ಟಿದೆ.
ಯೆಸ್, ಹಲವು ತಿಂಗಳಿಂದ್ಲೂ ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಬಣ ರಾಜಕೀಯ ಶಮನವಾಗ್ತಿಲ್ಲ. ಯತ್ನಾಳ್ ಹಾಗೂ ವಿಜಯೇಂದ್ರ ಟೀಂ ನಡುವೆ ಉಧ್ಭವಿಸಿರುವ ರಾಜಕೀಯ ಸಂಘರ್ಷವೂ ಮಿತಿಮೀರಿ ಹೋಗಿದೆ. ಇದ್ರ ನಡುವೆ ತಟಸ್ಥ ಬಣವೂ ರಚನೆಯಾಗಿದ್ದು, ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗ್ತಿದೆ.ಸರ್ಕಾರದ ಲೋಪದೋಷಗಳ ವಿರುದ್ಧ ಹೋರಾಟ ರೂಪಿಸಬೇಕಾದವರು ತಮ್ಮೊಳಗೆ ಅಂತರಿಕ ಸಂಘರ್ಷವನ್ನ ತಂದುಕೊಂಡಿದ್ದಾರೆ. ಇತ್ತ ಮಾತಿನ ಮೂಲಕ ಇವರೂ ಬಗೆಹರಿಸಿಕೊಳ್ತಿಲ್ಲ.. ಹೈಕಮಾಂಡ್ ಕೂಡ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸ್ತಿಲ್ಲ. ಹೀಗಾಗಿ ಈ ಬಣ ಸಂಘರ್ಷ ಮತ್ತಷ್ಟು ಹೆಚ್ಚಾಗ್ತಿದೆ. ಇದು ಆಡಳಿತ ಪಕ್ಷ ಕಾಂಗ್ರೆಸ್ ಗೆ ದೊಡ್ಡ ವರವಾಗಿದೆ. ಇತ್ತ ಬಹಳ ದಿನಗಳ ತರ ಮೌನ ಮುರಿದ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ ರೆಬೆಲ್ಸ್ ಗೆ ಖಡಕ್ ಸಂದೇಶ ರವಾನೆ ಮಾಡಿದ್ದಾರೆ…
ಇನ್ನು ದೆಹಲಿಯಿಂದ ಬರಿಗೈಲಿ ವಾಪಸ್ ಆಗಿರುವ ಯತ್ನಾಳ್ ಆಂಡ್ ರಮೇಶ್ ಜಾರಕಿಹೊಳಿ ಟೀಂ ವಿಜಯೇಂದ್ರ ಹಾಗೂ ಯಡಿಯೂರಪ್ಪನವರ ವಿರುದ್ಧ ಬೆಂಕಿಯುಗುಳಿದೆ..ಎಲ್ಲವನ್ನ ವರಿಷ್ಠರಿಗೆ ತಿಳಿಸಿದ್ದೇವೆ, ಫೆಬ್ರವರಿ ೧೦ ರವರೆಗೆ ಕಾದು ನೋಡಿ, ನಿಮಗೆಲ್ಲರಿಗೆ ಸಿಹಿ ಸುದ್ದಿ ಸಿಗಲಿದೆ ಎಂದು ಮಾಧ್ಯಮಗಳಿಗೆ ವಿವರಿಸಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಸೋದು ಪಕ್ಕಾ ಅಂತ ವಿಶ್ವಾಸದಲ್ಲಿದೆ.ಇತ್ತ ವಿಜಯೇಂದ್ರ ಬಣವೂ ಎಲ್ಲವನ್ನೂ ನೋಡ್ತೇವೆ, ಅದೇನು ಮಾಡ್ತಿರೋ ಮಾಡಿ ಅನ್ನೋ ಮೆಸೇಜ್ ರವಾನಿಸಿದೆ. ಫೆಬ್ರವರಿ ೧೨ ರಂದು ನಾವು ಬೆಂಗಳೂರು ಹೊರವಲಯದಲ್ಲಿ ಸಭೆ ನಡೆಸ್ತೇವೆ..ಮುಂದಿನ ನಿರ್ಧಾರದ ಬಗ್ಗೆ ತಿಳಿಸ್ತೇವೆಂದು ಭಿನ್ನರಿಗೆ ತಿರುಗೇಟು ಕೊಟ್ಟಿದೆ.ಅದ್ರಲ್ಲೂ ಯಡಿಯೂರಪ್ಪನವರ ವಿರುದ್ಧ ಮಾತನಾಡಿರೋದಕ್ಕೆ ತೀರ್ವವಾಗಿ ಆಕ್ರೋಶ ಹೊರಹಾಕಿದ ವಿಜೇಯಂದ್ರ ರೆಬೆಲ್ಸ್ ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ..
ಯಡಿಯೂರಪ್ಪನವರ ವಿರುದ್ಧ ಭಿನ್ನಮತೀಯರು ಬಹಿರಂಗವಾಗಿಯೇ ತೇಜೋವಧೆ ಮಾಡ್ತಿದ್ರೂ ಹಿರಿಯರು ಸೈಲೆಂಟ್ ಆಗಿದ್ದಾರೆ.ಇದಕ್ಕೆ ವಿಜಯೇಂದ್ರ ತೀವ್ರ ಅಕ್ರೋಶ ಹೊರ ಹಾಕಿದ ರಾಜ್ಯಾಧ್ಯಕ್ಷ.ರು, ನನ್ನ ಬಗ್ಗೆ ನೀವು ಏನು ಬೇಕಾದ್ರೂ ಮಾತನಾಡಿ, ಆದ್ರೆ ರಾಜ್ಯದಲ್ಲಿ ಹೋರಾಟ ಮಾಡಿ ಪಕ್ಷವನ್ನ ಕಟ್ಟಿದ ಯಡಿಯೂರಪ್ಪನವರ ಬಗ್ಗೆ ಮಾತನಾಡಿದ್ರೆ ಹುಷಾರ್..ಎಲ್ಲಾದಕ್ಕೂ ಒಂದು ಲಿಮಿಡ್ ಇದೆ , ನಾನು ಸುಮ್ಮನೆ ಕೂರಲ್ಲ ಅನ್ನೋ ವಾರ್ನಿಂಗ್ ಮಾಡಿದ್ದಾರೆ. ಇಷ್ಟೆಲ್ಲಾ ಅವರು ಮಾತನಾಡ್ತಿದ್ರೂ ತಟಸ್ಥರು ಸುಮ್ಮನಿರುವುದೇಕೆಂದು ಪರೋಕ್ಷವಾಗಿಯೇ ಕುಟುಕಿದ್ದಾರೆ..ದಿನಬೆಳಗಾದ್ರೆ ಯಡಿಯೂರಪ್ಪನವರನ್ನ ಅಪಮಾನಿಸುವುದು ಸರಿಯಲ್ಲ, ಈಗಲಾದ್ರೂ ನಾನು ವಿನಂತಿ ಮಾಡ್ತೇನೆ ಅವರ ಬಾಯಿಗೆ ಬೀಗ ಹಾಕಿ ಅಂತ ನೇರವಾಗಿಯೇ ಸಂದೇಶ ರವಾನಿಸಿದ್ದಾರೆ.ಇನ್ನು ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಸಿಎಂ ಬೊಮ್ಮಾಯಿ,ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಬೇಸರ ತರಿಸಿದೆ ಎಂದಿದ್ದಾರೆ.
ಇನ್ನು ಬಿಎಸ್ ವೈ ಆಪ್ತ ಮಾಜಿ ಸಚಿವ ರೇಣುಕಾಚಾರ್ಯ ಯತ್ನಾಳ್ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.. ಹರಿಹರ ಶಾಸಕ ಬಿ.ಪಿ.ಹರೀಶ್, ಕುಮಾರಬಂಗಾರಪ್ಪ ವಿರುದ್ಧವೂ ತಿರುಗಿಬಿದ್ದಿದ್ದಾರೆ. ಯತ್ನಾಳ್, ಜೀಪ್,ಟಿಪ್ಪರ್ ಓಡಿಸ್ತಿದ್ದವರು.. ಇವತ್ತು ಈ ಸ್ಥಾನಕ್ಕೆ ಬಂದವರು.. ಇದೇನು ನಮಗೆ ಗೊತ್ತಿಲ್ವೇನ್ರೀ. ವಿಜಯಪುರದ ಕಾರ್ಯಕರ್ತರನ್ನ ಕೇಳಿದ್ರೆ ಸಾಕು ಅವರ ಇತಿಹಾಸವನ್ನಬಿಚ್ಚಿಡ್ತಾರೆ ಅಂತ ಏಕವಚನದಲ್ಲೇ ಜಾಡಿಸಿದ್ದಾರೆ.. ಕುಮಾರ್ ಬಂಗಾರಪ್ಪ ಕಾಂಗ್ರೆಸ್ ನಿಂದ ಬಂದವರು, ಇಲ್ಲಿಗೆ ಬಂದ್ರೂ ಅವರ ಪರವಾಗೇ ಕೆಲಸ ಮಾಡಿದವ್ರು, ಬಿಪಿ ಹರೀಶ್ ಗೆ ಟಿಕೆಟ್ ಕೊಡಿಸಿದ್ದೇ ನಾವು,ಯಡಿಯೂರಪ್ಪ ಆಶೀರ್ವಾದದಿಂದ್ಲೇ ಗೆದ್ದಿದ್ದು.. ಈಗ ಅವರ ವಿರುದ್ಧವೇ ಮಾತನಾಡ್ತಾರೇ.. ಫೆಬ್ರವರಿ ೧೨ ರಂದು ನೋಡಿ ನಾವು ಸಭೆ ಮಾಡಿ ಏನು ತೀರ್ಮಾನ ಮಾಡ್ತೇವೆ ಅಂತ ಟಾಂಗ್ ಕೊಟ್ಡಿದ್ದಾರೆ..
ಒಟ್ನಲ್ಲಿ,ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಬಣ ಸಂಘರ್ಷ ಮತ್ತಷ್ಟು ಜೋರಾಗ್ತಿದೆ.ಅತ್ತ ವರಿಷ್ಟರೂ ಮಧ್ಯ ಪ್ರವೇಶ್ತಿಲ್ಲ. ಇತ್ತ ಸಮಸ್ಯೆ ಸರಿಪಡಿಸ್ತಿಲ್ಲ. ಇದ್ರ ನಡುವೆ ಫೆಬ್ರವರಿ ೧೦ ರ ನಂತರ ನೋಡಿ ವಿಜಯೇಂದ್ರ ಬದಲಾಗ್ತಾರೆ ಅಂತ ಭಿನ್ನರ ಟೀಂ ಖುಷಿಯಲ್ಲಿದೆ..ಇತ್ತ ನಿಮ್ಮ ಎಲ್ಲಾ ನಿರೀಕ್ಷೆಗಳು ಮಣ್ಣುಪಾಲಾಗುತ್ವೆ ನೋಡಿ ಅಂತ ವಿಜಯೇಂದ್ರ ಬಣವೂ ತಿರುಗು ಬಿದ್ದಿದೆ..